Video; ಈ ಮಹಿಳೆ ಅಂಥ ಯಾವ ಡಾನ್ಸ್ ಮಾಡಿದಳೋ ಗೊತ್ತಿಲ್ಲ? ಅಲ್ಲಿರುವ ನಾಯಿಗೂ ಇಷ್ಟವಾಗಲಿಲ್ಲ! ಅಂದ ಮೇಲೆ…

 

ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವಿಚಿತ್ರ ಕಂಟೆಂಟ್ ಗಳು ಒಮ್ಮೊಮ್ಮೆ ನೋಡಲು ಸಿಗುತ್ತವೆ. ಈ ರೀತಿಯ ವಿಡಿಯೋಗಳು ನೋಡಿದಾಗ ನಕ್ಕು ನಕ್ಕು ಹೊಟ್ಟೆ ನೋಯುತ್ತದೆ. ವಿಶೇಷವೆಂದರೆ ಈ ರೀತಿಯ ದೃಶ್ಯಗಳನ್ನು ಶೂಟ್ ಮಾಡುವವರಿಗೂ ಧನ್ಯವಾದಗಳನ್ನು ನೀಡಬೇಕು. ಯಾಕೆಂದರೆ ಮುಂದೆ ನಡೆಯುವ ಅದ್ಭುತ ದೃಶ್ಯದ ಬಗ್ಗೆ ಅವರಿಗೆ ಮೊದಲೇ ಕಲ್ಪನೆ ಇರುತ್ತದೆ ಎಂದೆನಿಸುತ್ತದೆ. ಇದೇ ರೀತಿಯ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣ ಸಿಗುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ಹಾಗೆ, ರಸ್ತೆಯ ಮೇಲೆ ಮಹಿಳೆ ಒಮ್ಮೆಲೆ ಮೈಯಲ್ಲಿ ಭೂತ ಬಂದ ಹಾಗೆ ಡಾನ್ಸ್ ಮಾಡಲು ಶುರು ಮಾಡುತ್ತಾಳೆ. ಮಹಿಳೆಯ ಈ ಕುಣಿತಕ್ಕೆ ಬ್ಯಾಕ್ ಗ್ರೌಂಡ್ ನಲ್ಲಿ ಪುಷ್ಪ ಚಿತ್ರದ ಹಾಡನ್ನು ಅಳವಡಿಸಿದ್ದಾರೆ. ಆಕೆಯ ಹಠಾತ್ ಡಾನ್ಸ್ ನೋಡಿ ಅಲ್ಲೇ ಇರುವ ನಾಯಿಗೆ ಸ್ವಲ್ಪವೂ ಇಷ್ಟವಾದಂತೆ ಕಾಣಿಸುವುದಿಲ್ಲ. ನಾಯಿ ಒಮ್ಮೆಲೆ ಸಿಟ್ಟಿನಿಂದ ಬೊಗಳುತ್ತ ಆಕೆಯ ಮೈಮೇಲೆ ಏರಿ ಹೋಗಿದೆ. ಒಮ್ಮೆಲೆ ಬೊಗುಳುತ್ತ ಏರಿ ಬಂದ ನಾಯಿಯನ್ನು ನೋಡಿ ಮಹಿಳೆ ಹೆದರಿ ಡಾನ್ಸ್ ಮಾಡುವದನ್ನೇ ನಿಲ್ಲಿಸಿಬಿಟ್ಟಿದ್ದಾಳೆ.

ವಿಡಿಯೋ ನೋಡಿ

 

View this post on Instagram

 

A post shared by Balak (@sarcastixbalak)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ 16 .1 ಮಿಲಿಯನ್ ಜನ ನೋಡಿದ್ದಾರೆ. ಮತ್ತು ಸುಮಾರು ಒಂದು ಮಿಲಿಯನ್ ಜನ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.