Video; ಕನ್ನಡಿಗ ವಿನಯಕುಮಾರ್ ರ ಚಾಣಾಕ್ಷಕ್ಕೆ ಧೋನಿ ಟಚ್! ಆಸ್ಟ್ರೇಲಿಯಾದ ದಿಗ್ಗಜ ತನ್ನ ಮೂರ್ಖತನಕ್ಕೆ ಅಪ್ಪಳಿಸಿದ ಬ್ಯಾಟ್!

ಕ್ರಿಕೆಟ್ ಪಂದ್ಯವನ್ನು ದೈಹಿಕವಾಗಿ ಆಡಿ ಗೆಲ್ಲುವದರ ಜೊತೆಗೆ ಮೈಂಡ್ ಗೇಮ್ ನಿಂದ ಹಾಗೂ ಚಾಣಾಕ್ಷತನದಿಂದಲೂ ಆಡಿ ತೀರಾ ಸೋಲಲು ಅಣಿಯಾಗಿರುವ ಪಂದ್ಯವನ್ನು ಗೆಲ್ಲಲು ಸಾಧ್ಯವಿದೆ ಎಂಬುದನ್ನು ಧೋನಿ ಸಾಬೀತು ಮಾಡಿದರು. ಈ ರೀತಿಯ ಅನೇಕ ಉದಾಹರಣೆಗಳನ್ನು ದಾಖಲೆಗಳಲ್ಲಿ ನೋಡಬಹುದು. ಧೋನಿ ತಮ್ಮ ನಾಯಕತ್ವದಲ್ಲಿ ಆಟಗಾರನನ್ನೂ ಸಹ ತುಂಬಾ ಚಾಣಾಕ್ಷನನ್ನಾಗಿ ಮಾಡಿದ್ದರು. ಇದರ ಒಂದು ಉದಾಹರಣೆಯನ್ನೇ ನೀಡುವ ವಿಡಿಯೋ ಕ್ಲಿಪ್ ನಿಮಗಾಗಿ ತಂದಿದ್ದೇವೆ ನೋಡಿ. ಈ ವಿಡಿಯೋದಲ್ಲಿ ಕನ್ನಡಿಗರಾದ ವಿನಯ್ ಕುಮಾರ್ ಅವರ ಪಾತ್ರವೂ ತುಂಬಾ ಜಬರ್ದಸ್ತ ಆಗಿದೆ.

ಪ್ರಸ್ತುತ ಪಂದ್ಯ 2 ನವೆಂಬರ್ 2013 ರಲ್ಲಿ ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದಲ್ಲಿ ಬೆಂಗಳೂರಿನಲ್ಲಿಯೇ ನಡೆದಿತ್ತು. ಈ ಪಂದ್ಯದಲ್ಲಿ ಅನೇಕ ದಾಖಲೆಗಳು ನುಚ್ಚುನೂರಾದವು. ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕೇವಲ 158 ಬಾಲ್ ಗಳಲ್ಲಿ 209 ರನ್ ಗಳನ್ನು ಬಾರಿಸಿದ್ದರು. ಭಾರತ ಮೊದಲು ಬ್ಯಾಟ್ ಮಾಡಿ 383 ರನ್ಗಳನ್ನು ಕಲೆಹಾಕಿ ಆಸ್ಟ್ರೇಲಿಯಾಕ್ಕೆ 384 ರ ಗುರಿಯನ್ನು ನೀಡಿದ್ದರು.

ಈ ಗುರಿಯ ಬೆನ್ನಟ್ಟುವ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಗಳು ಭರ್ಜರಿಯಾಗಿ ಪ್ರಾರಂಭ ಮಾಡಿದ್ದರು. ಏತನ್ಮಧ್ಯೆ ಆಸ್ಟ್ರೇಲಿಯಾದ ನಾಯಕ ಜಾರ್ಜ್ ಬೇಯ್ಲಿಯವರು ವಿನಯ್ ಕುಮಾರ್ ಬಾಲಿಗೆ ಡೀಪ್ ಮಿಡ್ ವಿಕೆಟ್ ಗೆ ಜೋರಾದ ಶಾಟ್ ಹೊಡೆದು ರನ್ ಗೆ ಓಡಿದ್ದಾರೆ. ಅತ್ತ ಯುವರಾಜ್ ಸಿಂಗ್ ಬಂದು ಫೀಲ್ಡ್ ಮಾಡುವವರೆಗೆ ಆರಾಮಾಗಿ ಎರಡು ರನ್ ಗಳು ಆಗುತ್ತಿದ್ದವು. ಆದರೆ ಬೇಯ್ಲಿ ಮಾತ್ರ ತನಗೇನು ಅಪಾಯವಿಲ್ಲ ಎಂದು ತಿಳಿದು ಬರೀ ನಾನ್ ಸ್ಟೈಕರ್ ಎಂಡ್ ಕಡೆಗೆ ಗಮನವಿಡುತ್ತ ಒಂದು ರನ್ ಮುಗಿಸಿ ಎರಡನೇ ರನ್ ಗೆ ತಾನು ಕ್ರೀಸ್ ಮುಟ್ಟಬೇಕು ಎನ್ನುವುದನ್ನೇ ಮರೆತಿದ್ದಾರೆ. ಇಂಥ ಅವಕಾಶ ಧೋನಿ ಬಳಗ ಎಂದಾದರೂ ಮರೆತಿತೇ? ಯುವರಾಜ್ ಸಿಂಗ್ ಎಸೆದ ನೇರ ಥ್ರೋ ವಿನಯ್ ಕುಮಾರ್ ಅವರಿಗೆ ತಲುಪುವ ಮೊದಲು ವಿನಯ್ ಕುಮಾರ್ ಒಂದು ಕಣ್ಣು ಜಾರ್ಜ್ ಬೇಯ್ಲಿ ಮೇಲೆ ಇಟ್ಟೇ ಇದ್ದರು. ಹೀಗಾಗಿ ಯುವರಾಜ್ ಸಿಂಗ ಒಗೆದ ಚೆಂಡು ತಮ್ಮ ಕೈ ಮುಟ್ಟಿದ ತಕ್ಷಣ ವಿನಯ್ ಅವರು ಕ್ಷಣಾರ್ಧದಲ್ಲಿ ಧೋನಿ ಕಡೆಗೆ ಎಸೆದಿದ್ದಾರೆ. ಆಗ ಎಚ್ಟುತ್ತುಕೊಂಡ ಜಾರ್ಜ್ ಬೇಯ್ಲಿ ಓಡಿಹೋಗಿ ಕ್ರೀಸ್ ಮುಟ್ಟುವಷ್ಟರಲ್ಲಿ ಧೋನಿ ತಮ್ಮ ಕೆಲಸವನ್ನು ಮಾಡಿ ಮುಗಿಸಿ ಸೆಲೆಬ್ರೇಶನ್ ನಲ್ಲಿ ತೊಡಗಿದ್ದರು.

ಇಲ್ಲಿ ವಿನಯ್ ಕುಮಾರ್ ಅವರ ಚಾಣಾಕ್ಷತನ ಮರೆಯುವಂತಿಲ್ಲ. ಧೋನಿಯವರಂತೂ ಇಂಥ ಕೆಲಸದಲ್ಲಿ ತುಂಬಾ ಪರಿಣಿತರು. ಆದರೆ ಅವರು ತಮ್ಮ ಆಟಗರರನ್ನೂ ಸಹ ಯಾವರೀತಿ ತಯಾರಿಸುತ್ತಿದ್ದರು ಎಂಬುದು ಪ್ರಶಂಸನೀಯ.

ವಿಡಿಯೋ ನೋಡಿ

ಪ್ರಸ್ತುತ ಪಂದ್ಯವನ್ನು ಭಾರತ ತುಂಬಾ ಸಹಜವಾಗಿ ಅಂದರೆ 57 ರನ್ ಗಳಿಂದ ಗೆದ್ದಿತು. ಮತ್ತು 7 ಪಂದ್ಯಗಳ ಸರಣಿ ಭಾರತ 3-2 ಅಂತರದಿಂದ ಗೆದ್ದು ಬೀಗಿತ್ತು.