Wedding Video: ನಾದಿನಿ & ಗೆಳತಿಯರು ನೀಡಿದ ಗಿಫ್ಟ್ ನೋಡಿ ವರನ ಮುಖವಾಯಿತು ಗುಲಾಬಿ! ಮದುಮಗಳು ಸಹ ನಾಚಿದಳು.
ಮದುವೆಯಲ್ಲಿ ಮುಖ್ಯ ಆಕರ್ಷಣೆ ಮದುಮಗ ಮತ್ತು ಮದುಮಗಳಾಗಿರುತ್ತಾರೆ. ಮದುವೆಗೆ ಉಪಸ್ಥಿತರಿದ್ದವರೆಲ್ಲರ ದೃಷ್ಟಿ ಬರೀ ಈ ಇಬ್ಬರು ಮದುಮಕ್ಕಳ ಮೇಲೆ ಅಷ್ಟೇ ಕೇಂದ್ರೀಕೃತವಾಗಿರುತ್ತದೆ. ಅಂಥದ್ದರಲ್ಲಿ ಯಾರೇ ಏನಾದರೂ ಮದುಮಕ್ಕಳಿಗೆ ತಮಾಷೆ ಅಥವಾ ಗೋಳು ಹೊಯ್ದುಕೊಂಡರೆ ಇಬ್ಬರಿಗೂ ಮತ್ತಷ್ಟು ಮುಜುಗರವಾಗುತ್ತದೆ. ಇಂತಹದೇ ಒಂದು ಸಿಚುವೇಶನ್ ಮದುವೆಯಲ್ಲಿ ನಡೆದಿದೆ. ಮದುವೆಯ ಇದೇ ದೃಶ್ಯ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದುವೆಯಲ್ಲಿ ವರನಿಗೆ ನಾದಿನಿಯರು ಗೋಳು ಹೊಯ್ದುಕೊಳ್ಳುವದು ಅಷ್ಟೊಂದು ವಿಶೇಷವೇನಲ್ಲ. ಆದರೆ ಇಲ್ಲಿ ನಾದಿನಿ ಮತ್ತು ಆಕೆಯ ಗೆಳತಿಯರು ವರನಿಗೆ ಭಿನ್ನವಾಗಿಯೇ ಮುಜುಗರವನ್ನುಂಟು ಮಾಡಿದ್ದಾರೆ. ಇದರ ಪರಿಣಾಮ ಮದುಮಗಳ ಮೇಲೂ ಸಹ ಆಗಿದೆ. ಮದುಮಕ್ಕಳಿಬ್ಬರೂ ಸ್ಟೇಜ್ ಮೇಲೆ ನಿಂತಾಗ ನಾದಿನಿ ಮತ್ತು ಆಕೆಯ ಕೆಲವು ಗೆಳತಿಯರು ಸ್ಟೇಜ್ ಮೇಲೆ ಬರುತ್ತಾರೆ. ಹಾಗೂ ಒಬ್ಬೊಬ್ಬರಾಗಿ ವರನಿಗೆ ಗಿಫ್ಟ್ ನೀಡಲು ಶುರು ಮಾಡುತ್ತಾರೆ. ಆ ಗಿಫ್ಟ್ ಗಳನ್ನು ತೆಗೆದುಕೊಂಡ ನಂತರ ವರನ ಮುಖ ನಾಚಿಕೆಯಿಂದ ಕೆಂಪಾಗುತ್ತದೆ. ಕಾರಣ ಗಿಫ್ಟ್ ಸ್ವರೂಪದಲ್ಲಿ ನಾದಿನಿ ಹಾಗೂ ಗೆಳತಿಯರು ಕಿಚನ್ ನಲ್ಲಿ ಯೂಸ್ ಆಗುವಂತಹ ಕೆಲವು ಸಾಮಾನುಗಳನ್ನು ಮತ್ತು ಫ್ಲೋರ್ ಒರೆಸುವ ಕ್ಲೀನಿಂಗ್ ವೈಪರ್ ಗಳನ್ನು ನೀಡುತ್ತಾರೆ. ಇದರಿಂದ ವರನ ಮುಖ ನಾಚಿಕೆಯಿಂದ ಕೆಂಪಾಗುತ್ತದೆ. ಆದರೆ ಮುಖದ ಮೇಲೆ ಹಾಸ್ಯ ಮಾತ್ರ ಹಾಗೆಯೇ ಇದೆ. ಇದನ್ನೆಲ್ಲಾ ನೋಡುತ್ತಾ ಬದಿಗೆ ನಿಂತ ಮದುಮಗಳು ಸಹ ನಾಚುತ್ತಾಳೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ wedabout ಹೆಸರಿನ ಅಕೌಂಟ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಂಟರ್ನೆಟ್ ಯೂಸರ್ಸ್ ಗಳು ತುಂಬಾ ಲೈಕ್ ಮಾಡುತ್ತಿದ್ದಾರೆ. ಕ್ಯಾಪ್ಷನ್ ನಲ್ಲಿ ‘ನಾದಿನಿಯರು ತಮ್ಮ ಮಾವನಿಗೆ ಮನೆ ಕೆಲಸಕ್ಕಾಗಿ ಪ್ರಿಪೇರ್ ಮಾಡುತ್ತಿದ್ದಾರೆ’, ಎಂದು ಬರೆದಿದ್ದಾರೆ.