ಬದುಕಿನ ಹೋರಾಟದಲ್ಲಿ ಸಿಂಹಕ್ಕೆ ಸೆಡ್ಡು ಹೊಡೆದ ಝೀಬ್ರಾ! ಕಷ್ಟಕ್ಕೆ ಯಾರು, ಎಷ್ಟಿದ್ದರೇನು? ಶೂನ್ಯ; ವಿಡಿಯೋದ ಕೊನೆ ನೋಡಿ.

ಕಾಡು ಪ್ರಾಣಿಗಳ ಜೀವನ ನಿಜಕ್ಕೂ ತುಂಬಾ ರೋಚಕವಾಗಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಬದುಕಲು ಹೋರಾಟ ನಡೆದೇ ಇರುತ್ತದೆ. ಹೋರಾಟದಲ್ಲಿ ಪ್ರಾಣಿಗಳಿಗೆ ಒಮ್ಮೆ ಯಶಸ್ಸು ಸಿಕ್ಕರೆ ಇನ್ನೊಮ್ಮೆ ಸೋಲೂ ಸಿಗುತ್ತದೆ. ಆದರೂ ಅವುಗಳನ್ನು ಸಹಿಸುತ್ತ, ಕಡೆಗೆಣಿಸುತ್ತ ಮುನ್ನುಗ್ಗುತ್ತಿರುತ್ತವೆ ಈ ಪ್ರಾಣಿಗಳು. ಈ ರೀತಿಯ ಸೋಲು ಒಮ್ಮೊಮ್ಮೆ ಕಾಡಿನ ರಾಜನಿಗೂ ಬಿಡುವದಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಝೀಬ್ರಾ ಮತ್ತು ಸಿಂಹಿಣಿಯ ಕಾಳಗದ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ತುಂಬಾ ಸಂಚಲನ ಮೂಡಿಸಿದೆ. ಇದೇ ವಿಡಿಯೋವನ್ನು ನೀವಿಲ್ಲಿ ನೋಡಬಹುದಾಗಿದೆ.

ಈ ವಿಡಿಯೋದ ದೃಶ್ಯದಲ್ಲಿ ಸಿಂಹಿಣಿಯು ಆಹಾರಕ್ಕಾಗಿ ಸಖತ್ ಝೀಬ್ರಾ ಒಂದನ್ನು ಆಯ್ಕೆ ಮಾಡಿ ತನ್ನ ಬಲವಾದ ಬಾಹುವಿನಲ್ಲಿ ಹಿಡಿದು ಜೊತೆಗೆ ಝೀಬ್ರಾದ ಕುತ್ತಿಗೆಯನ್ನು ಸಶಕ್ತವಾದ ಬಾಯಿಯಲ್ಲಿ ಅಲುಗಾಡದಂತೆ ಹಿಡಿದಿದೆ. ಇದೇ ಸಮಯದಲ್ಲಿ ಈ ಹೋರಾಟದ ದೃಶ್ಯವನ್ನು ಅಲ್ಲಿಯೇ ನಿಂತ ಸಾವಿರಾರು ಝೀಬ್ರಾಗಳು ತದೇಕಚಿತ್ತದಿಂದ ನೋಡುತ್ತಿವೆ. ಆದರೆ ಅದರಲ್ಲಿಯ ಯಾವೊಂದು ಝೀಬ್ರಾವೂ ಅದರ ಸಹಾಯಕ್ಕೆ ಬಾರದೆ ಬರೀ ಅಸಹಾಯಕನಾಗಿ ನೋಡುಗನ ಪಾತ್ರವನ್ನಷ್ಟೆ ನಿರ್ವಹಿಸುತ್ತಿವೆ ಎಂಬಂತಿದೆ ಆ ದೃಶ್ಯ.

ಇತ್ತ ಎರಡೂ ಪ್ರಾಣಿಗಳಲ್ಲಿ ಬದುಕಿಗಾಗಿ ಹೋರಾಟ ಉತ್ತುಂಗ ಶಿಖರಕ್ಕೇರಿದೆ ಎಂದರೂ ತಪ್ಪಾಗುವುದಿಲ್ಲ. ಕಾರಣ ಇಲ್ಲಿರುವ ಝೀಬ್ರಾ ಮುಗ್ಧ ಪ್ರಾಣಿಯಲ್ಲ ಎಂಬುದು ಹೋರಾಟದ ಕೊನೆಯಲ್ಲಿ ಸಿಂಹಿಣಿಗೆ ತಿಳಿದು ಬರುತ್ತದೆ. ಸಿಂಹಿಣಿಯ ಜೊತೆಗೆ ತನ್ನ ಬದುಕಿಗಾಗಿ, ಉಳಿವಿಗಾಗಿ ತಾನೇ ಹೋರಾಟ ಮಾಡಬೇಕಾಗಿದೆ, ಇಲ್ಲಿ ಯಾರು, ಎಷ್ಟಿದ್ದರೇನು? ಸಂಘರ್ಷ ಮಾತ್ರ ನಾನೇ ಮಾಡಬೇಕಿದೆ ಎಂದು ಮನಗಂಡ ಝೀಬ್ರಾ ಸೆಡ್ಡು ಹೊಡೆದೇ ಸಿಂಹಿಣಿಯ ಜೊತೆಗೆ ಸಂಘರ್ಷಕ್ಕೆ ಇಳಿದಿದೆ.

ಸಿಂಹಿಣಿ ಎಷ್ಟೇ ಪ್ರಯತ್ನ ಮಾಡಿದರೂ ಝೀಬ್ರಾ ಮಾತ್ರ ತನ್ನ ಹೋರಾಟವನ್ನು ಬಿಡದೆ ಹಾಗೆಯೇ ಮುಂದೆವರೆಸಿ ತನ್ನ ಹೋರಾಟ ಮತ್ತು ಶಕ್ತಿಯ ಬಲದಿಂದ ಸಿಂಹಿಣಿಯ ಹಿಡಿತದಿಂದ ಬಿಡಿಸಿಕೊಂಡು ಓಡಿ ಹೋಗಲು ಯಶಸ್ಸು ಸಾಧಿಸಿದೆ. ಸಿಂಹಿಣಿ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ನಿರಾಸೆಯಿಂದ ಹತಾಶವಾಗಿ ಪೆಚ್ಚು ಮೋರೆ ಹಾಕಿ ಅಲ್ಲಿಂದ ಕದಲಿದೆ.

ವಿಡಿಯೋ ನೋಡಿ

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ animals.energy ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದ್ದು, ಈ ವೀಡಿಯೋವನ್ನು ಇಲ್ಲಿಯವರೆಗೆ 18.4 ಮಿಲಿಯನ್ ಜನರು ನೋಡಿ 6.5 ಲಕ್ಷ ಜನರು ಲೈಕ್ ಗಳನ್ನು ಮಾಡಿದ್ದಾರೆ. ಇಲ್ಲಿ ಝೀಬ್ರಾದ ಗೆಲುವಿಗೆ ಕೆಲವರು ಸಂಭ್ರಮಿಸಿದರೆ, ಇನ್ನು ಕೆಲವರು ಸಿಂಹದ ಸೋಲಿಗೆ ನಿರಾಸೆಯೂ ಆಗಿದ್ದಾರೆ.