ಜಲಪಾತಕ್ಕೆ ಮೈಯೊಡ್ಡಿ ಸುಖ ಪಡೆಯುವಾಗಲೇ ನೀರಿನ ಜೊತೆಗೆ ಬಂದು ಬಿತ್ತು ಕಾಳಿಂಗ ಸರ್ಪ! ಮುಂದೆ? ದೃಶ್ಯ ವಿಡಿಯೋದಲ್ಲಿ ಸೆರೆ…
ಸದ್ಯ ಬೇಸಿಗೆ ಸಮಯವಿರುವುದರಿಂದ ರಜೆಯಲ್ಲಿ ಎಲ್ಲರೂ ತಮ್ಮ ತಮ್ಮ ಕುಟುಂಬದವರ ಜೊತೆ ಅತ್ತಿತ್ತ ಸುತ್ತಾಡಲು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಹೆಚ್ಚಾಗಿ ಎಲ್ಲರೂ ನೀರಾಟವಾಡಲು ಅಥವಾ ಜಲಪಾತಗಳ ಕೆಳಗೆ ಆಟವಾಡಲು ಬರುವಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ. ಈ ರೀತಿಯಾಗಿ ಸುತ್ತಾಡಲು ಹೋದಾಗ ನಮ್ಮ ಜೊತೆಗೆ ಅನೇಕ ಪ್ರಕಾರದ ಘಟನೆಗಳು ಘಟಿಸುತ್ತಿರುತ್ತವೆ. ಸದ್ಯ ಇದೇ ರೀತಿಯ ಒಂದು ಘಟನೆ ಜಲಪಾತದ ಜಲಧಾರೆಯಲ್ಲಿ ಮೈಯೊಡ್ಡಿ ಸುಖವನ್ನು ಪಡೆಯುತ್ತಿರುವ ವ್ಯಕ್ತಿಯ ಜೊತೆಗೆ ನಡೆದಿದೆ. ಫುಲ್ ಸಂತೋಷದಲ್ಲಿದ್ದು ತಣ್ಣೀರಿನ ಸುಖವನ್ನು ಪಡೆಯುತ್ತಿರುವಾಗಲೇ ವ್ಯಕ್ತಿಯ ಜೊತೆ ನಡೆದ ಕಲ್ಪನೆಗೂ ಮೀರಿದ ಮೈನವಿರೇಳಿಸುವ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಸುಡು ಬಿಸಿಲಿನ ಬೇಗೆಗೆ ಬೇಸತ್ತ ವ್ಯಕ್ತಿಯೊಬ್ಬ ಜಲಧಾರೆಯ ಕೆಳಗೆ ದೊಡ್ಡದಾದ ಬಂಡೆಯ ಮೇಲೆ ಕುಳಿತು ಆನಂದ ಸವಿಯುತ್ತಿರುವಾಗ ಜಲಧಾರೆಯ ನೀರಿನ ಜೊತೆಯೇ ಮೇಲಿನಿಂದ ಕಾಳಿಂಗ ಸರ್ಪವೊಂದು ಆತನ ಮಗ್ಗುಲಲ್ಲಿಯೇ ಬೀಳುತ್ತದೆ. ಅಷ್ಟಾದರೂ ಆತ ತನ್ನ ಖುಷಿಯಲ್ಲಿಯೇ, ತನ್ನ ಲೋಕದಲ್ಲಿಯೇ ಮುಳುಗಿದ್ದಾನೆ. ಹೀಗಾಗಿ ಆ ಹಾವಿನ ಕಡೆಗೆ ಆತ ಸ್ವಲ್ಪವೂ ಗಮನವೇ ನೀಡಿಲ್ಲ.
ಎದುರಿಗೆ ನಿಂತು ಆತನ ವಿಡಿಯೋ ಶೂಟ್ ಮಾಡುವವರು ಅದನ್ನು ಗಮನಿಸಿದ ಮೇಲೆ ಜೋರಾಗಿ ಕಿರುಚಿದ್ದಾರೆ. ಆಗ ಮಾತ್ರ ಪ್ರಸ್ತುತ ವ್ಯಕ್ತಿ ಹಾವನ್ನು ನೋಡಿದ್ದಾನೆ. ಕೆಳಗೆ ಬಿದ್ದ ಹಾವು ಪದೇಪದೇ ಬಂಡೆಗಲ್ಲಿನ ಮೇಲೆ ಏರಿ ಆತನ ಕಡೆಗೆಯೇ ಹೋಗಲು ಯತ್ನಿಸುತ್ತಿತ್ತು. ಆದರೆ ಮೇಲಿನಿಂದ ಬೀಳುತ್ತಿರುವ ಜಲಪಾತದ ನೀರಿನ ಒತ್ತಡದಿಂದಾಗಿ ಅದಕ್ಕೆ ವ್ಯಕ್ತಿ ಕುಳಿತ ಬಂಡೆಗಲ್ಲಿನ ಮೇಲೆ ಏರಲು ಸಾಧ್ಯವಾಗಿಲ್ಲ. ಹಾವು ಮಾತ್ರ ಪದೇ ಪದೇ ತನ್ನ ಹೆಡೆಯನ್ನು ತೆಗೆದು ಆತನೆಡೆಗೆ ಹೋಗಲು ಪ್ರಯತ್ನಿಸುತ್ತಲೇ ಇತ್ತು. ವೀಡಿಯೋ ಶೂಟ್ ಮಾಡುವವರ ಕಿರುಚಾಟ ಕೇಳಿದ ನಂತರ ಹಾವನ್ನು ನೋಡಿದ ವ್ಯಕ್ತಿ ತಕ್ಷಣ ಅಲ್ಲಿಂದ ಕದಲಿದ್ದಾನೆ.
ವಿಡಿಯೋ ನೋಡಿ
View this post on Instagram
ಈ ಮೈನವಿರೇಳಿಸುವ ಈ ವಿಡಿಯೋವನ್ನು Discovery Engenharia ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ.