ಇತ್ತ ಪುರೋಹಿತರು ವಧುವಿಗೆ ಕರೆಯುತ್ತಿದ್ದರು ಅಕ್ಷತೆಗೆ, ವರ ನಿಂತ ದಾರಿ ಕಾಯುತ್ತ; ಅತ್ತ ವಧು ಮಾತ್ರ ರೂಮ್ ನಲ್ಲಿ ನಿಶ್ಚಿಂತೆಯಿಂದ…
ಸದ್ಯ ಭಾರತದಲ್ಲಿ ಎಲ್ಲಿ ನೋಡಿದರೂ ಮದುವೆಯ ಸಂಭ್ರಮಗಳು ಕಂಡುಬರುತ್ತಿವೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಮದುವೆಯಲ್ಲಿ ನಡೆದ ವಿವಿಧ ಪ್ರಸಂಗಗಳ ರೋಚಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಈಗ ಮದುವೆಯಲ್ಲಿ ನಡೆದ ಮತ್ತೊಂದು ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮದುವೆಯಲ್ಲಿ ಅಕ್ಷತೆಯ ಮುಹೂರ್ತದ ಸಮಯದಲ್ಲಿ ಮದುಮಗಳು ಮಾಡಿದ್ದೇನು? ನೋಡಿ…
ಮದುವೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ನಿಯೋಜನಬದ್ಧವಾಗಿರುತ್ತವೆ. ಎಲ್ಲ ವಿಧಿವಿಧಾನಗಳು ಸಾಂಗೋಪಾಂಗವಾಗಿ ಸಮಯಕ್ಕೆ ಸರಿಯಾಗಿ ನಡೆಯುವುದು ತುಂಬಾ ಅವಶ್ಯಕವಾಗಿರುತ್ತದೆ. ನಮ್ಮ ಹಿರಿಯರು ಮದುವೆಯ ಪ್ರತಿಯೊಂದು ವಿಧಿವಿಧಾನಗಳು ಸಮಯಕ್ಕೆ ಸರಿಯಾಗಿ ನಡೆಯುವಂತೆ ಮುಂಜಾಗ್ರತೆ ವಹಿಸುತ್ತಾರೆ. ಆದರೆ ಈ ವಿಡಿಯೋದಲ್ಲಿ ನೋಡಿದರೆ ಮದುಮಗಳು ತನ್ನ ಮದುವೆಯ ದಿವಸವೇ ಅಲ್ಲಲ್ಲ, ಮದುವೆಯ ಮುಹೂರ್ತದ ಸಮಯದಲ್ಲಿಯೇ ಗಾಢವಾದ ನಿದ್ರೆಗೆ ಜಾರಿದ್ದಾಳೆ. ವರನ ಮೆರವಣಿಗೆ ಕಲ್ಯಾಣ ಮಂಟಪದ ಬಾಗಿಲಿಗೆ ಬಂದು ನಿಂತಿದೆ. ಆದರೆ ಅಲ್ಲಿ ಮದುಮಗಳ ಸದ್ದೇ ಇಲ್ಲ. ಅತ್ತ ಪುರೋಹಿತರು ಮುಹೂರ್ತದ ಸಮಯ ಮೀರಿ ಹೋಗುತ್ತಿದೆ ಎಂದು ಮದುಮಗಳಿಗೆ ಕರೆಯುತ್ತಿದ್ದರೆ, ಇತ್ತ ಮದುಮಗಳು ಮದುವೆಯ ಮಂಟಪದ ಕೋಣೆಯಲ್ಲಿ ನಿಶ್ಚಿಂತೆಯಿಂದ ಮಲಗಿರುವ ದೃಶ್ಯ ಕಂಡುಬಂದಿದೆ. ಇನ್ನೊಂದು ಕಡೆ ವರ ತನ್ನ ಮದುವೆಯಾಗುವ ಪತ್ನಿಯ ದಾರಿ ಕಾಯುತ್ತಾ ನಿಂತಿದ್ದಾನೆ. ಜೀನ್ಯೂಸ್ ಈ ಸಂದರ್ಭದ ವರದಿಯನ್ನು ನೀಡಿದೆ.
ಮದುಮಗಳು ತನ್ನದೇ ಮದುವೆಯಲ್ಲಿ ನಿಶ್ಚಿಂತೆಯಿಂದ ಮಲಗಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದೆ. ಜನರು ಈ ತಮಾಷೆಯ ವಿಡಿಯೋದ ಅನಂದ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ.
ವರನ ಮೆರವಣಿಗೆ ಬಾಗಿಲಿಗೆ ಬಂದು ನಿಂತಾದ ಮೇಲೆ, ವರ ವಧುವಿನ ದಾರಿ ಕಾಯುತ್ತ ನಿಂತ. ಇತ್ತ ಮಾತ್ರ ಮದುಮಗಳು ತನ್ನದೇ ಮದುವೆಯ ಎಲ್ಲ ಗದ್ದಲವನ್ನೂ ಜಂಜಾಟವನ್ನು ಮರೆತು ಆರಾಮಾಗಿ, ನಿಶ್ಚಿಂತೆಯಿಂದ ಮಲಗಿ ಆನಂದವನ್ನು ಪಡೆಯುತ್ತಿರುವ ದೃಶ್ಯ ತುಂಬಾ ರೋಚಕವಾಗಿದೆ.
ವಿಡಿಯೋ ನೋಡಿ
View this post on Instagram