ನೋಡನೋಡುತ್ತಲೇ 3 ಕೋಟಿ ₹ ಗಳ ಬೀಚ್ ಹೌಸ್ ಹರಿದು ಹೋಯಿತು ಸಮುದ್ರದ ರೌದ್ರತೆಯಲ್ಲಿ! ದೃಶ್ಯ ವಿಡಿಯೋದಲ್ಲಿ ಸೆರೆ.

ಹವಾಮಾನದಲ್ಲಿ ವಿಪರೀತವಾದ ಬದಲಾವಣೆಗಳು ಆಗುತ್ತಿರುವುದರಿಂದ ಮಾನವ ಅನೇಕ ದುಷ್ಪರಿಣಾಮಗಳಿಗೆ ಫೇಸ್ ಮಾಡಬೇಕಾಗುವ ಪರಿಸ್ಥಿತಿ ಉದ್ಭವಿಸುತ್ತಿದೆ. ಅಮೆರಿಕೆಯಲ್ಲಿಯ ಕೆರೊಲೀನ ಬೀಚಿನಲ್ಲಿ ಕಟ್ಟಿದ ಸುಂದರ ಬೀಚ್ ಹೌಸ್ ಸಮುದ್ರದ ರೌದ್ರ ರೂಪಕ್ಕೆ ಬಲಿಯಾಗಿದೆ. ಇದೇ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದಾಗ ಸಮುದ್ರದ ಶಕ್ತಿ ಎಂತಹದಿರುತ್ತದೆ ಎಂಬುದು ಅರಿವಾಗುತ್ತದೆ. ಅಮೆರಿಕ ನ್ಯಾಷನಲ್ ಪಾರ್ಕ್ ಸರ್ವಿಸ್ ನವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಮೇ 10 ರಂದು ವೇಗವಾಗಿ ಬೀಸುವ ಗಾಳಿಯಿಂದಾಗಿ ಸಮುದ್ರದಿಂದ ತುಂಬಾ ದೊಡ್ಡ ದೊಡ್ಡ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿದ್ದವು. ಮೊದಲು ಮನೆಯ ಕೆಳಗಿನ ಭಾಗವು ತೆರೆಗಳ ಹೊಡೆತಕ್ಕೆ ವಿನಾಶವಾದ ನಂತರ ಮೇಲಿನ ಭಾಗವು ಸಮುದ್ರದಲ್ಲಿ ಅನಾಮತ್ತಾಗಿ ತೇಲಾಡುತ್ತಿರುವದು ಕಂಡುಬರುತ್ತಿದೆ. ಈ ಮನೆಯಲ್ಲಿ ಯಾರು ಇರದೆ ಹಾಗೆಯೇ ಖಾಲಿ ಇತ್ತು. ಮುಖ್ಯ ಭೂಭಾಗದಿಂದ 48 ಮೈಲಿಗಳ ಅಂತರದಲ್ಲಿ ಕಟ್ಟಿದ ಈ ಮನೆ ಕೋಸ್ಟಲ್ ಫ್ಲಡ್ ಗೆ ಬಲಿಯಾಗಿದೆ.

ಈ ವಿಡಿಯೋವನ್ನು ನ್ಯಾಷನಲ್ ಪಾರ್ಕ್ ಸರ್ವಿಸ್ ನವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ದಿನದ 24 ಗಂಟೆಗಳಲ್ಲಿ ಈ ರೀತಿಯಾಗಿ ಸಮುದ್ರದ ಮಹಾಕಾಯ ಅಲೆಗಳಿಗೆ ಬಲಿಯಾದ ಇದು ಎರಡನೆಯ ಮನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮನೆಯು ಸಮುದ್ರದ ನೀರಿನಲ್ಲಿ ಕೊಚ್ಚಿಹೋಗುವ ಕೆಲವೇ ಕ್ಷಣಗಳ ಮೊದಲು ಈ ವಿಡಿಯೋ ಮಾಡಿಕೊಳ್ಳಲಾಗಿದೆ.

ಡೈಲಿ ಸ್ಟಾರ್ ನೀಡಿದ ಮಾಹಿತಿಯ ಪ್ರಕಾರ, ಈ ಮನೆಯ ಬೆಲೆ £308,000 ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 2 ಕೋಟಿ 92 ಲಕ್ಷ ರೂಪಾಯಿಗಳಷ್ಟಾಗಿದೆ. ಈ ಪರಿಸರದಲ್ಲಿ 15 ಅಡಿಗಳಿಗಿಂತಲೂ ದೊಡ್ಡದಾದ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತ್ತಿವೆ. ಹೀಗಾಗಿ ಕರಾವಳಿಯಲ್ಲಿದ್ದ ಸಿ ಹೌಸ್ ಗಳು ಸರ್ವನಾಶವಾಗಿವೆ.

ಈ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಮುಖಾಂತರ ತಿಳಿಸಿದ್ದಾರೆ. ಅದರಲ್ಲಿ ಒಬ್ಬನು ಈ ರೀತಿಯ ಮನೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಾಧಿಕಾರ ಏನಾದರೂ ಸಹಾಯ ಮಾಡಬೇಕೆಂದಿದ್ದಾನೆ. ಇನ್ನೊಬ್ಬ ಈ ರೀತಿಯ ಮನೆಗಳನ್ನು ಕಟ್ಟುವ ಎಂಜಿನಿಯರ್ ಗಳಿಗೆ ಹಣ ಕೊಡಲೇಬಾರದು ಜೊತೆಗೆ ವಿಮೆ ಹಣ ಸಿಗಬಾರದೆಂದು ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂದಿದ್ದಾರೆ.

ವಿಡಿಯೋ ನೋಡಿ