ಮೂಡ್ ಬಂದಾಗ ಮನದಲ್ಲೇ ಅದುಮಿಟ್ಟುಕೊಂಡರೆ ಹೇಗೆ? ರೈಲ್ವೆ ಸ್ಟೇಷನ್ ನಲ್ಲಿಯೇ ಬಂತು ಮೂಡ್; ಮಹಿಳೆಯ ಡಾನ್ಸ್ ಶುರು…

ಸದ್ಯದ ಜಗತ್ತು ಸೋಶಿಯಲ್ ಮೀಡಿಯಾದಲ್ಲಿ ಹಾಸುಹೊಕ್ಕಾಗಿದೆ. ಏನಾದರೂ ವಿಶೇಷ ಸುದ್ದಿಗಳು ನೋಡುನೋಡುವಷ್ಟರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತವೆ. ಈಗ ರೈಲ್ವೆ ಸ್ಟೇಷನ್ ನಲ್ಲಿ ಡಾನ್ಸ್ ಮಾಡಿದ ಮಹಿಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಮಹಿಳೆಯು ಬಾಲಿವುಡ್ ನಾಯಕ ಗೋವಿಂದ ಅವರ ಹಾಡಿಗೆ ರೈಲ್ವೆ ಸ್ಟೇಷನ್ ನಲ್ಲಿ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ. ಮಹಿಳೆಯ ಡಾನ್ಸ್ ನೋಡಿ ಸ್ಟೇಷನ್ನಲ್ಲಿ ನಿಂತ ಇನ್ನಿತರ ಪ್ರವಾಸಿಗರೂ ಸಹ ಅವಳ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಇಂಟರ್ನೆಟ್ ಯೂಸರ್ ಗಳಿಗೆ ಮಹಿಳೆಯು ಮಾಡಿದ ಈ ಸುಂದರ ಹಾಗೂ ಸರಳವಾದ ಡ್ಯಾನ್ಸ್ ತುಂಬಾನೇ ಇಷ್ಟವಾಗಿದೆ. ಮಹಿಳೆಯ ವಿಶೇಷವೇನೆಂದರೆ ಸ್ವಲ್ಪವೂ ನಾಚದೆ ತನ್ನದೇ ಗುಂಗಿನಲ್ಲಿ ಓಲಾಡುತ್ತಾ ತುಂಬಾ ಸುಂದರವಾಗಿ ಡಾನ್ಸ್ ಮಾಡಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Nitu Mehna (@mehnanitu)

ಮಹಿಳೆಯು ಮಾಡಿದ ಈ ಡಾನ್ಸಿನ ವಿಡಿಯೋವನ್ನು @mehnanitu ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 12 ಲಕ್ಷ ಜನರು ನೋಡಿದ್ದು ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ. ಜೀವನದ ಜಂಜಾಟವನ್ನು ಮರೆತು ಸ್ವಲ್ಪ ಆನಂದ, ಸಂತೋಷ, ಖುಷಿ ದೊರೆಯುವಂತಿದ್ದರೆ ಯಾಕೆ ಪಡೆದುಕೊಳ್ಳಬಾರದು ಎಂಬ ಸಂದೇಶ ನೀಡುವಂತಿದೆ ಮಹಿಳೆಯ ಈ ರಿಲ್ಯಾಕ್ಸ್ ಡ್ಯಾನ್ಸ್.