ಕುಟುಂಬದಿಂದ ದೂರ ಕಾಲೇಜ್ ಹುಡುಗಿರು ಹಾಸ್ಟೆಲ್ ನಲ್ಲಿ ಹೇಗಿರುತ್ತಾರೆ ಗೊತ್ತಾ? ಮಸ್ತಿ ತುಂಬಿದ ನೈಸ್ ವಿಡಿಯೋ..
ಭಾರತೀಯ ಸಮಾಜದಲ್ಲಿ ಮಕ್ಕಳನ್ನು ಹೊರಗೆ ಅಥವಾ ಬೇರೆ ಊರಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಕಳಿಸುವ ಪ್ರಸಂಗ ಬಂದರೆ ತಂದೆ ತಾಯಿಗಳ ಅವಸ್ಥೆ ಹೇಳತೀರದು. ಅದರಲ್ಲೂ ಭಾರತದ ದೊಡ್ಡ ದೊಡ್ಡ ಪಟ್ಟಣಗಳಿಗೆ ಕಳಿಸುವ ಪ್ರಸಂಗ ಬಂದರಂತೂ ಈ ಅವಸ್ಥೆ ಮತ್ತಷ್ಟು ಬಿಕ್ಕಟ್ಟಾಗುತ್ತದೆ. ಹುಡುಗರಿಗೆ ಕಳುಹಿಸುವ ಸಂದರ್ಭದಲ್ಲಿಯೇ ಈ ರೀತಿ ಆದರೆ ಇನ್ನು ಹುಡುಗಿಯರಿಗೆ ಬೇರೆ ಪಟ್ಟಣಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಳಿಸುವಾಗ ಪೋಷಕರ ಗತಿ ಹೇಗಾಗಿರಬೇಡ. ಅದನ್ನು ಯೋಚಿಸಿದರೂ ಸಹ ಮನಸ್ಸಿಗೆ ನೋವಾಗುತ್ತದೆ. ಈ ಮಕ್ಕಳು ಅಥವಾ ಹುಡುಗಿಯರು ದೂರದ ಪಟ್ಟಣದಲ್ಲಿರುವ ಹಾಸ್ಟೆಲ್ಗಳಲ್ಲಿ ಹೇಗಿರುತ್ತಾರೆ ತಮ್ಮ ಪೋಷಕರನ್ನು ಬಿಟ್ಟು ಹೇಗೆ ದಿನಗಳನ್ನು ಕಳೆಯುತ್ತಾರೆ ಎಂದು ತೋರಿಸುವ ಒಂದು ಪುಟ್ಟ ವಿಡಿಯೋ ಇಲ್ಲಿದೆ.
ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯರು ಹಾಸ್ಟೆಲ್ನಲ್ಲಿ ಪೋಷಕರಿಂದ ದೂರ ಹಾಗೂ ಪೋಷಕರನ್ನು ಮರೆತು ತಮ್ಮ ಲೈಫ್ ಯಾವ ರೀತಿ ಜೀವಿಸುತ್ತಾರೆ ಎಂದು ತೋರಿಸುವ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಮನೆಯಲ್ಲಿಯ, ಮನೆಯವರ ನೆನಪುಗಳನ್ನು ದೂರ ಮಾಡುವ ಸಲುವಾಗಿ ತಮ್ಮ ಸಹಪಾಠಿಗಳೊಂದಿಗೆ ನಗುತ್ತಾ ನಲಿಯುತ್ತಾ ಸ್ಟಡಿ ಮಾಡುತ್ತಾ ತಮ್ಮ ದಿನಗಳನ್ನು ಹೇಗೆ ಕಳೆಯುತ್ತಾರೆ ನೋಡಿ ಈ ವಿಡಿಯೋದಲ್ಲಿ…
ಈ ವಿಡಿಯೋದಲ್ಲಿ ಹುಡುಗಿಯರು ಒಂದರಮೇಲೊಂದರಂತೆ ತಮ್ಮ ಗೆಳತಿಯರ ಕೋಣೆಗಳನ್ನು ತೋರಿಸುತ್ತಿದ್ದಾರೆ. ಪ್ರತಿ ಕೋಣೆಯಲ್ಲಿ ಹುಡುಗಿಯರು ಮಜಾ ಮಾಡುತ್ತಾ, ತಮಾಷೆ ಮಾಡುತ್ತಾ, ತುಂಟಾಟ ಮಾಡುತ್ತಾ ಇನ್ನು ಕೆಲವರು ಅಭ್ಯಾಸ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಾಗೂ ತಮ್ಮ ಸಹಪಾಠಿಗಳ ಜೊತೆಗಿನ ಕಾಲೇಜು ಲೈಫ್ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿಯ ಸುಂದರ ದೃಶ್ಯಗಳ ವೀಡಿಯೋ ತುಣುಕು Roshi Raina ಹೆಸರಿನ ಚಾನೆಲ್ ನಿಂದ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 18 ಮಿಲಿಯನ್ ಗಿಂತಲೂ ಹೆಚ್ಚು ಜನ ನೋಡಿದ್ದಾರೆ ಮತ್ತು 70 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ವಿಡಿಯೋ ನೋಡಿ
ಈ ವಿಡಿಯೋವನ್ನು ನೋಡಿದ ಸಾಕಷ್ಟು ನೆಟ್ಟಿಗರು ತಮ್ಮ ಕಾಲೇಜು ಲೈಫನ್ನು ಮೇಲಿಂದ ಮೇಲೆ ನೆನಪಿಸಿಕೊಂಡಿದ್ದಾರೆ. ಮತ್ತು ತಮ್ಮ ಪ್ರತಿಕ್ರಿಯೆಗಳಲ್ಲಿ ಕಾಲೇಜು ಲೈಫ್ ಮಿಸ್ ಮಾಡಿಕೊಂಡಿದ್ದಕ್ಕಾಗಿ ನೋವು ವ್ಯಕ್ತ ಮಾಡಿದ್ದಾರೆ.