ಲೇಡಿ ಪುಷ್ಪಾ! ನಾನು ಸರಿಯುವುದೇ ಇಲ್ಲ; ಸ್ಕೂಟಿ ಸವಾರ ಮಹಿಳೆಯ ಭರ್ಜರಿ ವಿಡಿಯೋ ವೈರಲ್…
ಯಾವಾಗಲೂ ಟ್ರಾಫಿಕ್ ರೂಲ್ಸ್ ಗಳನ್ನು ಸರಿಯಾಗಿ ಫಾಲೋ ಮಾಡಿ ಎಂದು ಸರಕಾರ ಹಾಗೂ ಸಾರಿಗೆ ಇಲಾಖೆ ಸತತವಾಗಿ ಚಾಲಕರಿಗೆ ಜಾಗೃತೆ ಮಾಡುತ್ತಲೇ ಇರುತ್ತದೆ. ಆದರೂ ಎಷ್ಟೋ ಜನ ಚಾಲಕರು ಈ ನಿಯಮಗಳ ಕಡೆಗೆ ನಿರ್ಲಕ್ಷಿಸುತ್ತಾರೆ, ಮತ್ತು ಅನೇಕ ಅವಘಡಗಳಿಗೆ ಕಾರಣರಾಗುತ್ತಾರೆ. ಎಷ್ಟೋ ವಿಡಿಯೋಗಳಲ್ಲಿ ವಾಹನ ಚಾಲಕರು ಮಾಡುವ ಬೇಜವಾಬ್ದಾರಿತನವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತೇವೆ. ಈಗ ಜನರಿಂದ ತುಂಬಿದ ಒಂದು ಬಸ್ ಆಕಸ್ಮಿಕವಾಗಿಯೇ ಸ್ಕೂಟಿ ನಡೆಸುತ್ತಿರುವ ಮಹಿಳೆಯ ಮುಂದೆ ಬರುತ್ತದೆ. ಆಗ ಯಾವುದೇ ಕಾರಣಕ್ಕೂ ಇಬ್ಬರು ಹಿಂದೆ ಸರಿಯಲು ಒಪ್ಪುವುದಿಲ್ಲ. ಇದೇ ದೃಶ್ಯದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಹೆಚ್ಚಾಗಿ ಮಹಿಳೆಯ ಪರ ವಹಿಸಿ ಸಕತ್ತಾಗಿ ಕಮೆಂಟಗಳನ್ನು ಮಾಡುತ್ತಿದ್ದಾರೆ, ಯಾಕೆ ನೋಡಿ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಸ್ಕೂಟಿ ಮೇಲೆ ಮಹಿಳೆಯೊಬ್ಬಳು ಕುಳಿತಿದ್ದಾಳೆ. ಆಕೆಯ ಎದುರು ಒಂದು ಬಸ್ ನಿಂತಿದೆ. ಆ ಸಂದರ್ಭದಲ್ಲಿ ಇಬ್ಬರು ಒಬ್ಬರನ್ನೊಬ್ಬರು ದಿಟ್ಟಿಸುತ್ತಾರೆ ಆದರೆ ಹಿಂದೆ ಸರಿಯಲು ಮಾತ್ರ ಇಬ್ಬರಲ್ಲಿ ಯಾರು ಒಪ್ಪುವುದಿಲ್ಲ. ದೊಡ್ಡದಾದ ಬಸ್ ನೋಡಿ ಮಹಿಳೆಯು ತನ್ನ ಚಿಕ್ಕ ಸ್ಕೂಟರ್ ಮೇಲಿಂದ ಕೆಳಗಿಳಿಯದೆ ಅಥವಾ ಬಸ್ಸಿಗೆ ದಾರಿಮಾಡಿಕೊಡುವ ಗೋಜಿಗೆ ಹೋಗದೆ ಹಾಗೆ ನಡುರಸ್ತೆಯಲ್ಲಿ ನಿಂತು ಬಿಡುತ್ತಾಳೆ. ಅದಕ್ಕೆ ಕಾರಣ ಏನೆಂದರೆ, ಪ್ರಸ್ತುತ ಬಸ್ ಸಾರಿಗೆಯ ನಿಯಮದ ವಿರುದ್ಧ ತಪ್ಪು ಮಾರ್ಗದಿಂದ ಅಥವಾ ತಪ್ಪಾದ ಬದಿಯಿಂದ ನಡೆದು ಮುಂದೆ ಬಂದಿದ್ದು. ಹೀಗಾಗಿ ಮಹಿಳೆಯು ಬಸ್ಸಿನ ಡ್ರೈವರಿಗೆ ಚೆನ್ನಾಗಿ ಸಾರಿಗೆಯ ನಿಯಮದ ಬಗ್ಗೆ ನೆನಪು ಮಾಡಿಕೊಟ್ಟಿದ್ದಾಳೆ. ಇದನ್ನರಿತ ಬಸ್ ಡ್ರೈವರ್ ಕೊನೆಗೆ ತಾನೇ ಹಿಂದೆ ಸರಿದು ಬದಿಯಿಂದ ಬಸ್ ಮುನ್ನುಗ್ಗಿಸಿ ತೆಗೆದುಕೊಂಡು ಹೋಗಿದ್ದಾನೆ. ಏತನ್ಮಧ್ಯೆ ಮಹಿಳೆಯು ತಪ್ಪಾಗಿ ಚಲಾಯಿಸಿದ ಬಸ್ ಡ್ರೈವರ್ ಗೆ ಸರಿಯಾಗಿಯೇ ಪಾಠ ಕಲಿಸಿದ್ದಾಳೆಂದು ನೆಟ್ಟಿಗರು ಮಹಿಳೆಗೆ ಶಬ್ಬಾಷ್ ನೀಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಅನೇಕರು ನೋಡಿ ಶೇರ್ ಸಹ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ದ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ‘memecentral.teb’ ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. “ಜಗತ್ತು ಬಾಗುತ್ತದೆ ಬಾಗಿಸುವ ವ್ಯಕ್ತಿ ಬೇಕಷ್ಟೇ”, ಎಂಬ ಕ್ಯಾಪ್ಷನ್ ಈ ವಿಡಿಯೋಗೆ ನೀಡಲಾಗಿದೆ. ವೀಡಿಯೋ ನೋಡಿದ ಇನ್ನೊಬ್ಬ ಯೂಸರ್, “ಆಕೆ ಒಬ್ಬಳು ಮಹಿಳೆ ಇದ್ದಾಳೆ, ಆಕೆ ಏನು ಬೇಕಾದರೂ ಮಾಡಬಹುದು” ಎಂದಿದ್ದಾನೆ. ಒಟ್ಟಿನಲ್ಲಿ ಈ ಮಹಿಳೆಗೆ ಲೇಡಿ ಪುಷ್ಪ ಎಂದು ಸೋಶಿಯಲ್ ಮೀಡಿಯಾದಲ್ಲಿ ಕರೆಯುತ್ತಿದ್ದಾರೆ.