ಹುಡುಗಿ ತುಂಬಾ ಸ್ಟೈಲ್ ನಲ್ಲಿ ಪಟಾಕಿ ಹಾರಿಸುತ್ತಿದ್ದಳು! ಪಾಪ, ಆ ಸ್ಟೈಲ್ ಕ್ಷಣದಲ್ಲಿ ಖತಮ್; ಅಕ್ಕ ಸದ್ದಿಲ್ಲದೆ ಎಸ್ಕೇಪ್…

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಒಂಬತ್ತೂ ರಸಗಳಿಂದ ಕೂಡಿರುತ್ತವೆ. ಅದರಲ್ಲಿ ತಮಾಷೆಯ ವಿಡಿಯೋಗಳಂತೂ ಸಾಕಷ್ಟು ನೋಡಲು ಸಿಗುತ್ತವೆ. ಅವುಗಳನ್ನು ನೋಡುತ್ತಾ ಹೋದಂತೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಸದ್ಯ ಇದೇ ರೀತಿಯ ಹುಡುಗಿಯ ವಿಡಿಯೋ ಒಂದು ತುಂಬಾ ಮಜದಿಂದ ಕೂಡಿದ್ದು ಎಲ್ಲೆಡೆ ಓಡಾಡುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಒಬ್ಬಳು ಹುಡುಗಿ ತುಂಬಾ ಸ್ಟೈಲ್ ನಲ್ಲಿ ರಾತ್ರಿಯ ಸಮಯದಲ್ಲಿ ಮನೆಯ ಮುಂದೆ ನಿಂತು ಪಟಾಕಿ ಸಿಡಿಸುವ ತಯಾರಿಯಲ್ಲಿದ್ದಾಳೆ. ಕೈಯಲ್ಲಿಯ ಪಟಾಕಿ ಬೆಂಕಿಗೆ ತಗುಲಿದ ತಕ್ಷಣ ಒಂದೇ ಒಂದು ಕ್ಷಣದಲ್ಲಿ ಸಡನ್ನಾಗಿ ಹುಡುಗಿಯ ಕೈಯಲ್ಲಿಯೇ ಸದ್ದುಮಾಡುತ್ತಾ ಸಿಡಿದು ಬಿಟ್ಟಿದೆ. ಹುಡುಗಿಯು ಇದ್ಯಾವುದರ ಪರಿವೇಯೇ ಇಲ್ಲದೆ ತನ್ನ ಸ್ಟೈಲಲ್ಲಿ, ತನ್ನದೇ ಗುಂಗಿನಲ್ಲಿ ನಿಂತಿರುವಾಗ ಹಠಾತ್ ಪಟಾಕಿ ಸಿಡಿದದ್ದು ಆಕೆಗೆ ಬೆಚ್ಚಿಬೀಳಿಸಿದೆ. ಕೈಯಲ್ಲಿ ಹಠಾತ್ತನೆ ಸಿಡಿದ ಪಟಾಕಿಯ ಶಬ್ದಕ್ಕೆ ಹುಡುಗಿಯು ಬೆದರಿದ ಜಿಂಕೆಯಂತಾಗಿ ಯಾವುದೇ ವಿಚಾರ ಮಾಡದೆ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

ನೋಡಿ ಈ ವಿಡಿಯೋ…

 

View this post on Instagram

 

A post shared by fans page (@dilsha_supports_)

ಈ ವಿಡಿಯೋವನ್ನು dilsha_support ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ 3.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು ವಿಡಿಯೋಗೆ ಸುಮಾರು ಒಂದುವರೆ ಲಕ್ಷಗಳವರೆಗೆ ಲೈಕ್ಸ್ ಗಳು ಬಂದಿವೆ.