ಮಾಲಿಕನಿಗಾಗಿ ಏನನ್ನೂ ಮಾಡಲು ಸಿದ್ಧ; ಈಗ ಕಾರು ನಡೆಸುತ್ತಿದ್ದೇನೆ! ಬೇಕಾದರೆ ವಿಡಿಯೋ ನೋಡಿ, ನಿಮ್ಮ ಪ್ರಾಮಾಣಿಕ ‘ನಾಯಿ’.

ಸಾಕು ಪ್ರಾಣಿಗಳಲ್ಲಿ ಎಲ್ಲರಿಗೂ ಹೆಚ್ಚು ಇಷ್ಟವಾಗುವ ಪ್ರಾಣಿಯೆಂದರೆ ನಾಯಿ. ಅದರಲ್ಲಿರುವ ಜಾಣತನ, ಮಾಲೀಕನ ಪ್ರತಿ ಇರುವ ನಿಷ್ಠೆ ಮತ್ತು ತಿಳುವಳಿಕೆಯಿಂದಾಗಿ ಇದು ಬೇರೆ ಪ್ರಾಣಿಗಳಿಗಿಂತಲೂ ತುಂಬಾ ಭಿನ್ನವೆನಿಸಿಕೊಳ್ಳುತ್ತದೆ. ನಾಯಿಗೆ ಯಾವುದೇ ವಿಷಯಗಳನ್ನು ಕಲಿಸಿದಾಗ ಅದು ತುಂಬಾ ಬೇಗನೆ ಕಲಿತುಕೊಳ್ಳುತ್ತದೆ. ಇದೇ ರೀತಿ ನಾಯಿಯೊಂದು ಕಾರನ್ನು ನಡೆಸುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲಿ ಕಾರು ನಡೆಸುತ್ತಿರುವ ನಾಯಿಯನ್ನು ನೋಡಿ ನಿಮಗೂ ಆಶ್ಚರ್ಯವಾಗಬಹುದು.

ಈ ವಿಡಿಯೋ ಆಸ್ಟ್ರೇಲಿಯಾದಲ್ಲಿಯದಿದೆ. ಇಲ್ಲಿ ಲೆಕ್ಸಿ ಹೆಸರಿನ ಜಾಕ್ ರಸೆಲ್ ನಾಯಿಯೊಂದು ಕಾರು ನಡೆಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಒಂದು ಚಿಕ್ಕ ಫಾರಂನಲ್ಲಿ ನಾಯಿಯೂ ಫೋರ್ ವೀಲರ್ ನಡೆಸುವುದನ್ನು ನೋಡಬಹುದು. ಮೆಟ್ರೋ ಯುಕೆ ನೀಡಿದ ರಿಪೋರ್ಟ್ ಪ್ರಕಾರ, ನಾಯಿಯ ಮಾಲೀಕ ಕ್ಯಾಮರೋನ್ ಶೇಕ್ ಇವರು ತಾವೇ ಸ್ವತಃ ನಾಯಿಗೆ ಕಾರು ನಡೆಸುವ ಟ್ರೈನಿಂಗ್ ನೀಡಿದ್ದಾರೆ. ತದನಂತರ ನಾಯಿ ಡ್ರೈವಿಂಗ್ ಮಾಡುವಾಗ ಸ್ವತಃ ತಾವೇ ಶೂಟ್ ಮಾಡಿದ್ದಾರೆ.

ಕ್ಯಾಮರೂನ್ ಅವರು ಹೇಳುವ ಪ್ರಕಾರ, ಕುರಿಗಳನ್ನು ಕಾಯುವ ಸಲುವಾಗಿ ನಾಯಿಗೆ ಜೊತೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ನಾನು ಅದಕ್ಕೆ ಕಾರು ನಡೆಸುವುದನ್ನು ಕಲಿಸಿದ್ದೇನೆ ಎಂದು ಹೇಳುತ್ತಾರೆ. ಇವರು ಆಸ್ಟ್ರೇಲಿಯಾದಲ್ಲಿಯ ವಿಕ್ಟೋರಿಯಾದ ಹ್ಯಾಮಿಲ್ಟನ್ ಜಿಲ್ಲೆಯಲ್ಲಿ ವಾಸಿಸುತ್ತಾರೆ. ನಾಯಿಗೆ ಕಾರು ನಡೆಸಲು ಕಲಿಸುವ ಯಾವುದೇ ಉದ್ದೇಶವಿರಲಿಲ್ಲ. ಸುಮ್ಮನೆ ಒಂದು ಪ್ರಾಕ್ಟಿಕಲ್ ಮಾಡಿ ನೋಡಬೇಕು ಎಂಬ ಉದ್ದೇಶದಿಂದ ಕಲಿಸಿದೆ. ಆದರೆ ನಾಯಿಯು ತುಂಬಾ ಒಳ್ಳೆಯದಾಗಿ ಕಾರು ನಡೆಸುವ ಪದ್ಧತಿಯನ್ನು ಕಲಿಯಿತು.

ಲೆಕ್ಸಿ ಕಾರು ನಡೆಸುವುದನ್ನು ಕಲಿತಾಗ ಅದು ಪುಟ್ಟ ಮರಿ ಇತ್ತು. ಮತ್ತು ಅದು ತುಂಬಾ ಗಾಯಗೊಂಡಿತ್ತು. ರಸ್ತೆ ಮಧ್ಯದಲ್ಲಿ ಬರುವ ಆಡುಗಳನ್ನು ಬದಿಗೆ ಸರಿಸುವ ಶಕ್ತಿಯು ಹೊಂದಿರಲಿಲ್ಲ. ಉಪಚಾರದ ನಂತರ ಯಾವಾಗ ಲೆಕ್ಸಿ ಸರಿಯಾಯಿತು, ಆಗ ಮಾತ್ರ ತುಂಬಾ ಜಾಣವಾಗತೊಡಗಿತು. ಈಗ ಈ ನಾಯಿಯು ನನಗೆ ತುಂಬಾ ಸಹಾಯ ಮಾಡುತ್ತದೆ. ಲೆಕ್ಸಿ ಮತ್ತು ಮಾಲೀಕ ಇಬ್ಬರು ತುಂಬಾ ಒಳ್ಳೆಯ ಮಿತ್ರರಂತೆ ಇರುತ್ತಾರೆ. ಇಬ್ಬರಿಗೂ ಒಬ್ಬರಿಗೊಬ್ಬರ ಭಾಷೆಯೂ ಸಹ ಅರ್ಥವಾಗುತ್ತದೆ. ಅಷ್ಟೊಂದು ಇಬ್ಬರದೂ ಒಳ್ಳೆಯ ಮೈತ್ರಿಯಾಗಿದೆ.

ವಿಡಿಯೋ ನೋಡಿ