ಚಿನ್ನದ ಶವಪೆಟ್ಟಿಗೆಯಲ್ಲಿ ಜಾರ್ಜ್ ಫ್ಲಾಯ್ಡ್‌ಗೆ ವಿದಾಯ, ಅಬ್ಬಾ..! ಶವಪೆಟ್ಟಿಗೆಯ ಬೆಲೆ ಇಷ್ಟೊಂದಾ?

ಹ್ಯೂಸ್ಟನ್, ಜೂನ್ 11: ಯುಎಸ್ ಪೊಲೀಸ್ ಅಧಿಕಾರಿಯ ಕ್ರೂರತೆಗೆ ಬಲಿಯಾದ ಜಾರ್ಜ್ ಫ್ಲಾಯ್ಡ್ ಹತ್ಯೆ ಒಂದು ಕ್ರಾಂತಿಯನ್ನು ಹುಟ್ಟುಹಾಕಿದೆ. ಜಾರ್ಜ್ ಫ್ಲಾಯ್ಡ್ ಅವರಿಗೆ ಬುಧವಾರ ಅಂತ್ಯಸಂಸ್ಕಾರ ಮಾಡಲಾಯಿತು. ಅವರ ತಾಯಿಯ ಸಮಾಧಿಯ ಹತ್ತಿರವೇ ಇವರ ಸಮಾಧಿ ಮಾಡಲಾಯಿತು. ‘ಜಗತ್ತು ಅವನನ್ನು ನೆನಪಿಸಿಕೊಳ್ಳುತ್ತದೆ. ಅವನ ಹತ್ಯೆ ಇಡೀ ಜಗತ್ತನ್ನೇ ಬದಲಿಸಲಿದೆ’ ಎಂದು ಜಾರ್ಜ್ ಅವರ ಸಹೋದರ ರಾಡ್ ಕಣ್ಣೀರಿನೊಂದಿಗೆ ವಿದಾಯ ಹೇಳುವಾಗ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ಜಾರ್ಜ್ ಇವರ ಪಾರ್ಥಿವ ಶರೀರವನ್ನು ತಗೆದುಕೊಂಡು ಹೋಗುವ ಸಲುವಾಗಿ ಬಂಗಾರದ ಪೆಟ್ಟಿಗೆಯನ್ನು ತಯಾರಿಸಲಾಗಿತ್ತು. ಬಂಗಾರದ ಶವಪೆಟ್ಟಿಗೆಯಲ್ಲಿ ತಗೆದುಕೊಂಡು ಹೋದ ವ್ಯಕ್ತಿಗಳಲ್ಲಿ ಮಾಯಕಲ್ ಜಾಕ್ಸನ್, ಜೇಮ್ಸ್ ಬ್ರೌನ್ ನಂತರ ಜಾರ್ಜ ಪ್ಲಾಯಿಡ್ ಅವರು ಮೂರನೇಯ ವ್ಯಕ್ತಿಯಾಗಿದ್ದಾರೆ. ಇವರಿಗೆ ತಗೆದುಕೊಂಡ ಹೋದ ಬಂಗಾರದ ಶವಪೆಟ್ಟಿಗೆಯ ಬೆಲೆ ಸುಮಾರು 25 ಸಾವಿರ ಡಾಲರ್ ಗಳಿಷ್ಟಿದೆ. ಜಾರ್ಜ್ ಅವರ ಮೃತ್ಯುವಿನ ನಂತರ ಇಡೀ ಜಗತ್ತಿನಾದ್ಯಂತ ಇವರಿಗೆ ಸಹಾಯ ಬರುತ್ತಿತ್ತು. ಸಹಾಯದ ರೂಪದಲ್ಲಿ ಬಂದಂತಹ ಹಣದಿಂದಲೇ ಈ ಬಂಗಾರದ ಪೆಟ್ಟಿಗೆ ತಯಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜಾರ್ಜ್ ಪ್ಲಾಯಿಡ್ ಅವರ ಅಂತ್ಯಕ್ರಿಯೆಯಲ್ಲಿ ಜನಸಾಗರವೇ ತುಂಬಿತ್ತು. ಅಂತ್ಯ ಯಾತ್ರೆಯಲ್ಲಿ ಸುಡುಬಿಸಿಲು ಇದ್ದರೂ ಸಹ ರಸ್ತೆಯ ಎರಡು ಬದಿಯಲ್ಲಿ ಜನರು ಸಾಗರದಂತೆ ತುಂಬಿದ್ದರು. ದುಃಖದ ಸಾಗರದಲ್ಲಿ ಎಲ್ಲರೂ ಜಾರ್ಜ್‌ಗೆ ವಿದಾಯ ಹೇಳಿದರು. ಅಂತ್ಯ ಸಂಸ್ಕಾರದ ಸಮಯದಲ್ಲಿ ಕರೋನಾದ ಹಿನ್ನೆಲೆಯಲ್ಲಿ ನಾಗರಿಕರು ಸಾಮಾಜಿಕ ಅಂತರ ಕಾಪಾಡುವದರ ಜೊತೆಗೆ ಮಾಸ್ಕ ಸಹ ಧರಿಸಿದ್ದರು.

ಪರ್ಲಾಡ್ ಉಪನಗರದಲ್ಲಿರುವ ಸ್ಮಶಾನಕ್ಕೆ ಕೊನೆಯ ಒಂದು ಮೈಲಿಯಷ್ಟು ಅಂತರವನ್ನು ಫ್ಲಾಯ್ಡ್‌ ಅವರ ಶವವನ್ನು ಚಿನ್ನದ ಶವಪೆಟ್ಟಿಗೆಯಲ್ಲಿ ಬಿಳಿ ಕುದುರೆಯ ರಥದಲ್ಲಿ ಸಾಗಿಸಲಾಯಿತು. ನಂತರ ಚರ್ಚ್ ಮುಂದೆ ಅವರನ್ನು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೊದಲು ಗೌರವ ಸಲ್ಲಿಸಲಾಯಿತು. ಜಾರ್ಜ್‌ ಅವರ ಸಮಾಧಿ ಅವರ ತಾಯಿಯ ಸಮಾಧಿಯ ಬಳಿಯೇ ಮಾಡಲಾಯಿತು ಎಂದು ತಿಳಿದುಬಂದಿದೆ.