ಬೇಜಾರಾದ ಮನಸ್ಸಿಗೆ ಸಖತ್ ಜೋಕ್ಸ್ ಗಳ ಲಾಫ್ಟರ್ ಪಂಚ್ ! ನೋಡಿ, ಓದಿ ಮತ್ತು ಒಮ್ಮೆ ನಕ್ಕು ಬಿಡಿ ಬಿಂದಾಸ್ ಆಗಿ…
1. ತಂದೆ: ಸಂತು ತಗೊಳಪ್ಪ ಈ 2 ಸಾವಿರ ರೂಪಾಯಿಗಳನ್ನು.
ಮಗ: ಯಾಕೆ ಅಪ್ಪ ಈ ಹಣ ಯಾವುದಕ್ಕಾಗಿ? ಏನಾದರೂ ತರ್ಲಿಕ್ಕುಂಟಾ?
ತಂದೆ: ಇಲ್ಲ ಇಲ್ಲ ಇದು ನಿನ್ನ ಕಷ್ಟದ ಹಣ, ನೀನು ಗಳಿಸಿರೋ ಹಣ. ಇತ್ತೀಚಿಗೆ ನೀನು ರಾತ್ರಿ ಹೊತ್ತು ಮಲಗದೇ ಮೊಬೈಲ್ ನಲ್ಲೇ ಬಿಜಿ ಇರುತ್ತಿಯಲ್ಲ! ಹೀಗಾಗಿ ರಾತ್ರಿ ಸೆಕ್ಯೂರಿಟಿ ಗಾರ್ಡ್ ಅವಶ್ಯಕತೆನೇ ಇಲ್ಲ, ಅದಕ್ಕೆ.
2. ಗುಂಡ: ಅಣ್ಣ, ಬೇಗನೆ ಒಂದು ಗ್ಲಾಸ್ ಕಬ್ಬಿನ ಹಾಲನ್ನು ಕೊಡು ಹೊಡೆದಾಟ ಶುರುವಾಗುತ್ತೆ.
ಅಣ್ಣ: ತಗೊಳ್ಳಿ
ಗುಂಡ: ಅಣ್ಣ, ಇನ್ನೊಂದು ಕೊಡು ಬೇಗನೆ ಬಡಿದಾಟ ಶುರುವಾಗುತ್ತೆ..
ಅಣ್ಣ: ತಗೊಳ್ಳಿ ತಗೊಳ್ಳಿ.
ಗುಂಡ: ಅಯ್ಯೋ ಬೇಗನೆ ಇನ್ನೊಂದು ಕೊಡಣ್ಣ, ಮಾರಾಮಾರಿ ಶುರುವಾಗುತ್ತೆ…
ಅಣ್ಣ: ಅಯ್ಯೋ ಗುಂಡ ಈ ಹೊಡೆದಾಟ, ಬಡಿದಾಟ, ಮಾರಾಮಾರಿ ಯಾವಾಗ ಶುರುವಾಗುತ್ತೆ?
ಗುಂಡ: ಜಸ್ಟ್ ಈಗಲೇ ನೀನು ಹಣ ಕೇಳಿದ್ಮೇಲೆ…
3. ಶಾನುಭೋಗರು ಕೊಡೆ ಖರೀದಿಸುವ ಸಲುವಾಗಿ ಅಂಗಡಿಯಲ್ಲಿ ಹೋದರು..
ಶಾನುಭೋಗರು: (ಒಂದು ಕೊಡೆಯನ್ನು ಸೆಲೆಕ್ಟ್ ಮಾಡಿದ ನಂತರ) ಕೊಡೆ ಒಂದು ವರ್ಷಪೂರ್ತಿಯಾದರೂ ಚೆನ್ನಾಗಿ ಬಾಳುತ್ತಲ್ಲಾ?
ಅಂಗಡಿ ಮಾಲೀಕ: ಅಯ್ಯೋ ಸಾರ್ ಒಂದು ವರ್ಷವೇನು ಮಹಾ ಬಿಡಿ, 50 ವರ್ಷಗಳವರೆಗೂ ಏನು ಆಗುವುದಿಲ್ಲ.
ಶಾನುಭೋಗರು: 50 ವರ್ಷ?
ಅಂಗಡಿ ಮಾಲೀಕ: ಹೌದು, ಬರೀ ಅದನ್ನು ಬಿಸಿಲು ಹಾಗೂ ಮಳೆಯಿಂದ ರಕ್ಷಿಸಿ ಅಷ್ಟೇ.
4. ಮಗ: ಅಪ್ಪ, ನೀನು ಕತ್ತಲಲ್ಲಿಯೂ ಬರೆಯಬಹುದಾ?
ಅಪ್ಪ: ಹೌದು ಬರಿತೇನೆ, ನಿನಗೇನು ಬರೆದು ಕೊಡಬೇಕಾಗಿದೆ ಹೇಳು?
ಮಗ: ಏನಿಲ್ಲ ರಿಪೋರ್ಟ್ ಕಾರ್ಡ್ ಮೇಲೆ ಸೈನ್ ಬೇಕಾಗಿತ್ತು.
5. ಟೀಚರ್: ‘ಭಾರೀ ಗಾಳಿಯೊಂದಿಗೆ ಜೋರಾದ ಮಳೆಯಾಗುತ್ತಿದೆ’,
ಈ ವಾಕ್ಯವನ್ನು ಭವಿಷ್ಯ ಕಾಲದಲ್ಲಿ ರೂಪಾಂತರಿಸಿ.
ವಿದ್ಯಾರ್ಥಿ: ಈಗ ಕರೆಂಟ್ ಹೋಗುತ್ತವೆ.
6. ಮೈಸೂರಿನ ಎಂ ಜಿ ರೋಡ್ ನಲ್ಲಿ ಗುಂಡ ಬೈಕ್ ಮೇಲೆ ಹೋಗುತ್ತಿರುವಾಗ ಆತನ ಮುಂದೆ ಸ್ಕೂಟರ್ ಮೇಲೆ ನಡೆದಿರುವ ಮಹಿಳೆ ಹಠಾತ್ ಬಲಬದಿಗೆ ಟರ್ನ್ ತೆಗೆದುಕೊಂಡಳು.(ಇಂಡಿಕೇಟರ್ ಅಥವಾ ಕೈ ಎರಡನ್ನೂ ತೋರಿಸದೆ) ಮತ್ತೇನು ಗುಂಡ ನೇರ ಹೋಗಿ ಡಿಕ್ಕಿ ಹೊಡೆದು ಕೆಳಗೆ ಬಿದ್ದ.
ಗುಂಡ: ‘ಒ ಮೇಡಂ, ನಿಧಾನ ನಿಮ್ಮ ಕೈ ಯಾದರೂ ಸೈನ್ ಮಾಡಿ ತೋರಿಸಬಾರ್ದಾ’? ಅಂತ ಕೇಳಿದ.
ಮೇಡಂ: ಏನಂದೆ, ಯಾಕೆ ನಾನು ಕೈ ಮಾಡಬೇಕು? ನಾನು ದಿನಾಲು ಇದೇ ದಾರೀಲಿ ಟರ್ನ್ ತೆಗೆದುಕೊಳ್ತೆನೆ.