Video; ಯಾರು ಹೇಳ್ತಾರೆ ಮದುವೇಲಿ ವಧುವಿಗೆ ನಾಚಿಕೆ ಅಂತ? ವರನಿಗೆ ನೋಡುತ್ತಲೇ ವಧು ಔಟ್ ಆಫ್ ಕಂಟ್ರೋಲ್!
ಮದುವೆಯ ವಾತಾವರಣ ತುಂಬಾ ಉತ್ಸಾಹ ವರ್ಧಕವಾಗಿರುತ್ತದೆ. ಅಲ್ಲಿ ಒಂದು ಹಬ್ಬದ ವಾತಾವರಣವೇ ನಿರ್ಮಾಣವಾಗಿರುತ್ತದೆ. ಇತ್ತೀಚಿಗಂತೂ ಮದುವೆಗಳು ಅದ್ಭುತವಾಗಿ ನಡೆಯುತ್ತಿವೆ. ಮದುವೆ ಮಾಡಿಕೊಳ್ಳುವ ವಧು-ವರರು ಬಿಂದಾಸಾಗಿ ಮದುವೆಯಲ್ಲಿ ಪ್ರತಿಯೊಂದಕ್ಕೂ ರಿಯಾಕ್ಷನ್ ಕೊಡುತ್ತಿರುತ್ತಾರೆ. ಇದೇ ರೀತಿ ಮದುವೆಯೊಂದರಲ್ಲಿ ವಧು ನೀಡಿದ ರಿಯಾಕ್ಷನ್ ತುಂಬಾ ಜಬರ್ದಸ್ತ್ ಆಗಿದೆ. ಈ ವಿಡಿಯೋ ನೋಡಿದ ನಂತರ ಮದುಮಕ್ಕಳು ಅಥವಾ ವಿಶೇಷವಾಗಿ ಮದುಮಗಳು ತುಂಬಾ ನಾಚಿಕೊಳ್ಳುತ್ತಾಳೆ ಅಂತ ಹೇಳುತ್ತಾರೆ. ಅದರಿಲ್ಲಿ ನೋಡಿದರೆ ಮದುವೆಗೆ ಬಂದವರು ಮತ್ತು ನೋಡುವವರೇ ನಾಚಬೇಕು.
ಮದುವೆಯಲ್ಲಿ ಮದುಮಗನ ಎಂಟ್ರಿ ಆದನಂತರ ಮದುಮಗಳ ರಿಯಾಕ್ಷನ್ ನೋಡುವಂತಿತ್ತು.
ಮದುಮಗಳು ತನ್ನ ಭಾವಿ ಪತಿಯ ದಾರಿ ಕಾಯುತ್ತಾ ಹಾಲ್ ನಲ್ಲಿ ಮದುಮಕ್ಕಳಿಗಾಗಿಯೇ ಇರಿಸಿದ ಸುಶೋಭಿತ ಚೇರ್ ಮೇಲೆ ಕುಳಿತಿದ್ದಾಳೆ. ಅಷ್ಟರಲ್ಲಿ ಮದುಮಗ ಹಾಲ್ ನಲ್ಲಿ ಖುಷಿಯಿಂದ ತೇಲಾಡುತ್ತ ಬಳುಕುತ್ತಾ ರಾಜಕುಮಾರನ ಹಾಗೆ ಎಂಟ್ರಿ ಮಾಡುತ್ತಾನೆ. ಆತನು ಬರುವದನ್ನೇ ಕಾಯುತ್ತಾ ಕುಳಿತ ಮದುಮಗಳು ಒಮ್ಮೆಲೆ ಬಿಂದಾಸ್ ಆಗಿ ಕುಳಿತಲ್ಲಿಯೇ ನೃತ್ಯ ಮಾಡಲು ಶುರುಮಾಡುತ್ತಾಳೆ. ಈ ದೃಶ್ಯವನ್ನು ನೋಡಿದ ನಂತರ ಮದುವೆಗಾಗಿ ನೆರೆದವರೆಲ್ಲರೂ ಜೋರಾಗಿ ಚಿಯರ್ಸ್ ಮಾಡಲು ಶುರು ಮಾಡುತ್ತಾರೆ. ಈ ಸುಂದರವಾದ ಮದುಮಕ್ಕಳ ಬಾಂಡಿಂಗ್ ನೋಡಿದ ಮೇಲೆ ವಧು ಮದುವೆಯಲ್ಲಿ ನಾಚಿಕೊಳ್ಳುತ್ತಾಳೆ ಎಂಬ ಮಾತೇ ಸುಳ್ಳಾಗುವುದು.
ವಿಡಿಯೋ ನೋಡಿ
View this post on Instagram
ಮದುವೆಯ ಸುಂದರ ದೃಶ್ಯದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ.