ವರನ ಮೆರವಣಿಗೆ ಬಾಗಿಲಿಗೆ ಬರುತ್ತಲೇ ಕುತೂಹಲ ತಾಳದೆ ಆತನನ್ನು ನೋಡಲು ಬಾಲ್ಕನಿಗೆ ಬಂದ ವಧು ಮಾಡಿದ್ದೇನು? ನೋಡಿ ವಿಡಿಯೋ.

ದಿವಸ ಪ್ರತಿಯೊಂದು ಹುಡುಗಿಗೆ ತುಂಬಾ ಮಹತ್ವದ ಕ್ಷಣಗಳಾಗಿರುತ್ತವೆ. ಈ ದಿನಕ್ಕಾಗಿ ಆಕೆ ಅನೇಕ ಕನಸುಗಳನ್ನು ಕಾಣುವುದರ ಜೊತೆಗೆ ತುಂಬಾ ತಯಾರಿಯನ್ನು ಸಹ ಮಾಡಿಕೊಂಡಿರುತ್ತಾಳೆ. ಅದರಲ್ಲಿಯೂ ಹುಡುಗಿಗೆ ತನಗೆ ಇಷ್ಟವಾದ ಪತಿ ಸಿಕ್ಕರಂತೂ ಸ್ವರ್ಗ ಮೂರೆ ಗೇಣು ಆಗಿರುತ್ತದೆ. ಮದುವೆಯ ದಿನ ಆಕೆ ತುಂಬಾ ಖುಷಿಯಾಗಿರುತ್ತಾಳೆ. ವರನ ಅಥವಾ ತನ್ನ ಭಾವಿ ಗಂಡನ ಮೆರವಣಿಗೆ ಮನೆಗೆ ಬರುತ್ತಲೇ ಪ್ರತಿಯೊಬ್ಬಳು ವಧು ತನ್ನ ಗಂಡನಿಗೆ ನೋಡುವ ಕುತೂಹಲ ಹೊಂದಿರುತ್ತಾಳೆ. ಅನೇಕ ಸಲ ಎಷ್ಟೋ ಹುಡುಗಿಯರು ತನ್ನನ್ನು ವರಿಸಲಿರುವ ತನ್ನ ಭಾವಿ ಪತಿ ಮದುವೆಯ ಉಡುಗೆಯಲ್ಲಿ ಹೇಗೆ ಕಾಣಿಸುತ್ತಿದ್ದಾನೆ ಎಂದು ಕಣ್ತುಂಬಿಕೊಳ್ಳಲು ಮದುವೆಯಲ್ಲಿ ಕದ್ದು ಕದ್ದು ನೋಡುತ್ತಿರುತ್ತಾರೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ. ವರನ ಮೆರವಣಿಗೆ ವಧುವಿನ ಮನೆಯ ಬಾಗಿಲಿಗೆ ಬರುತ್ತಲೇ ವಧು ಕುತೂಹಲವನ್ನು ತಾಳದೆ ತನ್ನ ಭಾವಿ ಪತಿಯನ್ನು ನೋಡಲು ಬಾಲ್ಕನಿಗೆ ಬಂದ ದೃಶ್ಯ ತುಂಬಾ ಮಜವಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ವರನ ಮೆರವಣಿಗೆ ಊದಿಸುತ್ತಾ, ಬಾರಿಸುತ್ತಾ ವಧುವಿನ ಮನೆಯ ಬಾಗಿಲಿಗೆ ಬರುತ್ತದೆ. ಆ ಸಮಯದಲ್ಲಿ ವಧು ಮನೆಯಲ್ಲಿ ಇರುತ್ತಾಳೆ. ಇಲ್ಲಿ ವಧುವಿಗೆ ತನ್ನ ಭಾವಿ ಪತಿಯನ್ನು ನೋಡುವ ಕಾತುರ ಹೆಚ್ಚಾಗುತ್ತದೆ. ಆಗ ಆಕೆ ಬಾಲ್ಕನಿಗೆ ಬಂದು ಕೆಳಗೆ ಮೆರವಣಿಗೆಯ ಜೊತೆಗೆ ಬರುತ್ತಿರುವ ತನ್ನ ಪತಿಯನ್ನು ನೋಡಿ ತುಂಬಾ ಖುಷಿ ಪಡುತ್ತಾಳೆ. ಮತ್ತು ಖುಷಿಯಲ್ಲಿ ಆಕೆ ಬಾಲ್ಕನಿಯಲ್ಲಿ ಸ್ವಲ್ಪ ಡಾನ್ಸ್ ಸಹ ಮಾಡುತ್ತಾಳೆ. ವಧುವಿನ ಈ ದೃಶ್ಯವನ್ನು ಕ್ಯಾಮೆರಾಮ್ಯಾನ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ವರ ಮದುವೆಗಾಗಿ ತನ್ನ ಮನೆಗೆ ಬಂದ ಖುಷಿಯಲ್ಲಿ ವಧು ಮಾಡಿದ ಈ ದೃಶ್ಯ ನೇಟಿಜನ್ಸ್ ಗಳು ತುಂಬಾ ಮೆಚ್ಚಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by The Bride™ (@the.bride.magazine)

ಈ ಅಪರೂಪದ ಮತ್ತು ವಧುವಿನ ಸಂತೋಷದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ the.bride.magazine ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು, ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ಆನಂದಿಸಿ, ಲೈಕ್ ಸಹ ಮಾಡಿದ್ದಾರೆ.