ವಿಚಿತ್ರ! ಬಿಕ್ಷೆ ಬೇಡಿ ಜೀವಿಸುವ ವ್ಯಕ್ತಿ ಕೋಟ್ಯಾಧಿಪತಿ; ಕಳೆದ ಹತ್ತು ವರ್ಷಗಳಿಂದ ಸಂಬಳಕ್ಕೆ ಸ್ಪರ್ಶವೇ ಮಾಡಿಲ್ಲ..
ನೌಕರಿ ಮಾಡುವ ವ್ಯಕ್ತಿ ತಿಂಗಳ ಮೊದಲ ವಾರದಲ್ಲಿ ಬ್ಯಾಂಕಿನಿಂದ ಸಂಬಳ ತೆಗೆದೇ ತೆಗೆಯುತ್ತಾನೆ. ಮನೆಯ ಅನೇಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಣ ಖರ್ಚು ಮಾಡಲೇಬೇಕಾಗುತ್ತದೆ. ಆದರೆ ಈ ಲೇಖನದಲ್ಲಿ ಬರುವ ವ್ಯಕ್ತಿಯ ಬಗ್ಗೆ ಕೇಳಿದರೆ ತುಂಬಾ ವಿಚಿತ್ರವಾದ ಕಥೆಯೇ ತಿಳಿದು ಬರುತ್ತದೆ. ಕಾರಣ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಸಹಪಾಠಿಗಳೇ ಬೆಚ್ಚಿ ಬಿದ್ದಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ, ಉತ್ತರಪ್ರದೇಶದಲ್ಲಿಯ ಪ್ರಯಾಗರಾಜ್ ಪಟ್ಟಣದ CM ಆಫೀಸ್ ನ ಕುಷ್ಟರೋಗ ಡಿಪಾರ್ಟ್ಮೆಂಟ್ ನಲ್ಲಿ ಧೀರಜ್ ಹೆಸರಿನ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಾನೆ.
ಧೀರಜ್ ನ ತಂದೆ ಆನ್ ಡ್ಯೂಟಿ ನಿಧನರಾಗಿದ್ದರು. ಹೀಗಾಗಿ 2012 ರಲ್ಲಿ ಮಗನಾದ ಧೀರಜ್ ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಯಿತು.
ಕೆದರಿದ ಕೂದಲು, ಕೊಳಕಾದ ಬಟ್ಟೆಗಳನ್ನು ತೊಟ್ಟುಕೊಳ್ಳುವುದರಿಂದ ಜನರು ಧೀರಜ್ ಗೆ ಭಿಕ್ಷುಕನೆಂದು ತಿಳಿದು ಹಣ ನೀಡುತ್ತಿದ್ದರು. ಮತ್ತು ಇನ್ನು ಕೆಲವರು ಊಟವನ್ನು ಸಹ ಕೊಡುತ್ತಿದ್ದರು.
ತನ್ನ ಜೊತೆಯಲ್ಲಿ ಕೆಲಸ ಮಾಡುವವರಿಂದಲೂ ಹಣ ಪಡೆದು ಮನೆಯ ಚಿಕ್ಕ ಪುಟ್ಟ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದನು. ಇಷ್ಟಲ್ಲದೆ ಆತನ ತಾಯಿಗೂ ಸಹ ಪೆನ್ಶನ್ ಬರುತ್ತಿತ್ತು.
ಈ ಹಣದಿಂದ ಆತನ ತಾಯಿಯ, ತಂಗಿಯ ಮತ್ತು ಆತನ ಉದರ ನಿರ್ವಾಹ ಸಾಗುತ್ತಿತ್ತು. ಒಂದು ದಿನ ಬ್ಯಾಂಕಿನಲ್ಲಿಯ ಅಧಿಕಾರಿಗಳು ಕುಷ್ಠರೋಗದ ಆಫೀಸಿಗೆ ಈತನನ್ನು ಶೋಧಿಸುತ್ತಾ ಬಂದಾಗ ಈ ಎಲ್ಲ ಪ್ರಕರಣ ಬೆಳಕಿಗೆ ಬಂತು.
ಧೀರಜ್ ಕಳೆದ 10 ವರ್ಷಗಳಿಂದ ತನ್ನ ಸಂಬಳವನ್ನೇ ಮುಟ್ಟಿರಲಿಲ್ಲ. ಹೀಗಾಗಿ ಆತನ ಅಕೌಂಟ್ ನಲ್ಲಿ ಇಲ್ಲಿಯವರೆಗೆ ಸುಮಾರು 80 ಲಕ್ಷ ರೂಪಾಯಿ ಜಮೆಯಾಗಿದ್ದವು.
ಇದರ ಹೊರತಾಗಿ ಆತನ ಹೆಸರಿಗೆ ಮನೆ ಮತ್ತು ಭೂಮಿಯೂ ಇದೆ. ಇಷ್ಟಿದ್ದರೂ ಧೀರಜ್ ಅತ್ಯಂತ ಬಡವನ ಹಾಗೆ ಮತ್ತು ಭಿಕ್ಷುಕನ ಹಾಗೆಯೇ ಜೀವಿಸುತ್ತಿದ್ದಾನೆ.
ಈಗ ಆತನ ಸಹಕಾರಿಗಳು ಹೇಳುವ ಹಾಗೆ ಧೀರಜ್ ನ ಮಾನಸಿಕ ಸಂತುಲನೆ ಸರಿಯಾಗಿ ಇಲ್ಲ, ಬರೀ ತನ್ನ ಕೆಲಸದಲ್ಲಿ ಮಾತ್ರ ಪ್ರಾಮಾಣಿಕನಾಗಿದ್ದಾನೆ ಎನ್ನುತ್ತಿದ್ದಾರೆ.
ಇನ್ನು ಒಂದು ವಿಶೇಷವೆಂದರೆ ಆತ ತನ್ನ ಸಂಬಳದಲ್ಲಿಯ ಒಂದು ರೂಪಾಯಿಯನ್ನು ತೆಗೆಯದಿದ್ದರೂ ಇನ್ ಕಮ್ ಟ್ಯಾಕ್ಸ್ ಮಾತ್ರ ಸರಿಯಾಗಿ ತುಂಬುತ್ತಿದ್ದಾನಂತೆ.