ಮದುವೆಯ ಮೊದಲ ರಾತ್ರಿಯ ನಂತರ ಅತ್ತೆಮ್ಮ ಸೊಸೆಗೆ ಕೇಳಿದರು, ರಾತ್ರಿ ಹೇಗಿತ್ತು? ಅಂತ… ಸೊಸೆ: 5% ನಾಚಿಕೆ,
1. ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಗಂಡ ಆಕೆಗೆ ಪಿಜ್ಜಾ ಹಟ್ (Pizza Hut) ಗೆ ಕರೆದುಕೊಂಡು ಹೋಗುತ್ತಾನೆ.
ಹೆಂಡತಿ: ರೀ ನನ್ನನ್ನು ಇಲ್ಲೇಕೆ ಕರೆದುಕೊಂಡು ಬಂದಿದ್ದೀರಾ?
ಗಂಡ: ಲೇ ಹುಚ್ಚಿ, ಇಲ್ಲಿ ಡಿಲೆವರಿ ಫ್ರೀ ಇದೆ.
2. ಕುಡುಕ ಮಧ್ಯರಾತ್ರಿಯಲ್ಲಿ ಎಣ್ಣೆ ಹೊಡೆದು ಬಂದು ಬಾಗಿಲು ಬಾರಿಸಿದ.
ಹೆಂಡತಿ: ನೀವು ಏನೇ ಮಾಡಿದರೂ ನಾನು ಬಾಗಿಲು ತೆರೆಯುವುದಿಲ್ಲ, ನೀವು ಎಲ್ಲಿಂದ ಬಂದಿರೋ ಮರಳಿ ಅಲ್ಲಿಯೇ ಹೋಗಿ…
ಗಂಡ: ಲೇ ಮೊದ್ಲು ಬಾಗಿಲು ತೆಗಿ, ಇಲ್ಲಾಂದ್ರೆ ಮನೆ ಮುಂದಿನ ನಾಲೆಯಲ್ಲಿ ಬಿದ್ದು ಸಾಯ್ತೀನಿ ನೋಡು.
ಹೆಂಡತಿ: ನೀವು ಏನು ಬೇಕಾದ್ರೂ ಮಾಡಿಕೊಳ್ಳಿ, ನನಗೇನು ಚಿಂತೆಯಿಲ್ಲ.
ತದನಂತರ ಗಂಡ ಮನೆ ಗೇಟ್ ಮುಂದಿನ ಕತ್ತಲೆಯಲ್ಲಿ ಹೋಗಿ ನಿಲ್ಲುತ್ತಾನೆ.
ಒಂದೆರಡು ನಿಮಿಷ ವಿಚಾರ ಮಾಡಿದ ನಂತರ ಒಂದು ದೊಡ್ಡ ಬಂಡೆಯನ್ನು ಎತ್ತಿ ನಾಲೆಯಲ್ಲಿ ಸದ್ದು ಬರುವ ಹಾಗೆ ಒಗೆದು ಬಿಡುತ್ತಾನೆ.
ಸಪ್ಪಳ ಕೇಳಿದ ಹೆಂಡತಿ ಬಾಗಿಲು ತೆಗೆದು ನಾಲೆಯ ಕಡೆಗೆ ಓಡಿ ಹೋಗುತ್ತಾಳೆ.
ಕತ್ತಲೆಯಲ್ಲಿ ನಿಂತ ಗಂಡ ಈ ಅವಕಾಶವನ್ನು ಪಡೆದು ಮನೆಯೊಳಗೆ ನುಗ್ಗಿ ಬಾಗಿಲು ಮುಚ್ಚಿ ಒಳಗಿನಿಂದ ಚಿಲಕ ಹಾಕಿಕೊಳ್ಳುತ್ತಾನೆ…
ಹೆಂಡತಿ: ಮೊದಲು ಬಾಗಿಲು ತೆರೆಯಿರಿ ಇಲ್ಲಾಂದರೆ ನಾನು ಕೂಗಿ ಕೂಗಿ ಅಕ್ಕಪಕ್ಕದವರೆಲ್ಲರನ್ನೂ ಎಬ್ಬಿಸುತ್ತೇನೆ ಹುಷಾರು! ಎಂದಳು.
ಗಂಡ: ಎಲ್ಲಿಯವರೆಗೆ ಅಕ್ಕಪಕ್ಕದವರೆಲ್ಲರೂ ಜಮಾ ಆಗುವುದಿಲ್ಲವೋ ಅಲ್ಲಿಯವರೆಗೆ ಕೂಗು, ಅವರೆಲ್ಲ ಒಂದುಗೂಡಿದ ಮೇಲೆ ನಾನು ನಿನಗೆ ಕೇಳ್ತೆನೆ, ‘ಇಷ್ಟೊಂದು ರಾತ್ರಿ ಹೊತ್ತಿನಲ್ಲಿ ಗೌನ್ ಮೇಲೆ ನೀನು ಎಲ್ಲಿಂದ ಬರುತ್ತಿರುವಿ ಹೇಳು’?
3. ಮದುಮಗ ಮದುವೆಯಾದ ಎರಡನೆಯ ದಿನ ತನ್ನ ಪತ್ನಿಯ ಮೇಕಪ್ ಮಾಡಿದ ಬ್ಯೂಟಿ ಪಾರ್ಲರ್ ಮೇಡಮ್ ಕಡೆಗೆ ಹೋಗಿ,
‘ನಿಮಗೆ ಧನ್ಯವಾದಗಳು, ನೀವು ತುಂಬಾ ಚೆನ್ನಾಗಿ ಮೇಕಪ್ ಮಾಡಿದ್ದೀರಿ ಅದಕ್ಕಾಗಿ ನಿಮಗೆ ಒಂದು ಸುಂದರವಾದ ಐಫೋನ್ 11 ಗಿಫ್ಟ್ ತೆಗೆದುಕೊಳ್ಳಿ’ ಎಂದು ಬಾಕ್ಸ್ ನೀಡಿದ.
ಬ್ಯೂಟಿ ಪಾರ್ಲರ್ ಮೇಡಂ ತುಂಬಾ ಖುಷಿಯಿಂದ ಬಾಕ್ಸ್ ಓಪನ್ ಮಾಡಿದಳು. ಅದರಲ್ಲಿ ನೋಕಿಯಾ 1100 ಮೊಬೈಲ್ ನೋಡಿ ಮುಜುಗರ ಪಟ್ಟು ‘ಏನಿದು’? ಎಂದಳು.
ಮದುಮಗ ಜೋರಾಗಿ ನಕ್ಕು, ‘ಇವತ್ತು ಮುಂಜಾನೆ ನನ್ನ ಹೆಂಡತಿಗೆ ನೋಡಿದಾಗ ನನಗೂ ಸಹ ಇದೇ ರೀತಿ ಶಾಕ್ ಆಯಿತು’ ಎಂದನು.
4. ರಾತ್ರಿ ಹೊತ್ತು ಪತಿ-ಪತ್ನಿಯರಿಬ್ಬರೂ ಭೂತದ ಹಾರರ್ ಫಿಲ್ಮ್ ನೋಡುತ್ತಾರೆ. ಮಲಗುವಾಗ ಇಬ್ಬರು ತುಂಬಾ ಹೆದರಿರುತ್ತಾರೆ.
ಪತ್ನಿ: ರೀ ನನಗೆ ತುಂಬಾ ಭಯ ಆಗುತ್ತಿದೆ, ನನ್ನ ಕಡೆಗೆ ಮುಖಮಾಡಿ ಮಲಗಿ ಪ್ಲೀಜ್.
ಪತಿ: ವಾರೆ ವಾ! ಏನಂದೆ? ರಾತ್ರಿಪೂರ್ತಿ ನಾನು ನಿನ್ನನ್ನು ನೋಡಿ ನೋಡಿ ಸಾಯಬೇಕಾ?
5. ಒಮ್ಮೆ ವಿವಾಹಿತ ಮಹಿಳೆಯೊಬ್ಬಳು ತನ್ನ ನಾಲಿಗೆಗೆ ಅರಿಶಿನ-ಕುಂಕುಮವನ್ನು ಹಚ್ಚುತ್ತಿದ್ದಳು. ಅದನ್ನು ನೋಡಿದ ಬೇರೆ ಮಹಿಳೆ ಲೆ ಮಳ್ಳಿ ಇದೇನು ಮಾಡುತ್ತಿರುವೆ ಎಂದಳು.
ವಿವಾಹಿತ ಮಹಿಳೆ: ಇಂದು ಮಹಾನವಮಿ ಹಬ್ಬ ಇಲ್ಲವೇ ಅದಕ್ಕಾಗಿ ನಾನು ಶಸ್ತ್ರ ಪೂಜೆ ಮಾಡುತ್ತಿದ್ದೆನೆ .
6. ಮದುವೆಯ ಮೊದಲ ರಾತ್ರಿಯ ನಂತರ ಅತ್ತೆಮ್ಮ ಸೊಸೆಗೆ ಕೇಳಿದರು, ರಾತ್ರಿ ಹೇಗಿತ್ತು? ಅಂತ…
ಸೊಸೆ: 5% ನಾಚಿಕೆ, 5% ನೋವು, 10% ತುಂಬಾ ಮಜಾ ಬಂತು ಮತ್ತು 80% ಹಳೆಯ ನೆನಪುಗಳು ಮತ್ತೆ ಮರುಕಳಿಸಿದವು