ಫೋಟೋ ತೆಗೆಸಿಕೊಳ್ಳಲು ಚಾನ್ಸ್ ಸಿಗದೇ ಇದ್ದಾಗ, ಬಲವಂತವಾಗಿ ಅಕ್ಷಯ್ ತಲೆಯನ್ನೇ ಹಿಡಿದ ಫ್ಯಾನ್ಸ್ ನ ವಿಡಿಯೋ ವೈರಲ್…

ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಅಥವಾ ಐಕಾನ್ ನ್ನು ನೋಡಲು ಮತ್ತು ಅವರ ಜೊತೆಗೆ ಹೇಗಾದರೂ ಮಾಡಿ ಫೋಟೋ ಅಥವಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಅಭಿಮಾನಿ ಬಳಗ ದೇಶದಲ್ಲೆಡೆ ತುಂಬಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ಅವರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ತುಂಬಾ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಈ ನೆಟ್ಟಿಗರಿಗೆ ವಿಡಿಯೋ ನೋಡಿದ ನಂತರ ಯಾವ ಪ್ರತಿಕ್ರಿಯೆ ನೀಡಬೇಕೆಂಬುದೇ ತಿಳಿಯುತ್ತಿಲ್ಲ ಎಂದರೆ ತಪ್ಪಾಗಲಾರದು. ತಮ್ಮ ನೆಚ್ಚಿನ ನಟ ಅಥವಾ ನಟಿಯ ಜೊತೆಗೆ ಫೋಟೋ ಕ್ಲಿಕ್ಕಿಸಿ ಕೊಳ್ಳಲು ಅಭಿಮಾನಿಗಳು ಕೆಲವೊಂದು ಸಲ ತುಂಬಾ ಹುಚ್ಚರಂತೆ ವರ್ತಿಸುತ್ತಾರೆ. ಮತ್ತು ಸೆಲೆಬ್ರಿಟಿಗಳು ಸಹ ನಮ್ಮಂತೆಯೇ ಮನುಷ್ಯರಾಗಿದ್ದಾರೆ ಎಂಬುದನ್ನು ಮರೆತು ಬಿಡುತ್ತಾರೆ.

ವಿಡಿಯೋ ವೈರಲ್…

ಪ್ರಸ್ತುತ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಅವರ ಸುತ್ತಲೂ ಅಭಿಮಾನಿಗಳು ಸುತ್ತುವರೆದಿದ್ದಾರೆ. ಜೊತೆಯಲ್ಲಿ ಅಕ್ಷಯ್ ಕುಮಾರ್ ಅವರ ಬಾಡಿಗಾರ್ಡ್ ಸಹ ನಡೆದು ಬರುತ್ತಿದ್ದಾರೆ. ಅದರಲ್ಲಿಯೇ ಒಬ್ಬ ಅಭಿಮಾನಿ ಅಕ್ಷಯ್ ಕುಮಾರ್ ಅವರಿಗೆ ನೋಡಿದ ನಂತರ ತುಂಬಾ ಎಕ್ಸೈಟ್ ಆಗಿ ಅಕ್ಷಯ್ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಪ್ರಯತ್ನದಲ್ಲಿ ಅಭಿಮಾನಿಯು ಅಕ್ಷಯ್ ಕುಮಾರ್ ಅವರ ತಲೆಯನ್ನು ಬಲವಂತವಾಗಿ ಹಿಡಿದು ತನ್ನ ಕಡೆಗೆ ವಾಲಿಸಿ ಫೋಟೋ ತೆಗೆದು ಕೊಂಡಿದ್ದಾನೆ. ಅಭಿಮಾನಿಯ ಈ ಕೃತ್ಯ ಅಕ್ಷಯ್ ಕುಮಾರ್ ಅವರಿಗೆ ತುಂಬಾ ಸಿಟ್ಟಿಗೆ ತರಿಸಿದೆ. ಆಗ ಅಕ್ಷಯ್ ಬಲಗೈಯಿಂದ ಆತನನ್ನು ದೂರ ಸರಿಸಿ ಏನೋ ಹೇಳಲು ಪ್ರಯತ್ನಿಸಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Rupesh✨ (@sarcaster_rupesh)

ನೇಟಿಜನ್ಸ್ ಗಳ ಪ್ರತಿಕ್ರಿಯೆ…

ಅಕ್ಷಯ್ ಕುಮಾರ್ ಅವರ ಈ ವಿಡಿಯೋಗೆ ಇಲ್ಲಿಯವರೆಗೆ 82 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1.3 ಮಿಲಿಯನ್ ಜನ ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ತುಂಬ ವಿಚಿತ್ರ ರೀತಿಯಲ್ಲಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಒಬ್ಬ ಯೂಸರ್, “ನಾವು ಇದೇ ರೀತಿ QR ಕೋಡ್ ಸ್ಕ್ಯಾನ್ ಮಾಡುತ್ತೇವೆ” ಎಂದರೆ, ಇನ್ನೊಬ್ಬ “ಆತ ತುಂಬಾ ದೂರಿನ ಸಂಬಂಧಿಕ ಇರಬಹುದು” ಎಂದಿದ್ದಾನೆ.