ಯಪ್ಪೋ; ಮೊದ್ಲು ಈ ಇವಳನ್ನು ಕಂಟ್ರೋಲ್ ಮಾಡಿಪ್ಪ! ಈ ರೀತಿಯ ಕಿಲ್ಲರ್ ಡಾನ್ಸ್ ನಿಮ್ಮ ಜೀವನದಲ್ಲೇ ನೊಡ್ಲಿಕ್ಕಿಲ್ಲ…
ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಡ್ಯಾನ್ಸ್ ಗಳು ವೈರಲ್ ಆಗುತ್ತಿರುತ್ತವೆ. ಕೆಲವರು ತುಂಬಾ ಟೆಕ್ನಿಕ್ ಆಗಿ ಡಾನ್ಸ್ ಮಾಡಿದರೆ ಇನ್ನು ಕೆಲವರು ಅದಕ್ಕೆ ತೀರ ವಿರುದ್ಧವಾಗಿ ಡಾನ್ಸ್ ಮಾಡುತ್ತಾರೆ. ಆದರೆ ಮಹಿಳೆ ಮಾಡಿದ ಈ ರೀತಿಯ ಡಾನ್ಸ್ ಯಾವ ರೀತಿಯ ಡಾನ್ಸ್ ಎಂಬುದೇ ಗೊತ್ತಾಗುತ್ತಿಲ್ಲ ಮತ್ತು ನೀವೆಂದು ಈ ರೀತಿಯ ಕುಣಿತವನ್ನು ಇಲ್ಲಿಯವರೆಗೆ ನೋಡಲಿಕ್ಕಿಲ್ಲ.
ಈ ಡಾನ್ಸ್ ನೋಡುವಾಗ ಮನುಷ್ಯ ಹಠಾತ್ತನೆ ಹೆದರಿ ಬಿಡುತ್ತಾನೆ. ಅದಕ್ಕೆ ಕಾರಣ ಮಹಿಳೆಯು ಮಾಡುತ್ತಿರುವ ಈ ಕತರ್ನಾಕ್ ಡ್ಯಾನ್ಸ್. ಮಹಿಳೆಯು ಮೊದಲು ಕೈಯಲ್ಲಿ ಮೈಕ್ ತೆಗೆದುಕೊಳ್ಳುತ್ತಾಳೆ. ನೋಡುಗರಿಗೆ ಇವಳು ಬಹುಶಃ ಯಾವುದಾದರೊಂದು ಹಾಡನ್ನು ಹಾಡುತ್ತಿರಬಹುದೆಂದು ತಿಳಿಯುತ್ತಾರೆ. ಆದರೆ ಮಹಿಳೆ ಕ್ಷಣದಲ್ಲಿ ತನ್ನ ವರಸೆ ಬದಲಾಯಿಸಿ ಒಮ್ಮೆಲೆ ಮೈಯಲ್ಲಿ ಭೂತ ಸಂಚಾರವಾದಂತೆ ಕುಣಿಕುಣಿದು, ಎಗರುತ್ತ, ಹಾರುತ್ತಾ, ಜಿಗಿಯುತ್ತಾ ಹೀಗೆ ಎಷ್ಟು ಹೇಳಿದರೂ ಕಡಿಮೆ ಎನ್ನುವ ಹಾಗೆ ಡಾನ್ಸ್ ಮಾಡಲು ಶುರುಮಾಡುತ್ತಾಳೆ. ಮೊದಲ ಬಾರಿಗೆ ಈ ಡ್ಯಾನ್ಸ್ ನೋಡುವವರು ಬೆಚ್ಚಿ ಬೀಳುವುದು ನಿಶ್ಚಿತ. ಇನ್ನೊಂದು ವಿಶೇಷವೆಂದರೆ ಮಹಿಳೆಯು ಈ ರೀತಿಯಾಗಿ ಸೀರೆಯುಟ್ಟು ಮಾಡ್ತಿದ್ದಾಳೆ. ಮಹಿಳೆ ಮಾಡುತ್ತಿರುವ ಈ ಕೃತ್ಯಕ್ಕೆ ಡಾನ್ಸ್ ಅನ್ನಬೇಕೋ ಅಥವಾ ಇನ್ನೂ ಏನಾದರೂ ಬೇರೆ ಶಬ್ದವನ್ನು ಯೂಸ್ ಮಾಡಬೇಕೆಂಬುದೇ ತಿಳಿಯುತ್ತಿಲ್ಲ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ riya_22 sa ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಡಾನ್ಸಿನ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಎರಡು ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಸಾವಿರಾರು ಜನ ಲೈಕ್ ಮಾಡಿದ್ದಾರೆ.