ನೀವೇ ಹೇಳಿ ಇದು ನಾಟ್ಕಾನಾ, ಇಲ್ಲ ನಿಜಾ? ಈ ಚಿಂಪಾಂಜಿಗೆ ಯಾರೇನು ಮಾಡಿದ್ರು? ಪಾಪ! ಅದ್ಯಾವ ತರ ಗಂಟಲು ಹರಿದುಕೊಳ್ತಾ ಇದೆ.
ಇತ್ತಿತ್ತಲಾಗಿ ಪ್ರಾಣಿಗಳ ಜೊತೆಗೆ ಮನುಷ್ಯರ ಸಂಪರ್ಕ ತುಂಬಾ ಹೆಚ್ಚಾಗಿರೋದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಸಾರವಾಗುವ ವಿಡಿಯೋಗಳಿಂದ ಗೊತ್ತಾಗುತ್ತದೆ. ಮೊದಲು ಮನುಷ್ಯ ಕಾಡು ಪ್ರಾಣಿಗಳೆಂದರೆ ಸಾಕು ಅಷ್ಟಕ್ಕಷ್ಟೇ, ಅವುಗಳಿಂದ ದೂರವೇ ಇರಲು ಪ್ರಯತ್ನಿಸುತ್ತಿದ್ದ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ವಿಡಿಯೋಗಳನ್ನು ನೋಡಿದರೆ ಕೆಲವರು ಅತೀ ಕ್ರೂರ ಪ್ರಾಣಿಗಳ ಜೊತೆಗೂ ಮಿತ್ರನಂತೆ ನಡೆದುಕೊಳ್ಳುತ್ತಾರೆ. ಅಷ್ಟೊಂದು ಪ್ರೀತಿ, ವಿಶ್ವಾಸ ಆ ಕ್ರೂರ ಪ್ರಾಣಿಗಳಿಂದ ಸಂಪಾದನೆ ಮಾಡಿಕೊಂಡಿರುತ್ತಾರೆ. ಹೀಗಾಗಿ ಪ್ರಾಣಿಗಳು ಸಹ ಮನುಷ್ಯನ ಜೊತೆಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತವೆ. ಹೀಗೆ ಮಾಡುವಾಗ ಕೆಲವೊಮ್ಮೆ ಏನಾದರೂ ಹೆಚ್ಚು ಕಡಿಮೆ ಆದರೆ ಪ್ರಾಣಿಗಳು ಸಹ ಮನುಷ್ಯನ ಹಾಗೆ ಆಕ್ಟಿಂಗ್ ಮಾಡುತ್ತವೆ. ಇಂಥ ವಿಡಿಯೋಗಳನ್ನು ನೆಟ್ಟಿಗರು ತುಂಬಾ ಇಂಟರೆಸ್ಟ್ ನಿಂದ ನೋಡುತ್ತಾರೆ. ಇದೇ ರೀತಿಯ ಚಿಂಪಾಂಜಿಯ ಜೊತೆಗಿನ ವಿಡಿಯೋ ಒಂದು ತುಂಬಾ ರೋಚಕವಾಗಿದೆ.
ಪ್ರಸ್ತುತ ವಿಡಿಯೋದಲ್ಲಿ ಒಂದು ಚಿಂಪಾಂಜಿ ಝೂ ನಲ್ಲಿ ಇರುವುದು ಕಂಡುಬರುತ್ತಿದೆ. ಅದು ತನ್ನಷ್ಟಕ್ಕೆ ತಾನೇ ತಿರುಗಾಡುತ್ತಿರುವಾಗ ಆಕಸ್ಮಿಕ ಮಗ್ಗುಲಲ್ಲಿರುವ ತಂತಿಯ ಜಾಳಿಗೆಯಲ್ಲಿ ಚಿಂಪಾಂಜಿ ತನ್ನ ಬೆರಳನ್ನು ಸೇರಿಸುತ್ತದೆ. ಆ ತಂತಿ ಜಾಳಿಗೆಯ ಆಚೆ ಬದಿಗೆ ಬಹುಶಃ ಯಾವುದಾದರೂ ಒಂದು ಪ್ರಾಣಿ ಇದೆಯೋ ಇಲ್ಲ ಮನುಷ್ಯನಿದ್ದಾನೋ ಸರಿಯಾಗಿ ಕಂಡುಬರುತ್ತಿಲ್ಲ. ಒಟ್ಟಿನಲ್ಲಿ ಅಲ್ಲಿರುವ ಪ್ರಾಣಿ ಚಿಂಪಾಂಜಿಯ ಬೆರಳಿಗೆ ನೋವು ನೀಡಿದೆ ಎಂದು ಕಂಡು ಬರುತ್ತಿದೆ. ಆ ನೋವಿಗೆ ಚಿಂಪಾಂಜಿ ಜೀವವೇ ಕಿತ್ತಿ ಹೋಗುವಂತೆ ಒಮ್ಮೆಲೆ ಕಿರುಚಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ತಮ್ಮ ಕಾಮೆಂಟ್ ನಲ್ಲಿ ಚಿಂಪಾಂಜಿಯ ಆಕ್ಟಿಂಗ್ ಸಖತ್ತಾಗಿದೆ ಎಂದರೆ, ಇನ್ನು ಕೆಲವರು ಅದು ನಿಜಕ್ಕೂ ನೋವಿನಿಂದ ಕಿರಿಚುತ್ತಿದೆ ಮತ್ತು ಅದಕ್ಕೆ ನೋವು ನೀಡುವ ಕೆಲಸ ಮನುಷ್ಯನೇ ಮಾಡಿದ್ದಾನೆ ಎಂದಿದ್ದಾರೆ. ನಿಮ್ಮ ಪ್ರಕಾರ ಈ ಕೆಲಸ ಯಾರು ಮಾಡಿರಬಹುದು ಅನ್ನುತ್ತೀರಾ? ಅಥವಾ ಚಿಂಪಾಂಜಿಯೇ ಈ ರೀತಿ ಸಖತ್ತಾಗಿ ನಟನೆ ಮಾಡುತ್ತಿದೆ ಹೇಳಿ ನೋಡೋಣ.