ಈ ಹಕ್ಕಿಗೆ ಇರುವಷ್ಟು ಜ್ಞಾನ ಜನಕ್ಕೆ ಇದ್ದರೆ ರೋಡ್, ರೈಲ್ವೆ ಟ್ರ್ಯಾಕ್ ಗಲಿಜೀನಿಂದ ಮುಕ್ತವಾಗಿರುತ್ತಿದ್ದವು! ನೋಡಿ ಈ ವಿಡಿಯೋ.

ಮನುಷ್ಯ ಒಳ್ಳೆಯದನ್ನು ಕಲಿಯಬೇಕಾದ್ದು ತುಂಬಾ ಇದೆ. ಆತನಿಗೆ ಒಳ್ಳೆಯ ಶಿಸ್ತು ಮತ್ತು ರೂಢಿಗಳನ್ನು ಕಲಿಸಬೇಕಾದರೆ ಸಾಕು ಸಾಕಾಗುತ್ತದೆ. ಮನುಷ್ಯ ಎಲ್ಲವೂ ತಿಳಿಯುವಂಥ ತಿಳಿವಳಿಕೆಯುಳ್ಳ ಜೀವಿಯಾಗಿದ್ದರೂ ಸಹ ಅನೇಕ ವಿಷಯಗಳನ್ನು ಮೇಲಿಂದ ಮೇಲೆ ಹೇಳಿದರು ಆತ ನಿರ್ಲಕ್ಷಿಸುತ್ತಾನೆ. ಅದರಲ್ಲಿಯೂ ಮುಂಜಾನೆಯ ಪ್ರಾತರ್ವಿಧಿಯ ಮುಖ್ಯ ಕೆಲಸದ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಎಷ್ಟೇ ತಲೆ ಚಚ್ಚಿಕೊಂಡರೂ ಮನುಷ್ಯ ತನ್ನ ದಿನನಿತ್ಯದ ರೂಢಿಯಲ್ಲಿ ಬದಲಾವಣೆಯನ್ನೇ ಮಾಡುವುದಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿಯ ಸುಂದರವಾದ ವಿಡಿಯೋ ಒಂದು ನೋಡಲು ಸಿಗುತ್ತಿದೆ. ಈ ಹಕ್ಕಿಯು ತನ್ನ ಪ್ರಾತರ್ವಿಧಿಯ ಕೆಲಸಕ್ಕಾಗಿ ನೇರ ಟಾಯ್ಲೆಟ್ ಗೆ ಹೋಗಿದೆ. ಹಕ್ಕಿಯು ಟಾಯ್ಲೆಟ್ ಗೆ ಹೋಗಿ ಕಮೊಡ್ ನಲ್ಲಿ ತನ್ನ ಮುಂಜಾನೆಯ ಕೆಲಸವನ್ನು ಮುಗಿಸಿದೆ. ಅದಕ್ಕಾಗಿಯೇ ಹೇಳುವುದು ಈ ಹಕ್ಕಿಗೆ ಇರುವಷ್ಟು ಜ್ಞಾನ ಜನರಿಗೆ ಇಲ್ಲವಲ್ಲ ಅಂತ. ಒಂದು ವೇಳೆ ಮನುಷ್ಯನೂ ಸಹ ತನ್ನ ಈ ಕೆಲಸವನ್ನು ಮುಗಿಸಿಕೊಳ್ಳಲು ಈ ರೀತಿಯಾಗಿ ವರ್ತಿಸಿದರೆ ನಮ್ಮ ಪ್ರತಿಯೊಂದು ಹಳ್ಳಿಗಳು, ಪಟ್ಟಣಗಳು ತುಂಬಾ ಸ್ವಚ್ಛತೆಯಿಂದ ಕೂಡಿರುತ್ತವೆ. ಜೊತೆಗೆ ಶುದ್ಧ ಹಾಗೂ ಶಿಸ್ತಿನ ರೂಢಿಗಳಿಂದಾಗಿ ಅನೇಕ ಕಾರ್ಮಿಕರು ಹೊಲಸಿನಲ್ಲಿ ಮಾಡುವ ಕೆಲಸದಿಂದ ಮುಕ್ತಿ ಪಡೆಯುತ್ತಾರೆ.

ವಿಡಿಯೋ ನೋಡಿ

 

View this post on Instagram

 

A post shared by hepgul5 😊😊 (@hepgul5)

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hepgul5 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಮನುಷ್ಯನಿಗೆ ಒಳ್ಳೆಯ ಸಂದೇಶವನ್ನು ನೀಡಿದ ಈ ಹಕ್ಕಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ ಮತ್ತು ಸಾವಿರಾರು ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.