ಬಾಲಿವುಡ್ ಮೇರು ನಟ ಸಲ್ಮಾನ್ ಖಾನ್ ಬೂಟು ಕಳಚಿ ನಮಸ್ಕರಿದ ಮಹಾನ್ ವ್ಯಕ್ತಿ ಯಾರು ನೋಡಿ! ತಿಳಿದ ನಂತರ ಶಬ್ಬಾಷ್ ಎನ್ನುವಿರಿ.
ಮರಾಠಿ ಭಾಷೆಯಲ್ಲಿ ನಿರ್ಮಾಣಗೊಂಡ ‘ಧರ್ಮವೀರ್’ ಚಿತ್ರದ ಟ್ರೇಲರ್ ಲಾಂಚ್ ಮಾಡುವ ಕಾರ್ಯಕ್ರಮ ಮುಂಬಯಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಂಬಯಿ ಹತ್ತಿರದ ಠಾಣೆಯಲ್ಲಿ ಶಿವಸೇನಾ ಪಕ್ಷವನ್ನು ಬಲಪಡಿಸಿದ ಸಮರ್ಥ ಶಿವಸೈನಿಕ ನೆಂದು ತನ್ನ ಗುರುತು ನಿರ್ಮಾಣ ಮಾಡಿದ ದಿವಂಗತ ರಾಜಕಾರಣಿ ಆನಂದ ದಿಘೆ ಹೆಸರಿನ ವ್ಯಕ್ತಿಯ ಜೀವನದ ಮೇಲೆ ಆಧರಿಸಿದ ಚಿತ್ರ ಇದಾಗಿದೆ. ಆನಂದ್ ದಿಘೆ ಅವರ ರಾಜಕಾರಣದಲ್ಲಿಯ ಅದ್ಭುತವಾದ ಕಾರ್ಯವೈಖರಿಯನ್ನು ನೋಡಿ ಜನ ಅವರಿಗೆ ಪ್ರೀತಿಯಿಂದ ‘ಧರ್ಮವೀರ’ ಎಂದು ಕರೆಯುತ್ತಿದ್ದರು. ಸದ್ಯ ಆನಂದ್ ದಿಘೆ ಅವರ ಜೀವನದ ಮೇಲೆ ಆಧರಿಸಿದ ಚಿತ್ರಕ್ಕೆ ‘ಧರ್ಮವೀರ’ ಎಂದು ಹೆಸರಿಸಲಾಗಿದೆ. ಇದೇ ಚಿತ್ರದ ಟ್ರೈಲರ್ ಲಾಂಚ್ ಮಾಡುವ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಮತ್ತು ಮರಾಠಿ ಚಿತ್ರರಂಗದ ಅನೇಕ ದಿಗ್ಗಜರು ಉಪಸ್ಥಿತರಿದ್ದರು. ಅವರಲ್ಲಿ ಸಲ್ಮಾನ್ ಖಾನ್ ಅವರು ಒಬ್ಬರೂ ಹಾಜರಿದ್ದರು.
ಈ ಸಂದರ್ಭದಲ್ಲಿ ಸ್ಟೇಜ್ ಮೇಲೆ ಹಿಂದೂ ಸ್ವರಾಜ್ಯದ ಶಂಕುಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಹಾಗೂ ಹಿಂದೂ ಹೃದಯ ಸಾಮ್ರಾಟರಾದ ದಿವಂಗತ ಬಾಳಾಸಾಹೇಬ ಠಾಕ್ರೆ ಜೊತೆಯಲ್ಲಿ ಧರ್ಮವೀರ್ ಆನಂದ್ ದಿಘೆ ಅವರ ಭಾವಚಿತ್ರ ಗಳಿದ್ದವು. ಈ ಎಲ್ಲ ಮಹನೀಯರಿಗೆ ಪುಷ್ಪಗಳನ್ನು ಅರ್ಪಿಸಿ ನಮಸ್ಕರಿಸುವ ಮೊದಲು ಸಲ್ಮಾನ್ ಖಾನ್ ತಮ್ಮ ಕಾಲಲ್ಲಿಯ ಶೂಗಳನ್ನು ಕಳಚಲು ಮರೆತಿಲ್ಲ. ಸದ್ಯ ಸಲ್ಮಾನ್ ಖಾನ್ ರಿ ಮಾಡಿದ ಈ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಸಲ್ಮಾನ್ ಖಾನ್ ಅವರ ಈ ಕೃತ್ಯ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ವಿಡಿಯೋ ನೋಡಿ