ನೋಡು ನೋಡುವಷ್ಟರಲ್ಲಿ ಪರ್ಸ್ ಎತ್ತಿಕೊಂಡು ಹೋದ ಪಕ್ಷಿ, ಇದೊಂದು ಪ್ರೀ ಪ್ಲ್ಯಾನ್ಡ್ ಕಳ್ಳತನ ಎಂದ ನೆಟ್ಟಿಗರು!! ವಿಡಿಯೋ ನೋಡಿ.

ಕಳ್ಳತನ ಮಾಡುವದು ಇದೊಂದು ಕೆಟ್ಟ ಅಭ್ಯಾಸ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕಳ್ಳತನ ಮಾಡುವದು ಅವರ ಹುಟ್ಟುಗುಣ ಇರುವದು ಅಂತ ಹೇಳಲು ಸಾಧ್ಯವಿಲ್ಲ ಹಾಗಂತ ಎಲ್ಲರೂ ಒಳ್ಳೆಯದಕ್ಕಾಗಿ ಕಳ್ಳತನ ಮಾಡುತ್ತಾರೆ ಅಂತ ಹೇಳದು ಸಹ ತಪ್ಪು. ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿ ಕಳ್ಳತನ ಮಾಡುತ್ತಾರೆ. ಕೆಲವರು ಕಳ್ಳತನ ಮಾಡುವ ಮೂಲಕ ತಮ್ಮ ಜೀವನದಲ್ಲಿ ದುಡ್ಡು ಸಂಪಾದನೆ ಮಾಡುತ್ತಾರೆ. ನಾವು ಸಾಮಾನ್ಯವಾಗಿ ಮಕ್ಕಳು, ಸ್ತ್ರೀ-ಪುರುಷರು ಕಳ್ಳತನ ಮಾಡುವದು ನೋಡಿದ್ದೇವೆ ಆದರೆ ಈ ವಿಡಿಯೋದಲ್ಲಿ ಕಳ್ಳತನ ಮಾಡಿದ್ದು ಒಂದು ಪಕ್ಷಿ. ಇದನ್ನು ಕೇಳಿ ಆಶ್ಚರ್ಯವಾಗಿರಬೇಕು ಹೌದು ಇದು ನಿಜ. ಈ ವೈರಲ್ ಆಗುತ್ತೀರುವ ವೀಡಿಯೋದಲ್ಲಿ ಒಂದು ಪಕ್ಷಿ ಕಳ್ಳತನ ಮಾಡಿದೆ.

ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಇಬ್ಬರ ಯುವತಿಯರು ಜೊತೆಗೂಡಿ ಒಂದು ಪ್ಲೇಸ್ ನಲ್ಲಿ ಕುಳಿತುಕೊಂಡು ವೀಡಿಯೋ ಮಾಡುತ್ತಿರುತ್ತಾರೆ, ವಿಡಿಯೋ ಮಾಡುವಾಗ ಒಬ್ಬ ಯುವತಿ ತನ್ನ ಮೊಬೈಲ್ ಮತ್ತು ಪರ್ಸ್ ಎರಡನ್ನು ಒಂದು ಕಟ್ಟೆಯ ಮೇಲಿಟ್ಟು ವಿಡಿಯೋ ಮಾಡಲು ಹೋಗುತ್ತಾಳೆ. ಅಷ್ಟರಲ್ಲಿ ಒಂದು ಪಕ್ಷಿ ಬಂದು ಅಲ್ಲಿದ್ದ ಪರ್ಸ ತನ್ನ ಬಾಯಲ್ಲಿ ಹಿಡಿದುಕೊಂಡು ಹಾರಿ ಹೋಗುತ್ತದೆ. ಆಗ ಅದನ್ನು ನೋಡಿದ ವೀಡಿಯೋ ಮಾಡುತ್ತಿದ್ದ ಯುವತಿ ಈ ಪಕ್ಷಿಯ ಎಲ್ಲ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ. ಇದನ್ನು ನೋಡಿದ ಪರ್ಸ್ ಹೊಂದಿದ ಯುವತಿ ಈ ಪಕ್ಷಿಯನ್ನು ಹೇಗಾದರೂ ಮಾಡಿ ಹಿಡಿದು ತನ್ನ ಪರ್ಸ್ ಪಕ್ಷಿಯಿಂದ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಾಳೆ ಆದರೆ ಎಷ್ಟೇ ಪ್ರಯತ್ನ ಪಟ್ಟರು ಪಕ್ಷಿ ಸಿಗದೆ ಅಲ್ಲಿಂದ ಹಾರಿ ಹೋಗುತ್ತೆ.

ವಿಡಿಯೋ ನೋಡಿ

 

View this post on Instagram

 

A post shared by Panda (@dailygameofficial)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ dailygameofficial ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸುಮಾರು ಎರಡು ಮಿಲಿಯನ್ ಗೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ವಿವಿಧ ಕಾಮೆಂಟ್ ಗಳು ಸಹ ಬರುತ್ತಿವೆ. ಕಾಮೆಂಟ್ ಗಳಲ್ಲಿ, ಇದೊಂದು ಪ್ರೀ ಪ್ಲ್ಯಾನ್ಡ್ ಕಳ್ಳತನ, ಈ ಪಕ್ಷಿಗೆ ಕಳ್ಳತನ ಮಾಡಲು ಟ್ರೆನ್ಡ್ ಮಾಡಿರಬೇಕು ಎಂದು ಕಾಮೆಂಟ್ ಮಾಡಿದ್ದರೆ.