WhatsApp Cashback: ವಾಟ್ಸಾಪ್ ‘ಈ’ ಯುಜರ್ಸ್ ಗಳಿಗೆ ನೀಡಲಿದೆ 35 ರೂಪಾಯಿಗಳ ಕ್ಯಾಶಬ್ಯಾಕ್: ಅದಕ್ಕಾಗಿ ಏನು ಮಾಡಬೇಕು ಎಂಬುದು ತಿಳಿದುಕೊಳ್ಳಿ!
ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ WhatsApp ಮೂಲಕ ಈಗ ಚಾಟ್ ಮಾಡಲು ಮತ್ತು ಮಾಧ್ಯಮ ಫೈಲ್‌ಗಳನ್ನು ಹಂಚಿಕೊಳ್ಳುವದರ ಜೊತೆಗೆ ಈಗ ಹಣವು ಸಹ ಕಳುಹಿಸಬಹುದು. WhatsApp ನ್ ಗ್ರಾಹಕರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಹಣವನ್ನು ಕಳುಹಿಸುವ ಮೂಲಕ ರೂ 35 ಕ್ಯಾಶ್ಬ್ಯಾಕ್ ಪಡೆಯಬಹುದು.
ನಿಮಗೆ ಕ್ಯಾಶ್‌ಬ್ಯಾಕ್ ಆಫರ್ ಲಭ್ಯವಿದ್ದರೆ ಮಾತ್ರ, ಪಾವತಿಯ ನಂತರ ನೀವು ಕ್ಯಾಶ್‌ಬ್ಯಾಕ್ ಪಡೆಯಬಹುದು. ನೀವು ನಿಮ್ಮ ಯಾವುದೇ ಸಂಪರ್ಕಕ್ಕೆ ಹಣವನ್ನು ಕಳುಹಿಸಲು ಬಯಸಿದರೆ ಮತ್ತು ಅವರು ಪಾವತಿಗಾಗಿ ನೋಂದಾಯಿಸದಿದ್ದರೆ, ನೀವು ಮೊದಲು ಅವರನ್ನು ಆಹ್ವಾನಿಸಬೇಕು. ಮುಖ್ಯ ವಿಷಯವೆಂದರೆ ಕ್ಯಾಶ್ಬ್ಯಾಕ್ ಪಡೆಯಲು ಹಣವನ್ನು ಕಳುಹಿಸಲು ಯಾವುದೇ ಕನಿಷ್ಠ ಮಿತಿಯಿಲ್ಲ. ಮೂರು ಬಾರಿ ಕ್ಯಾಶ್‌ಬ್ಯಾಕ್ ಪಡೆಯಲು ನೀವು ಮೂರು ವಿಭಿನ್ನ ಸಂಪರ್ಕಗಳಿಗೆ ಹಣವನ್ನು ಕಳುಹಿಸಬೇಕಾಗುತ್ತದೆ.
ಷರತ್ತುಗಳೇನು?
ನೀವು ಕನಿಷ್ಟ 30 ದಿನಗಳಿಂದ WhatsApp ಅನ್ನು ಬಳಸುತ್ತಿರಬೇಕು. ಇದಲ್ಲದೆ, ಇದನ್ನು buissnes WhatsApp ನಲ್ಲಿ ಈ ಲಾಭ ಪಡೆಯಲಾಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ಸೇರಿಸುವ ಮೂಲಕ ನೀವು WhatsApp ಪಾವತಿಗಳಿಗೆ ನೋಂದಾಯಿಸಿಕೊಳ್ಳಬೇಕು.
ನೀವು ಹಣವನ್ನು ಕಳುಹಿಸುತ್ತಿರುವ ವ್ಯಕ್ತಿಯು ಭಾರತದಿಂದ WhatsApp ಬಳಕೆದಾರರಾಗಿರಬೇಕು. ಮತ್ತು ಪಾವತಿಗಾಗಿ ನೋಂದಾಯಿಸಿಕೊಳ್ಳಬೇಕು.
ನೀವು WhatsApp ನ ಇತ್ತೀಚಿನ ಆವೃತ್ತಿಯನ್ನು ಸಹ ಬಳಸಬೇಕು.
ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?
ಮೊದಲು WhatsApp ಅನ್ನು ಪ್ರಾರಂಭಿಸಿ ಮತ್ತು ಪಾವತಿ ಆಯ್ಕೆಗಳಿಗೆ ಹೋಗಿ. ನಂತರ Send New Payment ಮೇಲೆ ಟ್ಯಾಪ್ ಮಾಡಿ.
ನಂತರ ನೀವು ಹಣವನ್ನು ಕಳುಹಿಸಲು ಬಯಸುವ ಸಂಪರ್ಕವನ್ನು ಆಯ್ಕೆಮಾಡಿ. ಅವರು WhatsApp ಪಾವತಿಗಾಗಿ ನೋಂದಾಯಿಸಿದ್ದರೆ, ಅವರ ಹೆಸರಿನ ಮುಂದೆ ಉಡುಗೊರೆ ಐಕಾನ್ ಅನ್ನು ನೀವು ನೋಡುತ್ತೀರಿ. ಆ ಐಕಾನ್ ಕಾಣಿಸದಿದ್ದರೆ, ನೀವು ಅದನ್ನು ಆಹ್ವಾನಿಸಬೇಕಾಗುತ್ತದೆ.
ನೀವು ಕಳುಹಿಸಲು ಬಯಸುವ ಮೊತ್ತವನ್ನು ಟೈಪ್ ಮಾಡಿ ಮತ್ತು ಮುಂದೆ ಕ್ಲಿಕ್ ಮಾಡಿ. ನಂತರ ಪಾವತಿ ಕಳುಹಿಸು ಟ್ಯಾಪ್ ಮಾಡಿ ಮತ್ತು ನಿಮ್ಮ UPI ಪಿನ್ ಸಂಖ್ಯೆಯನ್ನು ನಮೂದಿಸಿ.