Video; ಸಂಗಾತಿಗೆ ಮಳೆಯಿಂದ ರಕ್ಷಣೆ ನೀಡಲು ಓಡೋಡಿ ಬಂದ ಹುಂಜ, ಏನು ಮಾಡಿದೆ ನೋಡಿ ಈ ವೈರಲ್ ವಿಡಿಯೋದಲ್ಲಿ!
ಈಗಿನವರ ಹೆಚ್ಚುವರಿ ಪ್ರೀತಿ ಹೇಗಿರುತ್ತೆ ಎಲ್ಲರಿಗೂ ಗೊತ್ತೇ ಇದೆ. ಹೆಚ್ಚಿಗೆ ಹೇಳುವ ಅವಶ್ಯಕತೆಯೇ ಇಲ್ಲವೇನಿಸುತ್ತೆ. ಇಬ್ಬರಲ್ಲೂ ಒಂದು ಆಕರ್ಷಣೆ ಇರುವವರೆಗೆ, ಇಲ್ಲ ಸ್ವಾರ್ಥ ತೀರುವವರೆಗೆ, ಇಲ್ಲ ಹಣದ ಆಸೆ ಪೂರ್ಣವಾಗುವವರೆಗೆ ಮಾತ್ರ ಅಲ್ಲವೇ?
ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೋಳಿಗಳ ಒಂದು ಸುಂದರ ದೃಶ್ಯದ ವಿಡಿಯೋ ಒಂದು ತುಂಬಾನೇ ನೋಡಲು ಸಿಗುತ್ತಿದೆ. ವಿಡಿಯೋದಲ್ಲಿ ಕಾಣುವ ಹಾಗೆ ಪರಿಸರವು ಮಳೆಯಿಂದ ತೊಯ್ದದ್ದು ಕಂಡುಬರುತ್ತಿದೆ. ಮತ್ತು ಅಲ್ಲಿ ಒಂದು ಕೋಳಿಯು ಮಳೆಯಲ್ಲಿ ನೆನೆದು ನಿಂತಿದೆ. ಅದೇ ಸಮಯಕ್ಕೆ ಹಿಂದಿನಿಂದ ಕೋಳಿಯ ಜೊತೆಗಾರ ಹುಂಜ ಬರುತ್ತದೆ. ಕೋಳಿಯ ಹತ್ತಿರವೇ ಬಂದು ಸುಮ್ಮನೆ ಹಾಗೆಯೇ ನಿಲ್ಲುವುದಿಲ್ಲ. ಅದು ತನ್ನ ಸಂಗಾತಿಯ ಕಾಳಜಿಗೆ ಮುಂದಾಗುತ್ತದೆ. ಹಾಗೂ ಕೋಳಿಯ ತೀರ ಹತ್ತಿರಕ್ಕೆ ಬಂದು ತನ್ನ ಎಡಭಾಗದ ರೇಕ್ಕೆಯನ್ನು ಬಿಚ್ಚಿ ಕೋಳಿಯ ಮೇಲೆ ಮಳೆಯ ಹನಿಗಳು ಬೀಳದಂತೆ ಆಸರೆಯಾಗಿದೆ ನಿಲ್ಲುತ್ತದೆ. ಈ ಸುಂದರವಾದ ದೃಶ್ಯವನ್ನು ನೋಡಲು ತುಂಬಾ ಮೋಹಕವಾಗಿದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ natego._.farsi ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 15 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ ಮತ್ತು ಸುಮಾರು 67 ಸಾವಿರಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.