Articles

ರಾನು ಮಂಡಲ್ ತಾವೇ ಮೇಕಪ್ ಮಾಡಿಕೊಂಡು ಸಲ್ಮಾನ್ ಖಾನ್ ಹಾಡು ಹಾಡಿದರು ತಮ್ಮದೇ ಸ್ಟೈಲ್ ನಲ್ಲಿ! ಫ್ಯಾನ್ಸ್ ಗಳು ನೋಡಿ….

ರಾನು ಮಂಡಲ್ ಕೆಲವೇ ವರ್ಷಗಳ ಹಿಂದೆ ಒಳ್ಳೆಯ ಪ್ರಾರಂಭದ ನಂತರ ಆಕಸ್ಮಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದರು. ಹೀಗಾಗಿ ಹಾಡುಗಳ ನಂತರ ಅವರ ಮೇಕಪ್ ಮತ್ತು ಡಾನ್ಸ್ ನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಒಂದರಮೇಲೊಂದರಂತೆ ವೈರಲ್ ಆಗತೊಡಗಿದವು. ಸದ್ಯದ ಪರಿಸ್ಥಿತಿಯಲ್ಲಿ ರಾನು ಅವರು ಸೋಷಿಯಲ್ ಮೀಡಿಯಾ ರಿಪೋರ್ಟ್ ಪ್ರಕಾರ ಮತ್ತೆ ಮೊದಲಿನ ಜೀವನವೇ ಜೀವಿಸುತ್ತಿದ್ದಾರೆ. ಪ್ರಸಿದ್ಧಿಯನ್ನು ಪಡೆದ ಕೆಲವು ದಿನಗಳ ನಂತರ ಮತ್ತೆ ಅವರ ಕೈಗೆ ಈಗ ಕೆಲಸವಿಲ್ಲ. ಆದರೆ ಅವರ ಫನ್ನಿ ಮತ್ತು ವಿಚಿತ್ರವಾದ ವಿಡಿಯೋಗಳ ಮುಖಾಂತರ ದಿನಂಪ್ರತಿ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿ ಮಾತ್ರ ಇರಲು ಯಶಸ್ವಿಯಾಗುತ್ತಾರೆ. ಕೆಲವೇ ದಿವಸಗಳ ಹಿಂದೆ ರಾನು ಮಾಡಿದ ಶ್ರೀವಲ್ಲಿ ಹಾಡಿನ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಈಗ ಅವರ ಸಿಂಗಿಂಗ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಈಗಾಗಲೇ ತಮ್ಮ ತಲೆಗೆ ಕೈ ಹಚ್ಚಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ರಾನು ಮಂಡಲ್ ತಾನೇ ಸ್ವತಃ ಮೇಕಪ್ ಮಾಡಿಕೊಂಡು ಹಾಡೊಂದನ್ನು ಹಾಡುತ್ತಿದ್ದಾರೆ. ಅವರು ಹಾಡುವ ಹಾಡು ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ಅವರ ‘ತೇರೆ ನಾಮ್’ ಚಿತ್ರದ್ದಾಗಿದೆ. ಈ ಚಿತ್ರದಲ್ಲಿಯ ಹಾಡನ್ನು ರಾನು ತುಂಬಾ ಸೈಲೆಂಟಾಗಿ ಕ್ಲಾಸಿಕಲ್ ರಿದಮ್ ನಲ್ಲಿ ಹಾಡುತ್ತಿದ್ದಾರೆ. ಈ ಹಾಡಿಗೆ ತಮ್ಮದೇಯಾದ ಒಂದು ಸ್ಟೈಲ್ ಅಥವಾ ಟಚ್ ನೀಡಬೇಕೆಂದಿದ್ದರೇನೋ ಪಾಪ, ಆದರೆ ಅದು ಸಾಧ್ಯವಾಗಿಲ್ಲ.

ವಿಡಿಯೋ ನೋಡಿ

 

View this post on Instagram

 

A post shared by tikli???? (@_____darksun__1)

ಈ ವೀಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬ ಯೂಸರ್ ವಾ, ರಾನು ಇಸ್ ಕಮ್ ಬ್ಯಾಕ್! ಎಂದರೆ ಇನ್ನೊಬ್ಬ ರಾನು ಈ ಹಾಡನ್ನೇ ಬದಲಾಯಿಸಿ ಬಿಟ್ಟಿದ್ದಾರೆಂದಿದ್ದಾನೆ. ಮತ್ತೊಬ್ಬ ಯೂಸರ್ ಸಲ್ಮಾನ್ ಖಾನ್ ಹಾಡು ಈ ರೀತಿಯಾಗಿ ಹಾಡಬೇಕಾದರೆ ಈಕೆಗೆ ತುಂಬಾ ಡೇರಿಂಗ್ ಇದೆ ಅಂತಿದ್ದಾನೆ. ಹೀಗೆ ಒಟ್ಟಿನಲ್ಲಿ ರಾನುಮಂಡಲ್ ಯಾವುದಾದರೂ ವಿಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಮಾತ್ರ ಇದ್ದೇ ಇರುತ್ತಾರೆ.

Leave a Comment

Your email address will not be published. Required fields are marked *