ಈ ಅಂಕಲ್ ಡಾನ್ಸ್ ಮುಂದೆ ಹುಡುಗಿಯರ ಡಾನ್ಸ್ ಮಟಾಷ್! ಸೈಲೆಂಟ್ ಮ್ಯೂಸಿಕ್, ಸೂಪರ್ ಸ್ಟೆಪ್ಸ್; ವಿಡಿಯೋ ವೈರಲ್.
ಕಲೆ ಇದು ಹಣ ಕೊಟ್ಟು ಖರೀದಿಸುವ ವಸ್ತು ಆಗಿಲ್ಲ. ಅದು ರಕ್ತದಲ್ಲಿಯೇ ಹುಟ್ಟಿ ಬಂದಿರುತ್ತದೆ. ಅದರ ಮೇಲೆ ಯಾರದ್ದೂ ಬಲವಂತವಾದ ಅಧಿಕಾರ ನಡೆಯುವುದಿಲ್ಲ. ತಾನಾಗಿಯೇ ದೇಹದಲ್ಲಿ ಬೆರೆತುಕೊಂಡಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ಗಳ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಜನರು ಇಂಥ ವಿಡಿಯೋಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಈಗ ಮದುವೆಯ ಸಮಾರಂಭದಲ್ಲಿ ಅಂಕಲ್ ಒಬ್ಬರು ಮಾಡಿದ ಡಾನ್ಸಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸುತ್ತಾಡುತ್ತಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟ ವಾಗಿರುವುದರಿಂದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿ ತುಂಬಾ ಒಳ್ಳೆಯ ಗ್ರೆ ಬಣ್ಣದ ಡ್ರೆಸ್ ಹಾಕಿಕೊಂಡಿದ್ದಾರೆ. ಡ್ಯಾನ್ಸ್ ಮಾಡುವಾಗ ಮುಖದ ಮೇಲಿನ ಎಕ್ಪ್ರೇಶನ್ ವಿಶೇಷವಾಗಿ ಕಂಡು ಬರುತ್ತಿದೆ. ಕೇವಲ ಹದಿನೈದು ಸೆಕೆಂಡುಗಳ ಈ ವಿಡಿಯೋದಲ್ಲಿ ಅಂಕಲ್ ತುಂಬಾ ಸುಂದರವಾಗಿ ಸ್ಟೆಪ್ ಗಳನ್ನು ಹಾಕಿದ್ದಾರೆ. ಅವರ ಬಾಡಿ ಲಾಂಗ್ವೇಜ್ ಇವರು ಯಾವ ಡಾನ್ಸರ್ ಗಳಿಗೂ ಕಡಿಮೆ ಇಲ್ಲ ಎಂದು ಹೇಳುವ ಹಾಗಿದೆ. ಹಿಂದೆ ಕೇಳಿಬರುತ್ತಿರುವ ಸಂಗೀತಕ್ಕೆ ಅನುಗುಣವಾಗಿ ಮಾಡುತ್ತಿರುವ ಸರಿಯಾದ ಬಾಡಿ ಮೂವ್ ಮೆಂಟ್ಸ್ ಗಳನ್ನು ನೋಡಿದಾಗ ಅಂಕಲ್ ಅವರ ಡ್ಯಾನ್ಸ್ ನಿಜಕ್ಕೂ ತುಂಬಾ ಅದ್ಭುತವೆನಿಸುತ್ತದೆ. ಇವರು ಮಾಡಿರುವ ಈ ಡ್ಯಾನ್ಸ್ ಇಲ್ಲಿಯವರೆಗೆ 10.1 ಮಿಲಿಯನ್ ಜನರು ನೋಡಿದ್ದಾರೆ. ಜೊತೆಗೆ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ಡಾನ್ಸ್ ಗೆ ಲೈಕ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಬಾಲಿವುಡ್ ಸ್ಟಾರ್ ಗೋವಿಂದ ಅವರಿಗೆ ಹೋಲಿಸುತ್ತಿದ್ದರು. ಕಾರಣ ಅವರ ಹಾಡುಗಳಿಗೆ ಹೆಚ್ಚಾಗಿ ಇವರು ಕುಣಿದದ್ದು.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ maxxozipp ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.