ನ್ನ ಪ್ರಿಯತಮನೊಂದಿಗೆ ವಿವಾಹವಾಗಲು ಬಾಂಗ್ಲಾದೇಶದಿಂದ ಈಜುತ್ತ ಭಾರತಕ್ಕೆ ಬಂದ ಯುವತಿ: ಪಾಪ ನಂತರ ಈಕೆಯ ಜೊತೆಗೆ……….!!
ಮನುಷ್ಯ ಪ್ರೀತಿಯಲ್ಲಿ ಹುಚ್ಚನಾಗುತ್ತಾನೆ ಎಂದು ಹೇಳಲಾಗುತ್ತದೆ. ಪ್ರೀತಿಗಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ. ಇದನ್ನು ಬಾಂಗ್ಲಾದೇಶದ ಯುವತಿಯೊಬ್ಬರು ದೃಢಪಡಿಸಿದ್ದಾರೆ. ಆಕೆ ಮಾಡಿದ್ದನ್ನು ಓದಿ ನೀವೂ ಬೆರಗಾಗುತ್ತೀರಿ. ಈ ಬಾಂಗ್ಲಾದೇಶದ ಹುಡುಗಿ ಗೆಳೆಯನನ್ನು ಮದುವೆಯಾಗಲು ಬಾಂಗ್ಲಾದೇಶದಿಂದ ಭಾರತಕ್ಕೆ ಈಜಾಡುತ್ತ ಬಂದಿದ್ದಾಳೆ. ಈ ಪ್ರಕರಣ ಆಶ್ಚರ್ಯ ಪಡಿಸುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವದರ ಜೊತೆಗೆ ಚರ್ಚೆಯ ವಿಷಯವಾಗಿದೆ.
22 ವರ್ಷದ ಮಹಿಳೆ ಭಾರತದಲ್ಲಿ ವಾಸಿಸುವ ತನ್ನ ಗೆಳೆಯನನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ದೇಶದ ಒಳಗಡೆ ಬಂದಿದ್ದಾಳೆ, ಇದರ ಸಲುವಾಗಿ ಈಕೆ ಸುಂದರ್‌ಬನ್ಸ್‌ನ ಅಪಾಯಕಾರಿ ಕಾಡುಗಳನ್ನು ಪಾರು ಮಾಡುವದರ ಜೊತೆಗೆ ನದಿಯನ್ನೂ ದಾಟಿದಳು. ಸುಂದರ್‌ಬನ್ಸ್‌ನ ದಟ್ಟವಾದ ಕಾಡುಗಳು ರಾಯಲ್ ಬೆಂಗಾಲ್ ಟೈಗರ್‌ನಂತಹ ಪ್ರಾಣಿಗಳಿಗೆ ನೆಲೆಯಾಗಿದೆ.

ಫೇಸ್‌ಬುಕ್‌ನಲ್ಲಿ ಇಬ್ಬರು ಭೇಟಿಯಾದರು
ಈ ಬಾಂಗ್ಲಾದೇಶದ ಹುಡುಗಿಯ ಹೆಸರು ಕೃಷ್ಣ ಮಂಡಲ್ ಇದೆ. ಭಾರತದಲ್ಲಿ ನೆಲೆಸಿರುವ ಅಭಿಕ್ ಮಂಡಲ್ ಜೊತೆಗೆ ಫೇಸ್ ಬುಕ್ ನಲ್ಲಿ ಈಕೆಯ ಸ್ನೇಹ ಬೆಳೆಯಿತು ತದನಂತರ ಸ್ನೇಹದ ರೂಪಾಂತರ ಪ್ರೀತಿಯಲ್ಲಿ ಆಯಿತು. ಹೀಗಾಗಿ ಭಾರತಕ್ಕೆ ಬರಲು ಕೃಷ್ಣ ಅವರ ಬಳಿ ಪಾಸ್‌ಪೋರ್ಟ್ ಇರಲಿಲ್ಲ, ಆದ್ದರಿಂದ ಅವಳು ಬಾಂಗ್ಲಾದೇಶದಿಂದ ಭಾರತಕ್ಕೆ ಗಡಿ ದಾಟಲು ನದಿಯಲ್ಲಿ ಈಜುವ ದಾರಿಯನ್ನು ಆಯ್ಕೆ ಮಾಡಿದಳು, ಸುಮಾರು ಒಂದು ಗಂಟೆಯವರೆಗೆ ನದಿಯಲ್ಲಿ ಈಜುತ್ತ ಭಾರತದ ಗಡಿಯನ್ನು ಪ್ರವೇಶಿಸಿದಳು, ಆದರೆ ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಈಕೆಯನ್ನು ಬಂಧಿಸಲಾಯಿತು.
ಪೊಲೀಸರ ಪ್ರಕಾರ, ಮೂರು ದಿನಗಳ ಹಿಂದೆ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಈ ಯುವತಿ ಕೃಷ್ಣ ಅಭಿಸೋ ಅವರನ್ನು ವಿವಾಹವಾದರು. ಈ ಹಿಂದೆ ಬಾಂಗ್ಲಾದೇಶದ ಯುವಕನೊಬ್ಬ ಚಾಕಲೇಟ್ ಖರೀದಿಸಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದನು. ನಂತರ ಅಪ್ರಾಪ್ತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೆ ಇದೆ ತರಹದ ಘಟನೆ ನಡೆಯಬಾರದು ಎಂದು ಭಾವಿಸಿ ಈಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.