ಟ್ರಾಫಿಕ್ ನಲ್ಲಿ ಸಿಕ್ಕಾಗ, ಹೇವಿ ಲೇಹಂಗಾ ಧರಿಸಿ ಸ್ಕೂಟರ್ ಮೇಲೆ ತಾನೇ ಮದುವೆಗೆ ಹೋದಳು ವಧು! ವಿಡಿಯೋ ವೈರಲ್…
ಮದುವೆಯ ದಿವಸ ಪ್ರತಿಯೊಬ್ಬರಿಗೂ ಮಹತ್ವದ ದಿನವಾಗಿರುತ್ತದೆ. ಮದುಮಕ್ಕಳು ಇವತ್ತಿನ ದಿವಸ ತುಂಬಾ ಪರ್ಫೆಕ್ಟ್ ಆಗಿ ಕಾಣಿಸಲು ತುಂಬಾ ಪ್ರಯತ್ನ ಪಡುತ್ತಿರುತ್ತಾರೆ. ಅದರಲ್ಲೂ ಹುಡುಗಿಯರು ಈ ದಿವಸಕ್ಕಾಗಿ ಭಾರಿ ಭರ್ಜರಿಯಾಗಿ ತಯಾರಿ ಮಾಡಿರುತ್ತಾರೆ. ಮದುವೆಯ ದಿನ ಯಾವ ಉಡುಪುಗಳನ್ನು ತೊಟ್ಟುಕೊಳ್ಳಬೇಕು ಇವೆಲ್ಲವುದರ ಬಗ್ಗೆ ಮೊದಲೇ ನೀಯೋಜನೆಯನ್ನು ಸರಿಯಾಗಿ ಮಾಡಿರುತ್ತಾರೆ. ಜೊತೆಗೆ ಸ್ಟೇಜ್ ಮೇಲೆ ಯಾವ ರೀತಿ ಎಂಟ್ರಿ ಮಾಡಬೇಕು ಎಂಬುದರ ಬಗ್ಗೆಯೂ ಸರಿಯಾಗಿ ಯೋಚನೆ ಮಾಡುತ್ತಾರೆ. ಇಲ್ಲಿಯವರೆಗೆ ಮದುವೆಯ ಸ್ಥಳಕ್ಕೆ ಮದುಮಕ್ಕಳು ಕಾರಿನಲ್ಲಿಯೇ ಎಂಟ್ರಿ ಮಾಡುವುದನ್ನು ನೋಡಿರಬೇಕು. ಅದರಲ್ಲೂ ವಿಶೇಷವಾಗಿ ವಧು ಕಾರಿನಲ್ಲಿಯೇ ಎಂಟ್ರಿ ಮಾಡುತ್ತಾಳೆ. ಆದರೆ ಇಲ್ಲಿ ನೋಡುವ ವಿಡಿಯೋದಲ್ಲಿ ಮಾತ್ರ ವಧು ತನ್ನದೇ ಮದುವೆಗೆ ನೇರ ಸ್ಕೂಟರ್ ಮೇಲೆ ಹೋಗಿದ್ದಾಳೆ, ಅದು ತುಂಬಾ ಹೇವಿ ಲೆಹಂಗಾ ಉಡುಪನ್ನು ಧರಿಸಿಕೊಂಡು.
ಕಾರಣವೇನು ನೋಡಿ…
ಮದುಮಗಳು ತನ್ನದೇ ಮದುವೆಗೆ ಸ್ಕೂಟರ್ ನಲ್ಲಿ ಹೋಗಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಧು ತನ್ನದೇ ಮದುವೆಗೆ ತುಂಬಾ ಸುಂದರವಾಗಿ ತಯಾರಾಗಿ ಕಾರಿನಲ್ಲಿ ಹೊರಟಿದ್ದಳು. ಆದರೆ ದಾರಿಯ ಮಧ್ಯದಲ್ಲಿ ಕಾರು ತುಂಬಾ ಟ್ರಾಫಿಕ್ ನಲ್ಲಿ ಸಿಕ್ಕಿಬಿದ್ದ ಕಾರಣ ವಧುವಿಗೆ ಮದುವೆಯ ಸ್ಥಳಕ್ಕೆ ಸ್ಕೂಟರ್ ಮೇಲೆ ಹೋಗುವ ಪರಿಸ್ಥಿತಿ ಬಂತು. ವಿಡಿಯೋದಲ್ಲಿ ಕಂಡುಬರುವ ಪ್ರಕಾರ ಮದುಮಗಳು ಮತ್ತು ಆಕೆಯ ಗೆಳತಿ ಇಬ್ಬರೂ ಮೈಮೇಲೆ ತುಂಬಾ ಭಾರವಾದ ಹೆವಿ ಲೆಹೆಂಗ ತೊಟ್ಟಿದ್ದಾರೆ. ಗೆಳತಿ ಸ್ಕೂಟರ್ ನಡೆಸಲು ತಯಾರಾದ ನಂತರ ಮದುಮಗಳು ತನಗೆ ಸಂಬಂಧಪಟ್ಟ ಮಹತ್ವದ ವಸ್ತುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹಿಂದೆ ಕೂಡುತ್ತಾಳೆ.
ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ಲೈಕ್ ಸಹ ಮಾಡಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ತಮ್ಮ ಕಮೆಂಟುಗಳಲ್ಲಿ ನೇಟಿಜನ್ಸ್ ಗಳು ವಧುವಿಗೆ ‘ಸೂಪರ್ ವಧು’ ಎಂದಿದ್ದಾರೆ. ಒಬ್ಬನಂತೂ ‘ಸ್ಟ್ರಗಲ್ ರಿಯಲ್ ಆಗಿದೆ’ ಎಂದು ಕಾಮೆಂಟ್ ಮಾಡಿದ್ದಾನೆ. ‘ಹಿಲ್ಸ್ ಮತ್ತು ಹೆವಿ ಲೆಹೆಂಗಾ ಜೊತೆಗೆ ಈ ರೀತಿಯಾಗಿ ಕೇವಲ ಹುಡುಗಿಯರೇ ಈ ಕೆಲಸ ಮಾಡಲು ಸಾಧ್ಯ’ ಎಂದು ಮತ್ತೊಬ್ಬ ನೇಟಿಜನ್ಸ್ ವರ್ಣಿಸಿದ್ದಾನೆ.
ವಿಡಿಯೋ ನೋಡಿ
View this post on Instagram