ಅಂತರಿಕ್ಷದಿಂದ ರಾತ್ರಿ ಹೊತ್ತಿನಲ್ಲಿ ಪೃಥ್ವಿ ಹೇಗೆ ಕಾಣಿಸುತ್ತದೆ? ಅಮೋಘ ದೃಶ್ಯ ನೋಡಿ ಈ ವೈರಲ್ ವಿಡಿಯೋದಲ್ಲಿ!
ನಮ್ಮ ಪೃಥ್ವಿ ಆಕಾಶದಿಂದ ಹೇಗೆ ಕಾಣಿಸಬಹುದು? ಮತ್ತು ಅದು ಯಾವ ರೀತಿ ಗೋಲಾಕಾರವಾಗಿ ತಿರುಗುತ್ತಿರುವಬಹುದು? ಇದು ಎಲ್ಲರಿಗೂ ಕುತೂಹಲದ ವಿಷಯವಾಗಿದೆ. ಆಕಾಶದಿಂದ ಪೃಥ್ವಿಯನ್ನು ನೋಡಲು ಅದು ನೀಲಿಬಣ್ಣದ್ದು ಇದ್ದು ಗೋಲಾಕಾರವಾಗಿ ಕಾಣಿಸುತ್ತದೆ ಎಂಬುದು ಹೆಚ್ಚಾಗಿ ನಾವು ಪುಸ್ತಕದಲ್ಲಿ ಓದಿರುತ್ತೇವೆ. ಪೃಥ್ವಿಯ ಸುಮಾರು 70% ಭಾಗವು ನೀರಿನಿಂದ ವ್ಯಾಪಿಸಲ್ಪಟ್ಟಿದೆ. ಅಂತರಿಕ್ಷದಿಂದ ಒಂದು ವೇಳೆ ಪ್ರಥ್ವಿಯನ್ನು ನಾವು ವೀಕ್ಷಿಸಿದರೆ ಅದು ಸಂಪೂರ್ಣವಾಗಿ ಬೇರೆಯೇ ಕಾಣಿಸುತ್ತದೆ. ಅಂತರಿಕ್ಷದಿಂದ ಪೃಥ್ವಿಗೆ ನೋಡಲಾಗಿ ನಾವು ಮಾಡಿದ ಕಲ್ಪನೆಗಿಂತಲೂ ಅದು ಸಂಪೂರ್ಣ ಭಿನ್ನವಾಗಿ ಗೋಚರಿಸುತ್ತದೆ. ಪೃಥ್ವಿಯ ಬಗೆಗಿರುವ ಈ ರೀತಿಯ ಎಲ್ಲ ವಿಷಯಗಳು ಸರ್ವ ಸಾಮಾನ್ಯನಿಗೆ ತುಂಬಾ ಯೋಚಿಸುವಂತೆ ಮಾಡುತ್ತವೆ. ಕಾರಣ ಅವರೆಂದೂ ಅಂತರಿಕ್ಷದಿಂದ ಪೃಥ್ವಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಇದರಲ್ಲಿ ಅಂತರಿಕ್ಷದಿಂದ ಪೃಥ್ವಿಯ ರಾತ್ರಿಯ ಅದ್ಭುತ ಮತ್ತು ಅಮೋಘವಾದ ದೃಶ್ಯ ಕಂಡು ಬರುತ್ತಿದೆ. ಈ ದೃಶ್ಯವನ್ನು ನೀವು ನೋಡಿದಾಗ ನಿಮಗೂ ಸಹ ಆಶ್ಚರ್ಯ ಉಂಟಾಗುವುದು.
ವಿಡಿಯೋದಲ್ಲಿ ಪೃಥ್ವಿಯ ಪ್ರತ್ಯಕ್ಷ ದೃಶ್ಯದಲ್ಲಿ ಧೂಳು ಮತ್ತು ಬೂದಿಯ ರೀತಿಯಲ್ಲಿ ಏನಾದರೂ ಕಂಡುಬರುತ್ತಿದೆ, ಜೊತೆಗೆ ಅನೇಕ ಕಡೆ ಉರಿಯುತ್ತಿರುವ ಜ್ವಾಲೆಯ ಹಾಗೆ ದೃಶ್ಯಗಳು ಕಂಡು ಬರುತ್ತಿದೆ. ಕೆಲವು ಕಡೆ ಬೆಳಕು ಕಂಡು ಬಂದರೆ ಇನ್ನು ಕೆಲವು ಕಡೆ ನೀಲಿ ಬಣ್ಣವು ಕಂಡುಬರುತ್ತಿದೆ. ಮಧ್ಯದಲ್ಲಿ ಒಂದು ಕಡೆ ಮರುಭೂಮಿಯ ಹಾಗೆ ದೃಶ್ಯ ಕಣ್ಣಿಗೆ ಗೋಚರವಾಗುತ್ತಿದೆ. ಈ ವಿಡಿಯೋದಲ್ಲಿ ನಿಮಗೆ ಪೃಥ್ವಿಯ ಅದ್ಭುತವಾದ ಹಾಗೂ ವಿಸ್ಮಯವಾದ ದೃಶ್ಯ ಕಣ್ಣಿಗೆ ಕಾಣಿಸುತ್ತದೆ. ಪ್ರಸ್ತುತ ವಿಡಿಯೋ ನಿಮಗೆ ಅಂತರಿಕ್ಷದಿಂದ ಸಂಪೂರ್ಣವಾದ ಪೃಥ್ವಿಯನ್ನು ನೋಡುವ ಅವಕಾಶ ಒದಗಿಸುತ್ತದೆ. ಈ ವಿಶೇಷತೆಯಿಂದಾಗಿಯೇ ಪ್ರಸ್ತುತ ವಿಡಿಯೋ ಎಲ್ಲ ಕಡೆಗೂ ವೈರಲ್ ಆಗಿದೆ.
ಈ ರೋಚಕ ಅಥವಾ ವಿಲಕ್ಷಣ ವಿಡಿಯೋ ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಟ್ವಿಟರ್ನಲ್ಲಿ @CosmicGaiaX ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಅಂತರಿಕ್ಷದಿಂದ ಪೃಥ್ವಿಯು ರಾತ್ರಿಯ ಹೊತ್ತಿನಲ್ಲಿ ಹೇಗೆ ಕಾಣಿಸುತ್ತದೆ ಎಂಬ ಪ್ರಶ್ನೆಗೆ ಈ ಅದ್ಭುತವಾದ ದೃಶ್ಯವು ಉತ್ತರಿಸುತ್ತದೆ. 34 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 4.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಗೂ 50 ಸಾವಿರಕ್ಕಿಂತಲೂ ಮೇಲ್ಪಟ್ಟು ಜನರು ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ. ತಮ್ಮ ಕಮೆಂಟುಗಳಲ್ಲಿ ಸಾಕಷ್ಟು ನೆಟ್ಟಿಗರು ಈ ದೃಶ್ಯವು ತುಂಬಾ ಅದ್ಭುತವಾಗಿದೆ ಎಂಬ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ವಿಡಿಯೋ ನೋಡಿ
Earth at night viewed from space. pic.twitter.com/lWuQhotDEK
— Wonder of Science (@wonderofscience) June 25, 2021