ಸಖತ್ ತಮಾಷೆಯ ವಿಡಿಯೋ…102 ರ ಹರೆಯದ ಅಜ್ಜಿ ಸೆಲೆಬ್ರೇಟ್ ಮಾಡುತ್ತಿದ್ದಳು ಬರ್ತಡೇ! ಕ್ಯಾಂಡಲ್ ನಂದಿಸುವಾಗ ನಡೆದು ಹೋಯಿತು ಆವಾಂತರ!

ಮೊದಲು ಅಂದರೆ ಜಾಸ್ತಿ ಇಲ್ಲ 20/25 ವರ್ಷಗಳ ಹಿಂದೆಯೇ ಯಾರಿಗೂ ಗೊತ್ತಿರುತ್ತಿರಲಿಲ್ಲ ಯಾರ ಬ’ಡೇ ಯಾವಾಗ ಅಂತ. ಇನ್ನು ಆಚರಿಸುವದಂತೂ ತುಂಬಾ ದೂರದ ಮಾತು. ಆದರೀಗ ಎಲ್ಲರೂ ಹುಟ್ಟುಹಬ್ಬ ಆಚರಿಸಿಕೊಳ್ಳುವದು ಎಂದರೆ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಈ ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಏನಾದರೂ ತಮಾಷೆಯ ಅಥವಾ ಅಹಿತಕರ ಘಟನೆಗಳು ನಡೆದದ್ದನ್ನು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಈಗ ಇಲ್ಲಿಯೂ ಒಂದು ತುಂಬಾ ವಿಶೇಷವಾದ ತಮಾಷೆಯ ಘಟನೆ ನಡೆದಿದೆ. ಈ ಘಟನೆಯ ದೃಶ್ಯವನ್ನು ನೋಡಿದಾಗ ನಿಮಗೆ ನಗು ತಡೆದುಕೊಳ್ಳಲು ಅಸಾಧ್ಯವಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಅಜ್ಜಿಯೊಬ್ಬರು ತಮ್ಮ 102 ನೆಯ ಹುಟ್ಟುಹಬ್ಬವನ್ನು ತುಂಬಾ ಸಂತೋಷ ಹಾಗೂ ಉತ್ಸಾಹದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಹತಾತ್ತನೆ ಒಂದು ಇನ್ಸಿಡೆಂಟ್ ನಡೆದುಹೋಗುತ್ತದೆ. ಏನೋ ಒಂದನ್ನು ಮಾಡಲು ಹೋಗಿ ಮುಂದೆ ಹೀಗಾಗುತ್ತದೆಂಬ ಅರಿವು ಪಾಪ ಆ ಅಜ್ಜಿಗೂ ಇರುವುದಿಲ್ಲ. ಬ’ಡೇ ಕೇಕ್ ಕಟ್ ಮಾಡುವ ಮುನ್ನ ಕ್ಯಾಂಡಲ್ ದೀಪವನ್ನು ಊದಿ ನಂದಿಸುವುದು ವಾಡಿಕೆ. ಹೀಗಾಗಿ ಅಜ್ಜಿ ಬ’ಡೇ ಆಚರಿಸಿಕೊಳ್ಳುವ ಉತ್ಸಾಹದಲ್ಲಿ ಹಾಗೂ ಶತಕ ದಾಟಿದ ಸಂಭ್ರಮದಲ್ಲಿ ಕ್ಯಾಂಡಲ್ ನಂದಿಸಲು ಸ್ವಲ್ಪ ಜೋರಾಗಿಯೇ ಊದಿದರು. ಪಾಪ ಯಡವಟ್ಟಾಗಿದ್ದು ಇಲ್ಲಿಯೇ. ಅಜ್ಜಿ ಕ್ಯಾಂಡಲ್ ನಂದಿಸುವ ಸಲುವಾಗಿ ಜೋರಾಗಿ ಊದಿದ್ದೇ ತಡ ಬಾಯಿಯಲ್ಲಿರುವ ಹಲ್ಲಿನ ಸೆಟ್ ಒಮ್ಮೆಲೆ ಹೊರಗೆ ಬಂದು ಬಿಟ್ಟಿದೆ. ಈ ತಮಾಷೆಗೆ ಸ್ವತಃ ಅಜ್ಜಿಯೂ ಸಹ ತುಂಬಾ ಖುಷಿಯಿಂದ ಮುಕ್ತವಾಗಿ ನಕ್ಕಿದ್ದಾಳೆ ಇದು ವಿಶೇಷ.

ವಿಡಿಯೋ ನೋಡಿ.

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದ್ದು ಇಲ್ಲಿಯವರೆಗೆ ಪ್ರಸ್ತುತ ವಿಡಿಯೋಗೆ 1.6 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.