ಆವಾಂತರ ಸೃಷ್ಟಿಸಿದ ಪುಟ್ಟನ ಈ ಕ್ರಿಯೇಟಿವಿಟಿ ನೋಡಿ ನಕ್ಕು ನಕ್ಕು ಸುಸ್ತಾದರೆ ನಾವು ಜವಾಬ್ದಾರರಲ್ಲ! ನೋಡಿ ಈ ವಿಡಿಯೋ.

ಮಕ್ಕಳಿಗೆ ಸ್ವಲ್ಪ ಸ್ವತಂತ್ರವಾಗಿ ಬಿಟ್ಟರೆ ಅವರೇನು ಮಾಡುತ್ತಾರೆಂಬುದು ಹೇಳಲು ಸಾಧ್ಯವಿಲ್ಲ. ಅವರು ಮಾಡುವ ವಿವಿಧ ತರ್ಕಗಳಿಂದ ಕೂಡಿದ ಕೃತ್ಯಗಳು ಕೆಲವೊಮ್ಮೆ ದೊಡ್ಡ ದೊಡ್ಡ ಅವಾಂತರಗಳು ಸೃಷ್ಟಿಸಿದ ಎಷ್ಟೋ ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತೇವೆ ಮತ್ತು ಓದುತ್ತೇವೆ. ಅವರ ತುಂಟಾಟಗಳು ಕೆಲವೊಮ್ಮೆ ಸ್ವತಃ ಅವರಿಗೂ ದುಬಾರಿಯಾಗಿ ಪರಿಣಮಿಸಿದರೆ ಇನ್ನು ಕೆಲವು ಬಾರಿ ಮನೆಯ ಸದಸ್ಯರಿಗೂ ದುಬಾರಿಯಾಗಿ ಪರಿಣಮಿಸುತ್ತವೆ. ಇದೇ ರೀತಿ ತುಂಟ ಹುಡುಗನೊಬ್ಬ ಮಾಡಿದ ತುಂಟಾಟದ ಕೆಲಸದಿಂದಾಗಿ ತಾನೇ ಅವಾಂತರದಲ್ಲಿ ಸಿಕ್ಕಿಬಿದ್ದಿದ್ದಾನೆ. ಆತ ಮಾಡಿದ ತುಂಟಾಟದ ದೃಶ್ಯ CCTV ಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುವುದೊಂದೇ ಬಾಕಿ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಪುಟ್ಟ ಹುಡುಗನೊಬ್ಬ ಅಂಗಳದಲ್ಲಿ ಉಯ್ಯಾಲೆ ಆಡುತ್ತಿದ್ದಾನೆ. ಉಯ್ಯಾಲೆ ಆಡುವಾಗ ಮಕ್ಕಳು ಕಾಲುಗಳ ಸಹಾಯದಿಂದ ನೆಲದ ಮೇಲೆ ತಿರುಗುತ್ತಾ ತಿರುಗುತ್ತಾ ಮೇಲಿನಿಂದ ಹಗ್ಗವನ್ನು ಹುರಿಯಾಗಿಸಿ ನಂತರ ಒಮ್ಮೆಲೆ ಕಾಲುಗಳನ್ನು ನೆಲದಿಂದ ಎತ್ತಲು ಉಯ್ಯಾಲೆ ಗರಗರನೆ ತಲೆ ಸುತ್ತಿ ಬರುವ ಹಾಗೆ ತಿರುಗಿಸುತ್ತದೆ. ಇದು ಮಕ್ಕಳಿಗೆ ತುಂಬಾ ತಮಾಷೆ ಹಾಗೂ ಮಜಾ ನೀಡುವ ಆಟವಾಗಿದೆ. ಈ ಹುಡುಗನು ಸಹ ಉಯ್ಯಾಲೆಯನ್ನು ಮೊದಲು ಸರಿಯಾಗಿ ಆಡಿ ಬೇಸತ್ತ ನಂತರ ನಿಂತಲ್ಲಿಯೆ ಗರಗರನೆ ತಿರುಗುವ ಆಟ ಆಡಲು ಪ್ರಯತ್ನಿಸಿದ್ದಾನೆ. ಮೊದಲು ಉಯ್ಯಾಲೆಯನ್ನು ಚೆನ್ನಾಗಿ ತಿರುಗಿಸಿ ಹಗ್ಗಕ್ಕೆ ಮೇಲಿನಿಂದ ಸಾಕಷ್ಟು ಹುರಿಬಿದ್ದ ನಂತರ ಅದರಲ್ಲಿ ಕುಳಿತುಕೊಳ್ಳುತ್ತಾನೆ.

ಈಗ ಸ್ಟಾರ್ಟ್ ಆಯ್ತು ನೋಡಿ ಕ್ಲೈಮ್ಯಾಕ್ಸ್…

ಪುಟ್ಟನು ಉಯ್ಯಾಲೆಯಲ್ಲಿ ಕುಳಿತ ನಂತರ ಅದು ತನ್ನ ಪೂರ್ವ ಸ್ಥಿತಿಗೆ ಬರುವದಕ್ಕಾಗಿ ತುಂಬಾ ವೇಗವಾಗಿ ಗರಗರನೆ ತಿರುಗಲು ಪ್ರಾರಂಭಿಸಿದೆ. ಪುಟ್ಟನೂ ಅದರ ಜೊತೆಗೆ ಒಳಗೆ ಕುಳಿತು ತುಂಬಾ ವೇಗವಾಗಿ ತಿರುಗಿದ ನಂತರ ಹಾಗೆಯೇ ಹಠಾತ್ ಕೆಳಗೆ ಇಳಿದಿದ್ದಾನೆ. ಈಗ ನೋಡಿ ಪುಟ್ಟನ ಅವಸ್ಥೆ, ತೀರ ದುರವಸ್ಥೆ ಆಗಿಹೋಗಿದೆ. ಪುಟ್ಟ ಜೋಕಾಲಿಯಿಂದ ಇಳಿದ ನಂತರ ಆತನಿಗೆ ಬ್ಯಾಲನ್ಸೇ ಮಾಡಲು ಸಾಧ್ಯವಾಗುತ್ತಿಲ್ಲ. ನಶೆ ಮಾಡಿದ ರೀತಿಯಲ್ಲಿ ಒಂದು, ಎರಡು, ಮತ್ತು ಮೂರನೆಯ ಬಾರಿಯಂತೂ ನೇರ ರಸ್ತೆಯ ಆಚೆಗೆ ಹೋಗಿ ಬೀಳುತ್ತಾನೆ. ಪುಟ್ಟನ ಸಖತ್ ತಮಾಷೆಯಿಂದ ಕೂಡಿದ ಈ ವಿಡಿಯೋ ನೇಟಿಜನ್ಸ್ ಗಳ ಮನಸ್ಸು ಮಾತ್ರ ಸಖತ್ತಾಗಿ ಗೆದ್ದಿದೆ.

ವಿಡಿಯೋ ನೋಡಿ

 

View this post on Instagram

 

A post shared by TARGET 200K🇮🇳 (@theharami_)

ಈ ಮಜದಿಂದ ಕೂಡಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ theharami ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ.