‘ಪುಷ್ಪ’ ಶ್ರೀವಲ್ಲಿ ಹಾಡಿಗೆ ರಾನು ಮಂಡಲ್ ಡ್ಯಾನ್ಸ್! ನಕ್ಕು ನಕ್ಕು ಸುಸ್ತಾದ ನೇಟಿಜನ್ಸ್ ಮೊದ್ಲು ಅಲ್ಲು ಅರ್ಜುನ್ ರಿಗೆ ಶೇರ್ ಮಾಡಿ ಎಂದರು.

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ ದ ರೈಸ್’ ಚಲನಚಿತ್ರ ತಿಂಗಳುಗಳೇ ಗತಿಸಿದರೂ ಇನ್ನೂವರೆಗೆ ಅಭಿಮಾನಿಗಳ ಮನಸ್ಸಿನ ಮೇಲೆ ರಾಜ್ಯ ಮಾಡುತ್ತಿದೆ. ಈ ಚಿತ್ರದಲ್ಲಿಯ ಹಾಡುಗಳಿಂದ ಹಿಡಿದು ಡೈಲಾಗ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆದವು. ಅನೇಕ ಸೆಲೆಬ್ರಿಟಿಗಳು ಈ ಚಿತ್ರದಲ್ಲಿಯ ಹಾಡಿಗೆ ತಮ್ಮ ಕುಣಿತವನ್ನು ಸಾದರಪಡಿಸಿದರು. ಈಗ ಶ್ರೀವಲ್ಲಿ ಹಾಡಿಗೆ ರಾನು ಮಂಡಲ್ ಅವರೊಬ್ಬರು ಕುಣಿಯುವುದು ಬಹುಶಃ ಬಾಕಿ ಉಳಿದಿತ್ತು. ಅದಷ್ಟು ಇದೀಗ ಪೂರ್ಣವಾಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪುಷ್ಪ ಚಿತ್ರದಲ್ಲಿಯ ಶ್ರೀವಲ್ಲಿ ಹಾಡಿಗೆ ರಾನು ಮಂಡಲ್ ಕುಣಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ರಾನು ಮಂಡಲ್ ಅವರಿಗೆ ತುಂಬಾನೇ ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ರಾನು ಮಂಡಲ್ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿಗೆ ತುಂಬ ವಿಚಿತ್ರವಾಗಿ ಮತ್ತು ತಮಾಷೆಯಾಗಿ ನೃತ್ಯ ಮಾಡಿದ್ದಾರೆ.

ರಾನು ಮಂಡಲ್ ಅವರ ಈ ತಮಾಷೆಯ ವಿಡಿಯೋ ನೋಡಿದ ನಂತರ ಅಭಿಮಾನಿಗಳು ಹದ್ದುಮೀರಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ರಾನು ಅವರ ಫನ್ನಿ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿ ನೇಟಿಜನ್ಸ್ ಗಳಿಗೆ ನಗು ತಡೆಯಲಾಗುತ್ತಿಲ್ಲ. ಈ ಡಾನ್ಸ್ ನೋಡಿದ ನೇಟಿಜನ್ಸ್ ಗಳು ರಾನು ಮಂಡಲ್ ಕುಣಿದ ಈ ವಿಡಿಯೋವನ್ನು ಏನೇ ಆದರೂ ಪರ್ವಾಗಿಲ್ಲ, ಮೊದ್ ಈ ವಿಡಿಯೋ ಅಲ್ಲು ಅರ್ಜುನ್ ಅವರಿಗೆ ಕಳುಹಿಸಿಕೊಡಿ ಎನ್ನುತ್ತಿದ್ದಾರೆ. ಒಂದು ಸಮಯದಲ್ಲಿ ರೈಲ್ವೇ ಪ್ಲಾಟ್ ಫಾರಂ ಮೇಲೆ ಹಾಡುಗಳನ್ನು ಹಾಡುತ್ತಾ ಜೀವಿಸುತ್ತಿದ್ದ ರಾನು ಮಂಡಲ್ ಒಂದೇ ರಾತ್ರಿಯಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿ ಮೆರೆದಿದ್ದಾರೆ.

ಸುಪ್ರಸಿದ್ಧ ಗಾಯಕಿ ದಿವಂಗತ ಲತಾ ಮಂಗೇಶ್ಕರ್ ಅವರಿ ಹಾಡಿದ ‘ಎಕ್ ಪ್ಯಾರ್ ಕಾ ನಗ್ಮ ಹೈ’ ಈ ಹಾಡಿನ ವಿಡಿಯೋ ಮೀಡಿಯಾದಲ್ಲಿ ವೈರಲ್ ಆಗಿತ್ತು. ತದನಂತರ ಮ್ಯೂಸಿಸಿಯನ್ ಮತ್ತು ಸಿಂಗರ್ ಹಿಮೇಶ್ ರೇಶಮಿಯಾ ಅವರು ತಮ್ಮ ಚಿತ್ರದಲ್ಲಿ ಒಂದು ಹಾಡನ್ನು ಹಾಡಲು ಅವಕಾಶ ನೀಡಿದರು. ಅದಾದ ಕೆಲವೇ ದಿನಗಳ ನಂತರ ರಾನು ಮಂಡಲ್ ಮಿಡಿಯಾದಿಂದ ದೂರವಾಗಿದ್ದರು. ಕಳೆದ ವರ್ಷವಂತೂ ರಾನು ಮಂಡಲ್ ಅವರ ಜೀವನದ ಮೇಲೆ ಆಧಾರಿತ ಚಲನಚಿತ್ರ ನಿರ್ಮಾಣವಾಗುತ್ತಿದೆ ಎಂಬ ಸುದ್ದಿಗಳು ಹರಡಿದ್ದವು.

ವಿಡಿಯೋ ನೋಡಿ

 

View this post on Instagram

 

A post shared by Arnab Ghosh (@arnabghoshsanu)

‘ಮಿಸ್ ರಾಣು ಮಾರಿಯ’ ಈ ಚಿತ್ರದ ಹೆಸರಿದ್ದು ರಿಷಿಕೇಶ ಮಂಡಲ್ ಅವರು ಚಿತ್ರ ತಯಾರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹಿಂದಿ ಹಾಗೂ ಬಂಗಾಳಿ ಚಿತ್ರಗಳಲ್ಲಿ ನಟಿಯಾಗಿ ಕೆಲಸ ಮಾಡಿದ ಇಶಿಕ ಡೇ ಅಭಿನಯಿಸಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡುವಾಗ ಇಶಿಕ ಈ ಬಗ್ಗೆ ಸದ್ಯ ಶೂಟಿಂಗ್ ಸ್ಟಾರ್ಟ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.