ಅನಾರೋಗ್ಯಕ್ಕೆ ತುತ್ತಾದ ಸಂಗಾತಿಗೆ ಎಮ್ಮೆಗಳ ಅಟ್ಯಾಕ್ ನಿಂದ ರಕ್ಷಿಸಿದ ಸಿಂಹ! ವಿಡಿಯೋ ನೋಡಿ ಸಿಂಹದ ಪ್ರೀತಿಗೆ ಫಿದಾ ಆದ ನೆಟ್ಟಿಗರು.

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವ ಅನೇಕ ವಿಡಿಯೋಗಳು ನೋಡಲು ಸಿಗುತ್ತವೆ. ಇಂಥ ವಿಡಿಯೋಗಳನ್ನು ನೇಟಿಜನ್ಸ್ ಗಳು ಸಹ ತುಂಬಾ ಇಷ್ಟಪಡುತ್ತಾರೆ. ಸಿಂಹವೊಂದು ತನ್ನ ಸಂಗಾತಿಯನ್ನು ಬಲಶಾಲಿ ಎಮ್ಮೆಗಳ ಅಟ್ಯಾಕ್ ನಿಂದ ಸಂರಕ್ಷಿಸಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತೂಫಾನ್ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಕಾಡಿನಲ್ಲಿಯ ರಸ್ತೆಯ ಒಂದು ಬದಿಗೆ ಸಿಂಹಿಣಿ ಅನಾರೋಗ್ಯದ ಕಾರಣದಿಂದಾಗಿ ಕೆಳಗೆ ಕುಸಿದು ಬಿದ್ದಿದೆ. ಅದಕ್ಕೆ ಬಹುಶಃ ಏಳಲು ಸಹ ಕಠಿಣವಾಗುತ್ತಿದೆ. ಈ ಸಮಯಕ್ಕೆ ಎಮ್ಮೆಗಳ ಗುಂಪೊಂದು ಸಿಂಹಿಣಿಯ ಮೇಲೆ ಅಟ್ಯಾಕ್ ಮಾಡಲು ಹೊಂಚು ಹಾಕುತ್ತವೆ. ಏತನ್ಮಧ್ಯೆ ಸಿಂಹಿಣಿಯ ಸಂಗಾತಿ ಸಿಂಹವು ಹಠಾತ್ ಆ ಎಮ್ಮೆಗಳ ಗುಂಪಿನ ಮಧ್ಯದಲ್ಲಿ ಬಂದು ಗೋಡೆಯಂತೆ ನಿಂತಿದೆ. ಜೊತೆಗೆ ಎಮ್ಮೆಗಳು ತನ್ನ ಸಂಗಾತಿಯ ಮೇಲೆ ಅಟ್ಯಾಕ್ ಮಾಡದಂತೆ ಕಾಳಜಿ ವಹಿಸುತ್ತದೆ. ಮತ್ತು ಅಟ್ಯಾಕ್ ಮಾಡಲು ಬರುತ್ತಿರುವ ಎಮ್ಮೆಯ ಮೇಲೆ ಏರಿಹೋಗಲು ಸಹ ತಯಾರಾಗುತ್ತದೆ. ಸಿಂಹಿಣಿಗೆ ಎಮ್ಮೆಗಳಿಂದ ಯಾವುದೇ ರೀತಿಯ ಅಪಾಯವಾಗದಂತೆ ಸಿಂಹ ಸಂಪೂರ್ಣವಾಗಿ ಜವಾಬ್ದಾರಿ ಮತ್ತು ಕಾಳಜಿ ವಹಿಸುತ್ತದೆ. ಅಷ್ಟರಲ್ಲಿ ಸಿಂಹಿಣಿ ಹೇಗೋ ಎದ್ದು ಅಲ್ಲಿಂದ ಮೊದಲು ಜಾಗ ಖಾಲಿ ಮಾಡಬೇಕೆಂಬ ಉದ್ದೇಶದಿಂದ ಹೊರಟು ಬಿಡುತ್ತದೆ. ಸಿಂಹವೂ ಸಹ ಎಮ್ಮೆಗಳನ್ನು ಬ್ಯಾಕ್ ಫುಟ್ ಗೆ ಸರಿಸಿ ತನ್ನ ಕೆಲಸ ಮುಗಿಯಿತೆಂದು ತಿಳಿದು ಸಿಂಹಿಣಿಯ ಹಿಂದೆಯೇ ಹೋಗುತ್ತದೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ‘NexVay’ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡುವುದರ ಜೊತೆಗೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ.