ಪಾಪ! ರಾನು ಮಂಡಲ್ ಗೆ ಎರಡು ಹೊತ್ತು ಅನ್ನವೂ ಸಿಗುತ್ತಿಲ್ಲ, ಕೆಲವೊಮ್ಮೆ ಉಪವಾಸವೇ ಮಲಗಬೇಕಾದ ಪರಿಸ್ಥಿತಿ ಬಂದಿದೆ!
ರಾನು ಮಂಡಲ್ ಅವರಿಗೆ ಬಂದಿದೆ ಮತ್ತೆ ಉಪವಾಸ ಬೀಳುವ ಪರಿಸ್ಥಿತಿ. ಎರಡು ಹೊತ್ತಿನ ಉಟಕ್ಕೂ ಗತಿಯಿಲ್ಲದೆ ಅನೇಕ ರಾತ್ರಿಗಳು ಉಪವಾಸವೇ ಮಲಗುವ ಸ್ಥಿತಿ ಅವರಿಗೆ ಬಂದಿದೆ.
ರೇಲ್ವೆ ಸ್ಟೇಶನ್ ದಲ್ಲಿ ಹಾಡು ಹಾಡಿ ಜನರು ಕೊಟ್ಟ ಹಣ ದಿಂದ ತನ್ನ ಉದರ ನಿರ್ವಾಹ ಮಾಡಿಕೊಂಡ ರಾನು ಮಂಡಲ್ ಒಂದೇ ರಾತ್ರಿಯಲ್ಲಿ ಸ್ಟಾರ್ ಆದಳು. ಅವಳು ಪ್ಲಾಟ್ ಫಾರ್ಮ್ ನಲ್ಲಿ ಹಾಡಿದ ಹಾಡಿನ ವೀಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವಳ ಜೀವನ ಸಹಿತ ವೇಗವಾಗಿ ಸಿರಿತನದ ಕಡೆಗೆ ಬದಲಾಯಿತು. ಆದರೆ ಈ ಬದಲಾದ ದಿನಗಳು ಕೊನೆಯವರೆಗೆ ಉಳಿಯಲಿಲ್ಲ. ಕೆಲವೇ ದಿನಗಳಲ್ಲಿ ರಾನು ಮತ್ತೆ ಸ್ಟೇಶನ್ ನಲ್ಲಿ ಹಾಡುತ್ತಿರುವ ಸಮಯ ಬಂತು. ಈಗಂತೂ ಅವಳಿಗೆ ಎರಡು ಹೊತ್ತಿನ ಊಟ ಸಿಗುವದು ಸಹಿತ ಕಠಿಣವಾಗಿದೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವೀಡಿಯೊದಿಂದ ಒಂದೇ ರಾತ್ರಿಯಲ್ಲಿ ಸ್ಟಾರ್ ಆದ ರಾನು ಒಮ್ಮೆಲೇ ಸೆಲಿಬ್ರಿಟಿಯಾದಳು. ಅವಳ ವೀಡಿಯೊ ಒಂದು ಪ್ರಚಂಡವಾಗಿ ವೈರಲ್ ಆದ ನಂತರ ಬಾಲಿವುಡ್ ನಲ್ಲಿ ಹಾಡುವ ಅವಕಾಶವೂ ದೊರೆಯಿತು. ಆದರೆ ಈ ಸ್ಟಾರ್ ಡಮ್ ಸತತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅವಳ ಜನಪ್ರಿಯತೆ ಇಷ್ಟೊಂದು ಹೆಚ್ಚಾಯಿತು ಅಂದರೆ ಜನ ಅವಳನ್ನು ನೋಡಲು ಜಮಾಯಿಸುತ್ತಿದ್ದರು. ಆದರೆ ಇದನ್ನೆಲ್ಲ ಹ್ಯಾಂಡಲ್ ಮಾಡಲು ಅವಳಿಂದ ಸಾಧ್ಯವಾಗಲಿಲ್ಲ. ಅವಳು ಫ್ಯಾನ್ಸ್ ಜೊತೆಗೆ ನಡೆದುಕೊಳ್ಳುವ ತಪ್ಪು ರೀತಿ, ಮೀಡಿಯಾದವರಿಗೆ ಕೊಟ್ಟ ಉದ್ಧಟತನದ ಉತ್ತರ ಈ ಎಲ್ಲ ಕಾರಣದಿಂದ ಅವಳ ಮೊದಲಿನ ದಿನಗಳು ಮತ್ತೆ ಮರುಕಳಿಸಿವೆ ಎಂದು ಮಾತನಾಡುತ್ತಿದ್ದಾರೆ.