ಅಪ್ರಾಪ್ತ ಬಾಲಕ ಮಾಡಿರುವ ಹಗರಣ ಕೇಳಿದರೆ ಆಶ್ಚರ್ಯ ಪಡುವಿರಿ; ಸರಕಾರದ ಕಣ್ಣಲ್ಲಿ ಮಣ್ಣು ಹಾಕಿ 46 ಕೋಟಿ ಲೂಟಿ ಮಾಡಿದ.

ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಿವಿಧ ರೀತಿಯ ಪ್ರಕರಣಗಳು ಸಂಭವಿಸಿವೆ.  ಕೆಲವರು ಸ್ವಾರ್ಥವನ್ನು ಬಿಟ್ಟು ಇತರರಿಗೆ ಸಹಾಯ ಮಾಡಿದನ್ನು ನಾವು ನೋಡಿದ್ದೇವೆ , ಆದರೆ ಕೆಲವರು ಹಣವನ್ನು ಗಳಿಸಲು ಈ ಕಷ್ಟದ ಸಮಯದಲ್ಲಿಯೂ ಜನರನ್ನು ವಂಚಿಸಿರಿವುದು ಸಹ  ಕಂಡುಬಂದಿದೆ.  ನಕಲಿ ಕೋವಿಡ್ ಪರೀಕ್ಷಾ ಕೇಂದ್ರದ ಹೆಸರಿನಲ್ಲಿ ರಾಜ್ಯದ ನಿಧಿಯಿಂದ 46 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ 17 ವರ್ಷದ ಹುಡುಗ ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದಾನೆ.  ಈ ಘಟನೆಯು ಜರ್ಮನಿಯಲ್ಲಿ 2020-2021ರಲ್ಲಿ ನಡೆದಿದ್ದು, ರಾಜಧಾನಿಯಿಂದ ದೊಡ್ಡ ಹಗರಣವನ್ನು ಬಹಿರಂಗಪಡಿಸಲಾಯಿತು.  ಈ ವೇಳೆ ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಭೀಕರ ಸ್ವರೂಪವನ್ನು ತೋರಿಸುತ್ತಿತ್ತು.

ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿಕೊಳ್ಳಲು  ಜನರನ್ನು ವಿನಂತಿ ಮಾಡಲಾಯಿತು ಮತ್ತು ಇದಕ್ಕಾಗಿ, ಪರೀಕ್ಷಾ ಕೇಂದ್ರಗಳಿಗೆ ರಾಜ್ಯದ ನಿಧಿಯಿಂದ ಹಣವು ಸಹ ಕೊಡಲಾಗುತ್ತಿತ್ತು.  ಇದರ ಲಾಭ ಪಡೆದ ವಿದ್ಯಾರ್ಥಿಯೊಬ್ಬ ನಕಲಿ ಕೋವಿಡ್ ಪರೀಕ್ಷಾ ಕೇಂದ್ರ ತೆರೆದು ನೇರವಾಗಿ ಸರಕಾರಕ್ಕೆ ವಂಚನೆ ಮಾಡಿದ್ದಾನೆ.  17 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಾಂಕ್ರಾಮಿಕ ಸಮಯದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಸರ್ಕಾರದ ಧನಸಹಾಯದ ಬಗ್ಗೆ ಕಲ್ಪನೆ ಇತ್ತು.  2020 ರಲ್ಲಿ, ಅವರು ಕೇವಲ ಕಾಗದದ ಮೇಲೆ ನಕಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆದಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, ಜರ್ಮನ್ ವೈದ್ಯರ ಸಂಘವು ಹುಡುಗನ ಮಾಹಿತಿಯ ಮೇಲೆ ವಿಶ್ವಾಸವಿಟ್ಟು  ಮತ್ತು ಅವನು ಕೋವಿಡ್ ಪರೀಕ್ಷಾ ಕೇಂದ್ರವನ್ನು ನಡೆಸುತ್ತಿದ್ದಾನೆ ಎಂದು ದೃಢೀಕರಣ ಮಾಡಿತು.  ಬಾಲಕ ದಿನಕ್ಕೆ 5 ಸಾವಿರ ಕ್ಕೂ ಹೆಚ್ಚು ಕೋವಿಡ್ ಟೆಸ್ಟ್ ಮಾಡಿ  ಕೇಂದ್ರದ ಹೆಸರಿನಲ್ಲಿ ಹಣ ತಿಂದಿದ್ದಾನೆ.  ಆ ವೇಳೆ ಕೊರೊನಾ ಆತಂಕಕ್ಕೆ ಒಳಗಾಗಿದ್ದ ಪರೀಕ್ಷಾ ಕೇಂದ್ರಗಳು ಅದನ್ನು ನೋಡದೆ ಅನುದಾನವನ್ನು ಸ್ವೀಕರಿಸಿ ಬಿಲ್ ಸ್ವೀಕರಿಸುತ್ತಿದ್ದವು.  ಇದರ ಲಾಭವನ್ನು ಬಾಲಕ ಪಡೆದಿದ್ದಾನೆ.

ಈ ಹಗರಣದಲ್ಲಿ ಹುಡುಗ 5 ಲಕ್ಷ  ಕೋವಿಡ್ ಪರೀಕ್ಷೆಗಳ ಬಿಲ್ ಮಾಡಿದ.  ಅಚ್ಚರಿಯ ಸಂಗತಿಯೆಂದರೆ, ವೈದ್ಯರ ಸಂಘದ ತನಿಖೆಯಲ್ಲೂ ಅವರು ಎಂದಿಗೂ ಸಿಕ್ಕಿಬೀಳಲಿಲ್ಲ.  ಆದರೆ, ಬ್ಯಾಂಕ್ ಉದ್ಯೋಗಿಯೊಬ್ಬರು ಏಕಾಏಕಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಖಾತೆಯಲ್ಲಿ ಇಷ್ಟು ಹಣವನ್ನು ನೋಡಿ ಹಣ ಲಪಟಾಯಿಸಿದ ಬಗ್ಗೆ ಅನುಮಾನಗೊಂಡು ಈ ಕುರಿತು ಪೊಲೀಸರಿಗೆ ತಿಳಿಸಿದರು.  ತನಿಖೆ ವೇಳೆ ಬಾಲಕನು ಮೋಸ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ.  ಆದರೆ, ಅಪರಾಧ ನಡೆದಾಗ ಆತ ಅಪ್ರಾಪ್ತನಾಗಿದ್ದ ಕಾರಣ 1.20 ಲಕ್ಷ ರೂ. ದಂಡ ವಿಧಿಸಿ, ಒಂದು ವರ್ಷದ ಸನ್ನಡತೆಯ ಮೇಲೆ ಬಿಡುಗಡೆ ಮಾಡಲಾಗಿದೆ.