LPG GAS SUBSIDY:’ಉಜ್ವಲಾ’ ಖಾತೆಯಲ್ಲಿ ಮತ್ತೆ ಅನುದಾನ ,200 ರೂಪಾಯಿ ಸಬ್ಸಿಡಿ ವರ್ಗಾವಣೆ, ನೋಂದಣಿ ಪ್ರಕ್ರಿಯೆ ತಿಳಿದುಕೊಳ್ಳಿ.

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಉಜ್ವಲ
ಯೋಜನೆಯಡಿ, ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಘೋಷಿಸಲಾಗಿದೆ. ಪ್ರತಿ ಸಿಲಿಂಡರ್‌ಗೆ ರೂ.200 ಅನುದಾನವನ್ನು ಕೇಂದ್ರದ ವತಿಯಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆ (ಎಕ್ಸೈಸ್ ರೇಟ್) ಇಳಿಕೆ ನಿರ್ಧಾರದಿಂದ ಸಾಮಾನ್ಯ ಜನರಿಗೆ ಎಲ್ ಪಿಜಿ ಮೇಲಿನ ಸಬ್ಸಿಡಿಯಿಂದ ದುಪ್ಪಟ್ಟು ಲಾಭವಾಗಲಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಗ್ರಾಹಕರಿಗೆ 12 ಸಿಲೆಂಡರ್ ಕೊಡಲಾಗುವದು..ಸದ್ಯಕ್ಕೆ ಎಲ್ಪಿಜಿ ಸಿಲಿಂಡರ್ ನ ಬೆಲೆ ಸುಮಾರು 1000 ರೂಪಾಯಿಗೆ ತಲುಪಿದೆ. ಕೇಂದ್ರದ ಎಲ್ಪಿಜಿ ಅನುದಾನ ಯೋಜನೆಯ ಸಹಾಯದಿಂದ ಗ್ರಾಹಕರಿಗೆ ಸಿಲಿಂಡರ್ ಕೇವಲ 800 ರೂಪಾಯಿಯಲ್ಲಿ ಉಪಲಬ್ಧವಾಗಲಿದೆ. ಕಳೆದ ಕೆಲವು ತಿಂಗಳಿನಿಂದ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ಯೋಜನೆ ಬಂದ್ ಆಗಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಈ ನಿರ್ಣಯದಿಂದ ಸರ್ವಸಾಮಾನ್ಯರ ಜೇಬಿನ ಭಾರ ಕಡಿಮೆಯಾಗಲಿದೆ. ಸಬ್ಸಿಡಿಯ ಮೊತ್ತ ನೇರವಾಗಿ  ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಒಲೆಯೆ ಮೇಲೆ ಮತ್ತೆ ಉಜ್ವಲಾ…

ಉಜ್ವಲ ಯೋಜನೆಯಡಿಯಲ್ಲಿ, ಕೆಲವು ಮಾನದಂಡಗಳಿಗಿಂತ ಕಡಿಮೆ ಆರ್ಥಿಕ ಆದಾಯ ಹೊಂದಿರುವ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.  ಯೋಜನೆಯ ಆರಂಭದ ದಿನಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳು ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುತ್ತಿವೆ.  ಕೋವಿಡ್ ಏಕಾಏಕಿ ಈ ಅನುದಾನವನ್ನು ಮುರಿಯಲು ನಿರ್ಧರಿಸಿದ್ದರು.   ಮತ್ತೆ ಈ ಯೋಜನೆಯಡಿ ಕೇಂದ್ರ 200 ರೂ.ಅನುದಾನ ನೀಡಲು ನಿರ್ಧರಿಸಿದೆ.  ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಆಹಾರದ ಬೆಲೆ ಮುಗಿಲೆತ್ತರಕ್ಕೆ ಹೋಗಿತ್ತು.  ಸಿಲಿಂಡರ್ ಬೆಲೆ ಏರಿಕೆಯಿಂದ ಮಹಿಳೆಯರು ಮತ್ತೆ ಒಲೆಯನ್ನೇ ಆಶ್ರಯಿಸಬೇಕಾಯಿತು.

ಅನುದಾನಕ್ಕಾಗಿ ನೀವು ಹೇಗೆ ಪರಿಶೀಲಿಸುತ್ತೀರಿ?

● ಎಲ್ಲಕ್ಕೂ ಮೊದಲು www.mylpg.in ಮೇಲೆ ಹೋಗಿ
● ಸ್ಕ್ರೀನದ ಎಡ ಬದಿಗೆ ನಿಮ್ಮ ಕಂಪನಿಯ ಸಿಲಿಂಡರ್ ಆಯ್ಕೆ ಮಾಡಿ.
● ಸೈನ್-ಇನ್ ಮಾಡುವ ಮೂಲಕ ಹೊಸ ಯುಜರ್ಸ್ ಪರ್ಯಾಯದ ಮೇಲೆ ಕ್ಲಿಕ್ ಮಾಡಿ.
● ಒಂದು ವೇಳೆ ನಿಮ್ಮ ಆಯ್ ಡಿ ಮೊದಲೆ ತಗೆದಿದ್ದರೆ ಅದನ್ನು ಅಲ್ಲಿ ಬರೆಯಿರಿ ಇಲ್ಲದಿದ್ದರೆ ಹೊಸದಾದ ಐಡಿ ತಯಾರಿಸಿ.
● ನಿಮ್ಮ ನೋದಣಿಯ ನಂತರ ‘ಸಿಲಿಂಡರ್ ಬುಕಿಂಗ್ ವಿವ್’  ಮೇಲೆ ಟ್ಯಾಪ್ ಮಾಡಿ.
● ನಿಮ್ಮ ಸಿಲಿಂಡರ್ ಸಂಖ್ಯೆ ಮತ್ತು ಅನುದಾನ ವಿವರಗಳನ್ನು ನೋಡಿ.
● ನಿಮಗೆ ಸಿಲಿಂಡರ್ ಬುಕಿಂಗ್ ಮಾಡಿದ್ದರೂ ಸಹಿತ ಅನುದಾನ ದೊರೆಯದಿದ್ದರೆ ಫೀಡ್ ಬ್ಯಾಕ್ ಬಟನ್ ಮೇಲೆ ಕ್ಲಿಕ್ ಮಾಡಿ.

ಉಜ್ವಲ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ:

ಉಜ್ವಲಾ ಗ್ಯಾಸ್ ಯೋಜನೆಗೆ ನೀವು ಇನ್ನೂ ನೋಂದಾಯಿಸದಿದ್ದರೆ, ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.  ಉಜ್ವಲಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.  LPG ವಿತರಕರಿಗೆ ಅರ್ಜಿಯನ್ನು ಸಲ್ಲಿಸಿ.  ನಿಮ್ಮ ಅರ್ಜಿಯು ಪೂರ್ಣ ವಿಳಾಸದೊಂದಿಗೆ ಜನಧನ್ ಖಾತೆಯ ವಿವರಗಳನ್ನು ಹೊಂದಿರಬೇಕು.  ನೀವು ಅರ್ಜಿಯನ್ನು ಸಲ್ಲಿಸಿದ ನಂತರ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅದರ ಆಧಾರದ ಮೇಲೆ ಕನೆಕ್ಷನ್ ನೀಡಲಾಗುತ್ತದೆ.