ಬಿಕನಿ ಡ್ರೆಸ್ ಕೋಡ್ ನಲ್ಲಿ ಬರ್ಥ್ ಡೇ ಸೆಲೆಬ್ರೇಷನ್ ಮಾಡಿಕೊಂಡ ಅಮೀರ್ ಖಾನ್ ಮಗಳು ಈರಾ ಖಾನ್: ಫೋಟೋ ನೋಡಿ ಬೆರಗಾದ ನೆಟ್ಟಿಗರು!!

ಮುಂಬೈ: ಬಾಲಿವುಡ್ ನ ಮಿಸ್ಟರ್ ಪರಫೆಕ್ಷನಿಷ್ಠ ಅಮೀರ್ ಖಾನ್ ಅವರ ಮಗಳು ಈರಾ ಸಿನೆಮಾ ರಂಗದಿಂದ ದೂರವಿದ್ದರೂ ಸಹ ಪ್ರಸಿದ್ಧಿಯ ಒಲವಿನಲ್ಲಿ ಹೇಗೆ ಇರಬೇಕು ಎಂಬುದರ ಬಗ್ಗೆ ಇವರಿಗೆ ಗೊತ್ತು ಇದೆ. ಸ್ಟಾರ್ ಮಕ್ಕಳು ಕೆಲವೊಮ್ಮೆ ತಮ್ಮ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ರವಿವಾರದಂದು ಈರಾ ಖಾನ್ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡರು, ಜನ್ಮದಿನದ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಕಾರಣ ಈ ಫೋಟೋಗಳಲ್ಲಿಯ ಈರಾ ಖಾನ್ ಅವರ ಸ್ಟೈಲ್ ನೋಡಿ ಜನ ಸಹ ಬೆರಗಾಗಿದ್ದಾರೆ. ಅಲ್ಲದೆ ಎಷ್ಟೋ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ಈರಾ ಅವರ ಅಪಹಾಸ್ಯ ಸಹ ಮಾಡಿದ್ದಾರೆ.

ಈರಾ ಖಾನ್ ಅವರ ಬರ್ಥ್ ಡೇ ಸೆಲೆಬ್ರೇಷನ್ ಫೋಟೋಗಳು ಇನ್ಸ್ಟಂಟ್ ಬಾಲಿವುಡ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಶೇರ್ ಮಾಡಲಾಗಿದೆ. ಈ ಫೋಟೋದಲ್ಲಿ ಈರಾ ತಂದೆ ಅಮೀರ್ ಖಾನ್ ಮತ್ತು ಸಹೋದರ ಆಝಾದ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈರಾ ಖಾನ ಬಿಕನಿ ಡ್ರೆಸ್ ನಲ್ಲಿ ಕೇಕ್ ಕಟ್ ಮಾಡುತ್ತಿರುವದು ಸಹ ಕಾಣುತ್ತದೆ. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಅಲ್ಲಿ ಅಂದರೆ ಈರಾ ಜನ್ಮದಿನ ಆಚರಣೆಯ ಡ್ರೆಸ್ ಕೋಡ್ ಬಿಕನಿ ಇತ್ತು ಅಂತ ಕಾಣುತ್ತೆ. ಏಕೆಂದರೆ ಅಲ್ಲಿ ಸಹಭಾಗಿಯಾಗಿರುವ ಪ್ರತಿಯೊಬ್ಬರು ಸಹ ಬಿಕನಿ ಅಂದರೆ ಶಾರ್ಟ್ ಡ್ರೆಸ್ ನಲ್ಲಿಯೇ ಕಾಣಿಸಿಕೊಂಡಿದ್ದಾರೆ ಹೀಗಾಗಿ ಬರ್ಥ್ ಡೇ ಕೇವಲ ಬಿಕನಿ ಡ್ರೆಸ್ ನಲ್ಲಿ ಆಚರಣೆ ಮಾಡಿದ್ದಾರೆ.

ಅಮೀರ್ ಖಾನ್ ಅವರ ಈ ಕುಟುಂಬದ ಫೋಟೋ ನೋಡಿ ಸೋಶಿಯಲ್ ಮಿಡಿಯಾದಲ್ಲಿಯ ಯುಜರ್ಸ್ ಇವರನ್ನು ಟ್ರೋಲ್ ಮಾಡಿದ್ದಾರೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡುವ ಮೂಲಕ ಸಂಪೂರ್ಣ ಕುಟುಂಬದ ಮಾನ ಬಿದಿಪಾಲು ಮಾಡಿರುವದು ಕಂಡು ಬರುತ್ತದೆ.

ಒಬ್ಬ ಯುಜರ್ಸ್ ‘ ಇದೊಂದು ತುಂಬಿದ ಕೌಟುಂಬಿಕ ವಾತಾವರಣ ಇದೆ’ ಎಂದು ಬರೆದಿದ್ದಾನೆ. ಮತ್ತೊಬ್ಬ ಯುಜರ್ಸ್’ ಬರ್ಥ್ ಡೇ ದಂದು ಇದೆಂಥ ಪೋಷಾಕು ಇದೆ’ ಅಂತ ಬರೆದಿದ್ದನೆ. ಮಗದೊಬ್ಬ ‘ ಇದೇನು ಜನ್ಮದಿನವಿದೆಯೋ ಅಥವಾ ಫುಲ್ ಪಾರ್ಟಿ’ ಅಂತ ಬರೆದರೆ, ಒಬ್ಬ ವ್ಯಕ್ತಿ ‘ಬಾಲಿವುಡ್ ಸ್ಟಾರ್ಸ್ ಕಡೆಗೆ ದಿನದಿಂದ ದಿನಕ್ಕೆ ಬಟ್ಟೆಗಳ ಕೊರತೆ ಕಂಡು ಬರುತ್ತಿದೆ’ಅಂತ ಕಾಮೆಂಟ್ ಮಾಡಿದ್ದಾನೆ.

 

View this post on Instagram

 

A post shared by Ira Khan (@khan.ira)