PACL Refund: Pearls ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್! ರಿಫಂಡ್ ಗಾಗಿ ಜೂನ್ 30 ರ ವರೆಗೆ ಮಾಡಿ ಈ ಕೆಲಸ.
PACL Chit Fund Refund: ನೀವು ಅಥವಾ ನಿಮ್ಮ ಸಂಬಂಧಿಕರು ಇಲ್ಲವೇ ಪರಿಚಿತರು PACL ಇಂಡಿಯಾ ಲಿಮಿಟೆಡ್ ನ ಹೂಡಿಕೆಯ ಯೋಜನೆಯಲ್ಲಿ (Pearls) ಇನ್ವೆಸ್ಟ್ ಮಾಡಿದ್ದೇ ಆದರೆ ಈ ಸುದ್ದಿಯು ನಿಮಗಾಗಿ ತುಂಬಾ ಗುಡ್ ನ್ಯೂಸ್ ಆಗಿದೆ. ಹೌದು ಈ ಲೇಖನದಲ್ಲಿ ಹೇಳಿದ ದಿನಾಂಕವನ್ನು ನೋಟ್ ಮಾಡಿಕೊಂಡಿರಿ. ಪ್ರಸ್ತುತ ದಿನಾಂಕವನ್ನು ಮಾರ್ಕೆಟ್ ರೆಗುಲೇಟರ್ ಸೇಬಿ (SEBI) ವತಿಯಿಂದ ಹೂಡಿಕೆದಾರರಿಗೆ ಡಿಕ್ಲೇರ್ ಮಾಡಿದೆ. ಮಾರ್ಕೆಟ್ ರೆಗುಲೇಟರ್ (SEBI) ನಿಮ್ಮ ಹಣವನ್ನು ರಿಫಂಡ್ ಮಾಡಲಿದೆ.
SMS ಬಂದ ನಂತರವೇ ಡಾಕ್ಯುಮೆಂಟ್ಸ್ ಜಮೆ ಮಾಡಿ…
ಸೇಬಿ (SEBI) ವತಿಯಿಂದ ದೊರೆತ ಮಾಹಿತಿ ಪ್ರಕಾರ, ಪರ್ಲ್ಸ್ (Pearls) ನಲ್ಲಿ ಹಣಹೂಡಿಕೆ ಮಾಡಿದವರಿಗೆ 30 ಜೂನ್ 2022 ರ ವರೆಗೆ ಕ್ಲೇಮ್ ಫೈಲ್ ಮಾಡಬೇಕಾಗಿದೆ. ರಿಫಂಡ್ ಕ್ಲೇಮ್ ಮಾಡುವ ಸಲುವಾಗಿ ಹೂಡಿಕೆದಾರರಿಗೆ ಒರಿಜಿನಲ್ ಡಾಕ್ಯುಮೆಂಟ್ಸ್ ಸಬ್ಮಿಟ್ ಮಾಡಬೇಕಾಗಿದೆ. ಒಂದು ವೇಳೆ ಸ್ವತಃ ನೀವೇ ಹೂಡಿಕೆದಾರರಾಗಿದ್ದರೆ ನಿಮಗೆ SMS ಬಂದನಂತರ ಡಾಕ್ಯುಮೆಂಟ್ಸ್ ಗಳನ್ನು ಸಬ್ಮಿಟ್ ಮಾಡಬಹುದು.
ಯಾರು ಡಾಕ್ಯುಮೆಂಟ್ಸ್ ಗಳನ್ನು ಜಮೆ ಮಾಡಬಹುದು?
10001 ರೂಪಾಯಿಗಳಿಂದ ಹಿಡಿದು 15000 ಗಳವರೆಗೆ ಹೂಡಿಕೆ ಮಾಡಿದವರಿಗೆ ಮಾತ್ರ ಸೇಬಿ (SEBI) ವತಿಯಿಂದ ರಿಫಂಡ್ ವಿಂಡೋ ಓಪನ್ ಮಾಡಲಾಗಿದೆ. ಈ ಅರ್ಜಿದಾರರ ಅರ್ಜಿಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ. ಜೊತೆಗೆ ಸೇಬಿಯು ಹೂಡಿಕೆ ಮಾಡಿದವರಿಗೆ ಸಂಬಂಧಪಟ್ಟ ಕಾಗದಪತ್ರಗಳನ್ನು ಯಾರಿಗೂ ನೀಡದಂತೆ ಸೂಚನೆ ನೀಡಿದೆ. ಎಲ್ಲ ಹೂಡಿಕೆದಾರರು 30 ಜೂನ್ 2022ರ ಮೊದಲು ತಮ್ಮ ಕ್ಲೇಮ್ ರಜಿಸ್ಟರ್ ಮಾಡಿಕೊಳ್ಳಿ ಎಂದು ಸೂಚಿಸಿದೆ.
ಈ ವಿಳಾಸಕ್ಕೆ ಕಳುಹಿಸಿ.
ಪರ್ಲ್ಸ್ ಹೂಡಿಕೆದಾರರಿಗೆ ವೆರಿಫಿಕೇಶನ್ ನಂತರ ಒಂದು SMS ಕಳುಹಿಸಲಾಗುತ್ತದೆ. ಯಾರಿಗೆ SMS ಬರುತ್ತದೆ ಬರೀ ಅವರಷ್ಟೆ ರಿಫಂಡ್ ಸಲುವಾಗಿ ಕ್ಲೇಮ್ ಮಾಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಒರಿಜಿನಲ್ ಡಾಕ್ಯುಮೆಂಟ್ಸ್ ಗಳನ್ನು ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮಾಧ್ಯಮದಿಂದ…
SEBI Bhawan, Plot No.C4-A, ‘G’ Block, Bandra-Kurla Complex,Bandra (East), Mumbai –400051
ವಿಳಾಸಕ್ಕೆ ಕಳುಹಿಸಿ. ವಿಳಾಸಕ್ಕೆ ಕಳುಹಿಸುವ ಎನ್ವಲಪ್ ಮೇಲೆ PACL ಸರ್ಟಿಫಿಕೇಟ್ ನಂಬರ್ ಬರೆಯಬೇಕು.
ಜೊತೆಗೆ ಈ ಕಾಗದ ಪತ್ರಗಳನ್ನು ಜೋಡಿಸಬೇಕು.
1. PACL ಸರ್ಟಿಫಿಕೇಟ್ ಕಾಫಿ
2. PACL (ರಸೀದಿಗಳು ಒಂದು ವೇಳೆ ಇದ್ದರೆ)
3. ಪ್ಯಾನ್ ಕಾರ್ಡ್ ಕಾಪಿ
4. ಪಾಸ್ಪೋರ್ಟ್ ಸೈಜ್ ಫೋಟೋ
5. ಕ್ಯಾನ್ಸಲ್ ಚೆಕ್ ಕಾಪಿ
6. ಬ್ಯಾಂಕರ್ ಪ್ರಮಾಣ ಪತ್ರ