ವೀಡಿಯೋ; ಸೈಕಲ್ ರೇಸ್ ಸ್ಟಾರ್ಟ್ ಆಗುತ್ತಲೇ ಮುಗ್ಗುರಿಸಿ ಬಿದ್ದ ಮಗು, ಎದ್ದ ಮೇಲೆ ಮಾಡಿದ ಕೆಲಸ ನೋಡಿ ‘ಹೌದು ಹುಲಿಯಾ’ ಎನ್ನತ್ತೀರಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅನೇಕ ವಿಡಿಯೋಗಳು ಮಾನವನ ಜೀವನಕ್ಕೆ ದಾರಿದೀಪವಾಗುವಂತಹ ಪಾಠಗಳನ್ನು ಕಲಿಸುತ್ತವೆ. ಸದ್ಯ ಇದೇ ರೀತಿಯ ಪುಟ್ಟ ಹುಡುಗನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ನಂತರ ವ್ಯಕ್ತಿಗೆ ಜೀವನದಲ್ಲಿ ಮುನ್ನುಗ್ಗಲು ನಿಶ್ಚಿತವಾಗಿಯೂ ಒಂದು ಪ್ರೇರಣೆ, ಶಕ್ತಿ ದೊರೆಯುತ್ತದೆ. ವಿಡಿಯೋದಲ್ಲಿ ಕಂಡುಬರುವ ಪ್ರಕಾರ, ಅಲ್ಲಿ ಪುಟ್ಟ ಮಕ್ಕಳ ಸೈಕಲ್ ರೇಸ್ ನ ಸ್ಪರ್ಧೆ ನಡೆದಿದೆ. ಸೈಕಲ್ ರೇಸಿನ ಈ ಸ್ಪರ್ಧೆ ನೋಡಲು ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಪುಟ್ಟ ಮಕ್ಕಳ ಪೋಷಕರು ಜಮಾಯಿಸಿದ್ದಾರೆ. ಏತನ್ಮಧ್ಯೆ ರೇಸ್ ಸ್ಟಾರ್ಟ್ ಆಗುತ್ತದೆ. ರೇಸ್ ಸ್ಟಾರ್ಟ್ ಆಗುತ್ತಲೇ ಹುಡುಗನೊಬ್ಬ ಬ್ಯಾಲೆನ್ಸ್ ತಪ್ಪಿ ಪ್ರಾರಂಭದಲ್ಲಿಯೇ ಎಡವಿ ಅಲ್ಲಿಯೇ ಮುಗ್ಗುರಿಸಿ ಬೀಳುತ್ತಾನೆ. ಈ ದೃಶ್ಯ ನೋಡಿದಾಗ ಮನಸ್ಸಿಗೆ ಕಳವಳ ಉಂಟಾಗಿ ಅಯ್ಯೋ ಪಾಪ ಎನಿಸುತ್ತದೆ. ಅದೇ ಸಮಯದಲ್ಲಿ ಇನ್ನೊಬ್ಬ ಪುಟ್ಟ ಹುಡುಗನ ಸೈಕಲ್ ಕೆಳಗೆ ಬಿದ್ದ ಈ ಹುಡುಗನ ತಲೆಗೆ ಬಡಿಯುತ್ತದೆ, ಇದೆಲ್ಲವೂ ನಡೆದಿರುವಾಗ ಉಳಿದ ಸ್ಪರ್ಧಿಗಳು ಈತನನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಹೋಗಿರುತ್ತಾರೆ. ಆದರೂ ಮುಗ್ಗುರಿಸಿ ಬಿದ್ದ ಹುಡುಗ ಇದ್ಯಾವುದರ ವಿಚಾರವನ್ನು ಮಾಡದೆ ಛಂಗನೆ ಎದ್ದು ತನ್ನ ಸೈಕಲ್ ತೆಗೆದುಕೊಂಡು ಮತ್ತೆ ರೇಸಿನ ಸ್ಪರ್ಧೆಯಲ್ಲಿ ಇಳಿದೇ ಬಿಡುತ್ತಾನೆ. ನೋಡನೋಡುತ್ತಲೇ ಹುಡುಗ ಎಲ್ಲರ ಮಧ್ಯದಿಂದ ಹಾಯ್ದು ಯಾರಿಗೂ ಅಡೆತಡೆಯನ್ನು ಮಾಡದೆ ಅಡ್ಡಾದಿಡ್ಡಿಯಾಗಿ ಹೋಗುತ್ತಾ ಎಲ್ಲರನ್ನೂ ಹಿಂದೆ ತಳ್ಳುತ್ತಾ ಈ ರೇಸಿನ ಸ್ಪರ್ಧೆಯಲ್ಲಿ ಮೊದಲ ಕ್ರಮಾಂಕವನ್ನು ಗಿಟ್ಟಿಸಿಯೇ ಬಿಡುತ್ತಾನೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವೀಡಿಯೋ ನೋಡುಗನಿಗೆ ತುಂಬಾ ಒಳ್ಳೆಯ ಸಂದೇಶವನ್ನು ನೀಡುವಂಥದ್ದಾಗಿದೆ. ಜೊತೆಗೆ ಮನೆಯಲ್ಲಿಯ ಮಕ್ಕಳಿಗೂ ಸಹ ಪ್ರೇರಣೆಯನ್ನು ನೀಡುವ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ discovery.engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ನೋಡಿದ್ದು, ಸಾವಿರಾರು ಜನರು ಲೈಕ್ ಮಾಡಿದ್ದಾರೆ.