ಹುಡುಗರ ಜೊತೆ ಹೊಂಡದಲ್ಲಿ ಮಂಗವೂ ಆಯಿತು ಚಿಲ್ಡ್! ನೀರಿನಲ್ಲಿ ಜಿಗಿಯುವ ದೃಶ್ಯ ಕೂಲ್ ಕೂಲ್.
ಮಂಗನ ಆಟಗಳು ಮನುಷ್ಯನಿಗೆ ತುಂಬಾ ತಮಾಷೆಯಾಗಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಂಗನ ವಿವಿಧ ಚೇಷ್ಟೆಗಳ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಈ ರೀತಿಯ ಮಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತವೆ.
ಪುಟ್ಟ ಮಂಗವೊಂದು ಮಕ್ಕಳ ಜೊತೆಗೆ ನೀರಿನಲ್ಲಿ ಜಿಗಿಜಿಗಿದು ನೀರಾಟವಾಡುತ್ತಿರುವ ದೃಶ್ಯದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ನೀರಿನಿಂದ ತುಂಬಿದ ಒಂದು ಕ್ಯಾನಲ್ ಕಂಡುಬರುತ್ತಿದೆ. ಆ ಕ್ಯಾನಲ್ ನಲ್ಲಿ ಮಕ್ಕಳು ಜಿಗಿಜಿಗಿದು ನೀರಾಟ ಆಡುತ್ತಿದ್ದಾರೆ. ಅಲ್ಲಿಯೇ ಅವರ ಜೊತೆ ಪುಟ್ಟ ಮಂಗವು ಸಹಿತ ನೀರಿನಲ್ಲಿ ಜಿಗಿದು ಮುಳುಮುಳುಗಿ ಏಳುತ್ತಿದೆ. ಈ ದೃಶ್ಯ ನೋಡಲು ತುಂಬಾ ಸೊಗಸಾಗಿದೆ.
ವಿಡಿಯೋ ನೋಡಿ
View this post on Instagram
ಮಂಗನ ಈ ನೀರಾಟವಾಡುತ್ತಿರುವ ದೃಶ್ಯದ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಮಂಕಿ ಲವರ್ ವರ್ಲ್ಡ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ.