ತಾವೂ 0 ಸಂಪಾದಿಸಿದ ಮೇಲೆ DK ಅವರ ಅಬ್ಬರದ ಆಟಕ್ಕೆ ಡ್ರೆಸಿಂಗ್ ರೂಮ್ ನಲ್ಲಿ ಕುಳಿತು VK ಮಾಡಿದ್ದೇನು? ನೋಡಿ ಈ ವಿಡಿಯೋದಲ್ಲಿ…
ಐಪಿಎಲ್ ನ 15 ನೆಯ ಹಂಗಾಮಿನಲ್ಲಿ ಆರ್ಸಿಬಿ ಆಟಗಾರನಾದ ದಿನೇಶ್ ಕಾರ್ತಿಕ್ ಅವರು (DK) ಇಲ್ಲಿಯವರೆಗೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನೆ ಮಾಡುತ್ತಿದ್ದಾರೆ. ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವಾಗ ತಂಡಕ್ಕೆ ಫಿನಿಶರ್ ನ ಜವಾಬ್ದಾರಿಯನ್ನು ತುಂಬಾ ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಹೈದರಾಬಾದ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ (08 ಮೇ) ದಿನೇಶ್ ಕಾರ್ತಿಕ್ ಅವರು ಕೊನೆಗೆ ಬಂದು ಅದ್ಭುತ ಆಟವನ್ನು ಪ್ರದರ್ಶಿಸಿದರು. ಈ ಆಟವನ್ನು ನೋಡಿದ ನಂತರ ದಿನೇಶ್ ಕಾರ್ತಿಕ್ ಅವರಿಗೆ ಎಲ್ಲರೂ ಅನೇಕ ರೀತಿಯಲ್ಲಿ ಪ್ರಶಂಸಿಸಿದ್ದಾರೆ. ಆದರೆ ಎಲ್ಲರ ಹೊರತಾಗಿ ವಿರಾಟ್ ಕೊಹ್ಲಿ ಅವರು ಮಾಡಿದ ಪ್ರಶಂಸೆ ಅಥವಾ ಸ್ತುತಿ ದಿನೇಶ್ ಕಾರ್ತಿಕ್ ರಿಗೆ ತುಂಬಾ ವಿಶೇಷವಾಗಿರಬಹುದು.
ವಿರಾಟ್ ಕೊಹ್ಲಿ ಅವರಿಗೆ ಸುಮ್ಮನೆ ಕಿಂಗ್ ಕೊಹ್ಲಿ ಅನ್ನುವುದಿಲ್ಲ. ದಿನೇಶ್ ಕಾರ್ತಿಕ್ ಅವರು ಅಬ್ಬರದ ಆಟವನ್ನು ಪ್ರದರ್ಶಿಸಿ ಡ್ರೆಸಿಂಗ್ ರೂಮಿಗೆ ಬಂದಾಗ ಕೊಹ್ಲಿ ಅವರು ವ್ಯಕ್ತ ಮಾಡಿದ ಪ್ರಶಂಸೆ ಎಲ್ಲರಿಗಿಂತ ತುಂಬಾ ವಿಭಿನ್ನವಾಗಿತ್ತು.
ಹೈದರಾಬಾದ್ ವಿರುದ್ಧ ಆರ್ಸಿಬಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಇಳಿಯಿತು. ಆರ್ಸಿಬಿ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ ಒಂದು 192 ರನ್ಗಳನ್ನು ಪೇರಿಸಿತ್ತು. ಇದರಲ್ಲಿ ದಿನೇಶ್ ಕಾರ್ತಿಕ್ ಅವರು ಔಟಾಗದೆ ಬರೀ 8 ಬಾಲ್ ಗಳಲ್ಲಿ 30 ರನ್ಗಳನ್ನು ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ 375 ಇತ್ತು. ಈ ಆಟದಲ್ಲಿ ದಿನೇಶ್ ಅವರು 4 ಸಿಕ್ಸ್ ಮತ್ತು ಒಂದು 4 ಬಾರಿಸಿದ್ದರು.
ದಿನೇಶ್ ಕಾರ್ತಿಕ್ ಅವರ ಈ ಸ್ಫೋಟಕ ಆಟಕ್ಕೆ ಮನಸೋತ ಪಾಪ್ ಡುಪ್ಲೆಸಿಸ್ ಅವರು ಮೈದಾನದಲ್ಲಿಯೇ ಅಪ್ಪಿಕೊಂಡು ದಿನೇಶ್ ರಿಗೆ ಬೆನ್ನುತಟ್ಟಿದ್ದಾರೆ. ಬೆಂಗಳೂರು ಇನಿಂಗ್ಸ್ ಮುಗಿದನಂತರ ಇಬ್ಬರೂ ಕೂಡಿ ಡ್ರೆಸ್ಸಿಂಗ್ ರೂಮಿನಲ್ಲಿ ಎಂಟ್ರಿ ಮಾಡುವಾಗ ಅಲ್ಲಿಯ ದೃಶ್ಯ ನಿಜಕ್ಕೂ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆ ಪಡುವಂತಿತ್ತು. ವಿರಾಟ್ ಕೊಹ್ಲಿ ಅವರು ಡ್ರೆಸ್ಸಿಂಗ್ ರೂಮಿನ ಬಾಗಿಲಲ್ಲಿಯೇ ದಿನೇಶ್ ಕಾರ್ತಿಕ್ ಅವರ ದಾರಿ ಕಾಯುತ್ತ ನಿಂತಿದ್ದರು. ದಿನೇಶ್ ಕಾರ್ತಿಕ್ ಒಳಗೆ ಎಂಟ್ರಿ ಆಗುತ್ತಲೇ ವಿರಾಟ್ ಕೊಹ್ಲಿ ಎದ್ದುನಿಂತು ಎರಡು ಕೈಗಳನ್ನು ಮೇಲೆ ಮಾಡಿ ದಿನೇಶ್ ಕಾರ್ತಿಕ್ ಅವರಿಗೆ ನಮಸ್ಕರಿಸಿದ್ದಾರೆ. ನಂತರ ಅವರನ್ನು ತಬ್ಬಿಕೊಂಡು ಬೆನ್ನುತಟ್ಟಿದ್ದಾರೆ. ಕೊಹ್ಲಿ ಅವರ ಈ ಕೃತಿ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮ್ಯಾಚ್ ಮುಗಿದನಂತರ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅವರು ದಿನೇಶ್ ಕಾರ್ತಿಕ್ ಅವರ ಬಗ್ಗೆ ಅನೇಕ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ. ಒಂದು ವೇಳೆ ಡಿಕೆ ಅವರು ಇದೇ ರೀತಿ ಸಿಕ್ಸ್ ಗಳನ್ನು ಬಾರಿಸುತ್ತಿದ್ದರೆ ಬ್ಯಾಟಿಂಗ್ ಸಲುವಾಗಿ ಅವರಿಗೆ ಇನ್ನಷ್ಟು ಅವಕಾಶಗಳನ್ನು ಮಾಡಿಕೊಡಬೇಕಾಗುತ್ತದೆ, ಜೊತೆಗೆ ದಿನೇಶ್ ಕಾರ್ತಿಕ್ ಅವರು ಬೇಗನೆ ಬ್ಯಾಟಿಂಗ್ ಆಡಲು ಬರಬೇಕೆಂದು ನಾನು ಸ್ವತ: ಬೇಗನೆ ಔಟ್ ಆಗಬೇಕೆಂದು ವಿಚಾರ ಮಾಡುತ್ತಿರುತ್ತೇನೆ. ಇವತ್ತು ಸಹ ನಾನು ಬೇಗನೇ ರಿಟೈರ್ಡ್ ಹರ್ಟ್ ಆಗಬೇಕೆಂದು ವಿಚಾರ ಮಾಡುತ್ತಿರುವಾಗಲೇ ನಮ್ಮ ಒಂದು ವಿಕೆಟ್ ಕಳೆಯಿತು ಮತ್ತು ದಿನೇಶ್ ಬ್ಯಾಟಿಂಗ್ ಗೆ ಬಂದರು ಅಂದು ಗೌರವದಿಂದ ಹೇಳುತ್ತಿದ್ದರು.
ಈ ಸೀಸನ್ ನಲ್ಲಿ DK (ದಿನೇಶ್ ಕಾರ್ತಿಕ್) ಅವರು ಮೊದಲಿನಿಂದಲೂ ಉತ್ತಮ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಜೊತೆಗೆ VK (ವಿರಾಟ್ ಕೊಹ್ಲಿ) ಅವರು ದೊಡ್ಡ ಆಟಗಾರನಾದರೂ ನಿಸ್ಸಂಕೋಚವಾಗಿ ಇನ್ನೊಬ್ಬರಿಗೆ ಎಪ್ರಿಷಿಯೆಟ್ ಮಾಡುವುದನ್ನು ನೋಡಿದರೆ ಇವರು ಕ್ರಿಕೆಟ್ನಲ್ಲಿ ಸುಮ್ಮನೆ ಕಿಂಗ್ ಕೋಹ್ಲಿ ಅನ್ನಿಸಿಕೊಳ್ಳುವುದಿಲ್ಲ.