Video; ಜಿಂಕೆಯ ಬೇಟೆಯಾಡಲು ಚಿರತೆ ಮಾಡಿತು ರೇರ್ ಪ್ಲಾನ್! 100% ಸಕ್ಸಸ್…

ಜಂಗಲ್ ನಲ್ಲಿ ಜಗಳವಾಡಿದಾಗಲೇ ತುಂಬುವುದು ಹೊಟ್ಟೆ, ಇಲ್ಲವಾದರೆ ಉಪವಾಸವು ಸಾಯಬೇಕಾಗುತ್ತದೆ ಇಲ್ಲವೇ ಇನ್ನೊಬ್ಬರಿಗೆ ಆಹಾರವಾಗಬೇಕಾಗುತ್ತದೆ. ಹಿಂಸ್ರ ಪ್ರಾಣಿಗಳು ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳಲು ತುಂಬಾ ಹೆಣಗಾಡಬೇಕಾಗುತ್ತದೆ. ಈ ಪ್ರಾಣಿಗಳು ಕೆಲವೊಮ್ಮೆ ಶಕ್ತಿಯ ಬಲದಿಂದ ಬೇರೆ ಪ್ರಾಣಿಗಳ ಬೇಟೆಯಾಡಿ ಹೊಟ್ಟೆ ತುಂಬಿಕೊಂಡರೆ ಇನ್ನು ಕೆಲವು ಸಲ ತಮ್ಮ ಅದ್ಭುತ ಐಡಿಯಾಗಳಿಂದಲೂ ಇನ್ನಿತರ ಪ್ರಾಣಿಗಳ ಬೇಟೆಯಾಡಿ ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳುತ್ತವೆ. ಈಗ ಚಿರತೆಯೊಂದು ತುಂಬಾ ಅಪರೂಪದ ಪ್ಲಾನ್ ಮಾಡಿ ಜಿಂಕೆಯ ಬೇಟೆಯಾಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಕೆಲವು ಜಿಂಕೆಗಳು ಮರದ ಕೆಳಗೆ ಯಾವುದೇ ಹಿಂಸ್ರ ಪ್ರಾಣಿಗಳ ಭಯವಿಲ್ಲದೆ ನಿರಾತಂಕವಾಗಿ ಹುಲ್ಲು ಮೇಯುತ್ತಿವೆ. ಆದರೆ ಪಾಪ ಜಿಂಕೆಗಳಿಗೆ ತಮ್ಮ ಸಾವು ತಲೆಯ ಮೇಲಿನ ಮರದ ಮೇಲೆಯೇ ಸುತ್ತಾಡುತ್ತಿದೆ ಎಂಬದರ ಕಲ್ಪನೆಯೇ ಅವುಗಳಿಗಿಲ್ಲ. ಮೇಯುತ್ತಿರುವ ಜಿಂಕೆಗಳ ಮೇಲೆ ಮರದಲ್ಲಿ ಬೇಟೆಯಾಡಲು ಸನ್ನದ್ಧವಾಗಿ ಕುಳಿತ ಚಿರತೆ ಸುಮಾರು 20 ರಿಂದ 25 ಅಡಿ ಎತ್ತರದಿಂದ ಕೆಳಗಿನ ಜಿಂಕೆಗಳ ಮೇಲೆ ಹಠಾತ್ ಎರಗುತ್ತದೆ. ಚಿರತೆಯ ಆಕಸ್ಮಿಕ ದಾಳಿಯಿಂದ ಜಿಂಕೆಗಳು ಒಮ್ಮೆಲೆ ಹೆದರಿ ದಾರಿ ಸಿಕ್ಕ ಕಡೆಗೆ ಓಡಿಹೋಗಿವೆ. ಆದರೆ ಚಿರತೆ ಮಾತ್ರ ಅವುಗಳಲ್ಲಿದ್ದ ಒಂದು ಜಿಂಕೆಯನ್ನು ಬೇಟೆಯಾಡುವುದರಲ್ಲಿ ಯಶಸ್ವಿಯಾಗಿದೆ. ನಂತರ ಅದನ್ನು ಹೊತ್ತುಕೊಂಡು ಮರದ ಮೇಲೆ ಏರಿ ಹೋಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ wild_animal_pix ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋಗೆ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ.