ವಧುವಿನ ಕೊರಳಲ್ಲಿ ಪುಷ್ಪಹಾರ ಹಾಕಿದ್ದೇ ತಡ ವರ ‘ಔಟ್ ಆಫ್ ಕಂಟ್ರೋಲ್’! ಎಲ್ಲರ ಮುಂದೆಯೇ ಶುರು ಮಾಡಿದ ಈ ಕೃತ್ಯ…
ಸದ್ಯ ಭಾರತದಲ್ಲಿ ಮದುವೆಗಳ ಸೀಜನ್ ಜೋರಾಗಿ ನಡೆದಿದೆ. ಹೀಗಾಗಿ ಮದುವೆಯ ಮಂಟಪದಲ್ಲಿ ಘಟಿಸಿದ ವಿಶೇಷ ಪ್ರಸಂಗಗಳ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸಂಚಲನ ಮೂಡಿಸಿವೆ. ಅಲ್ಲಿ ನಡೆದ ವಿಶೇಷ ಪ್ರಸಂಗಗಳು ತುಂಬಾ ದೊಡ್ಡ ದೊಡ್ಡ ಸುದ್ದಿಗಳೇ ಆಗುತ್ತಿವೆ. ಈಗ ಇದೇ ರೀತಿಯ ಮದೇವಯಲ್ಲಿ ನಡೆದ ವಿಶೇಷ ಪ್ರಸಂಗದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ವಧು ಮತ್ತು ವರ ಇಬ್ಬರು ಸ್ಟೇಜ್ ಮೇಲೆ ನಿಂತಿದ್ದಾರೆ. ಇಬ್ಬರ ಕೈಯಲ್ಲಿ ಹೂಮಾಲೆ ಇದೆ. ಅದು ಒಬ್ಬರು ಇನ್ನೋಬ್ಬರ ಕೊರಳಿಗೆ ಹಾಕಲಿದ್ದಾರೆ. ವಧು ವರನ ಕೊರಳಲ್ಲಿ ಹೂಮಾಲೆಯನ್ನು ಹಾಕುತ್ತಾಳೆ, ನಂತರ ವರ ವಧುವಿನ ಕೊರಳಿಗೆ ಹೂಮಾಲೆ ಹಾಕುತ್ತಲೇ ವರ ಒಮ್ಮೆಲೆ ಔಟ್ ಆಫ್ ಕಂಟ್ರೋಲ್ ಆಗಿ ಬಿಡುತ್ತಾನೆ. ಮತ್ತು ವಿಡಿಯೋದಲ್ಲಿ ಟ್ವಿಸ್ಟ್ ಅಲ್ಲಿಯೇ ಸ್ಟಾರ್ಟ್ ಆಗುತ್ತದೆ. ವರ ಮದುವೆಯಾದ ಖುಷಿಯಲ್ಲಿ ಮೈಮರೆತು ಹುಚ್ಚೆದ್ದು ಕುಣಿಯಲು ಶುರು ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಶೂಟ್ ಆಗುತ್ತದೆ.
ವರ ತನ್ನ ಮದುವೆಯಲ್ಲಿ ಇಷ್ಟೊಂದು ಖುಷಿಯಿಂದ ಕುಣಿಯುತ್ತಿರುವದನ್ನು ನೋಡುವದು ಇದೇ ಮೊದಲು. ಇದಕ್ಕೂ ಮೊದಲು ವರಗಳು ಕುಣಿದಿದ್ದಾರೆ, ಆದರೆ ಈ ರೀತಿಯಾಗಿ ಕುಣಿದದ್ದು ಇಲ್ಲಿಯವರೆಗೆ ಕಂಡು ಬಂದಿಲ್ಲ.
ವಿಡಿಯೋ ನೋಡಿ
34 ಸೆಕೆಂಡುಗಳ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. ತನ್ನ ಮನಸ್ಸಿಗೆ ಹಿಡಿಸಿದ ಪತ್ನಿಯೇ ಸಿಕ್ಕಿದ್ದಾಳೆಂದು ವರ ತುಂಬಾ ರೋಮಾಂಚನ ಹೊಂದಿದ್ದಾನೆ. ಆತ ಅಂದುಕೊಂಡ ಈ ಖುಷಿ, ರೋಮಾಂಚನ ಕೊನೆಯವರೆಗೂ ಇದ್ದರೆ ಸಾಕು ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.