ಸುಷ್ಮಾ ಸ್ವರಾಜ್ ಅವರ ಮಗಳು ಯಾರು ಮತ್ತು ಅವರು ಸದ್ಯಕ್ಕೆ ಏನು ಮಾಡುತ್ತಾರೆ ನೋಡಿ…

ಪೂರ್ವ ವಿದೇಶ ಮಂತ್ರಿ ಮತ್ತು ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರಾದ ದಿ. ಸುಶ್ಮಾ ಸ್ವರಾಜ್ ಅವರು 1975 ರಲ್ಲಿ ಸುಪ್ರೀಂ ಕೋರ್ಟಿನ ವಕೀಲರಾದ ಸ್ವರಾಜ್ ಕೌಶಲ್ ಅವರ ಜೊತೆಗೆ ಮದುವೆಯಾದರು. ಸ್ವರಾಜ್ ಕೌಶಲ್ ಅವರು ಮೂರು ವರ್ಷಗಳವರೆಗೆ ಮಿಜೋರಮ್ ದ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಸುಶ್ಮಾ ಅವರಿಗೆ ಒಬ್ಬಳು ಮಗಳು ಇದ್ದಾಳೆ. ಅವಳ ಹೆಸರು ಬಾಸುರಿ ಇದೆ. ಇಂದು ಸುಶ್ಮಾ ಅವರ ಮಗಳು ಯಾರು ಮತ್ತು ಸದ್ಯಕ್ಕೆ ಅವರು ಏನು ಮಾಡುತ್ತಾರೆಂಬುದನ್ನು ನೋಡೋಣ.

ಬಾಸುರಿ, ಸುಶ್ಮಾ ಸ್ವರಾಜ್ ಅವರ ಒಬ್ಬಳೇ ಮಗಳು. ಅವರು ಆಕ್ಸಫರ್ಡ್ ಯೂನಿವರ್ಸಿಟಿಯಿಂದ ಗ್ರೇಜುಯೇಷನ್ ಮಾಡಿದ್ದಾರೆ. ಇನರ್ ಟೆಂಪಲ್ ಮುಖಾಂತರ ಅವರು ಕಾನೂನು ಅಧ್ಯಯನದಲ್ಲಿ ಬ್ಯಾರಿಸ್ಟರ್ ಪೂರ್ಣ ಗೊಳಿಸಿದ ನಂತರ ತನ್ನ ತಂದೆಯ ಜೊತೆಗೆ ಕ್ರಿಮಿನಲ್ ಲಾಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬಾಸುರಿ ಕೌಶಲ್ ಸ್ವರಾಜ್ ದೆಹಲಿ ಹಾಯ್ ಕೋರ್ಟ್ ಮತ್ತು ಭಾರತದ ಸುಪ್ರೀಂಕೋರ್ಟ್ ನಲ್ಲಿ ಕ್ರಿಮಿನಲ್ ಲಾಯರ್ ಆಗಿದ್ದಾರೆ.

ಬಾಸುರಿಯವರು IPL ನ ಪೂರ್ವ ಕಮಿಷನರ್ ಲಲಿತ್ ಮೋದಿಯವರ ಲೀಗಲ್ ಟೀಮಿನಲ್ಲಿ ಶಾಮೀಲಾಗಿದ್ದುದರ ಬಗ್ಗೆ ಗೊತ್ತಾದಾಗ ಒಮ್ಮೆಲೆ ಮೀಡಿಯಾದ ದೃಷ್ಟಿಯಲ್ಲಿ ಬಂದರು.

ಲಲಿತ್ ಮೋದಿಯವರು ಒಮ್ಮೆ ತಮ್ಮ ಟ್ವೀಟ್ ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದರು. ಲೀಗಲ್ ಟೀಮಿನ ಸದಸ್ಯರ ಹೆಸರುಗಳನ್ನು ಉಲ್ಲೇಖಿಸಿದ್ದರು. ಆ ಸದಸ್ಯರ ಹೆಸರುಗಳಲ್ಲಿ 8 ವಕೀಲರ ಜೊತೆಗೆ ಸುಶ್ಮಾ ಸ್ವರಾಜ್ ಅವರ ಮಗಳಾದ ಬಾಸುರಿಯ ಹೆಸರೂ ಇತ್ತು.

ಲಲಿತ್ ಮೋದಿಯವರು ಟ್ವೀಟ್ ಮಾಡಿದ ಆ ಎಂಟು ಜನರಲ್ಲಿ ಮಹಮೂದ್ ಅಬ್ದಿ, ಬಾಸುರಿ ಸ್ವರಾಜ್, ರೋಜರ್ ಗ್ರೆಸನ್, ಡಾಕ್ಟರ್ ಆರ್ ಮರಾಠಾ, ಬಿಯಾಂಕಾ ಹೆಮ್ ರಿಚ್, ವೆಂಕಟೇಶ್ ದೊಂದ್, ಅಭಿಷೇಕ್ ಸಿಂಹ, ಅಂಕುರ ಚಾವಲಾ ಇವರಿದ್ದರು.

ಆ ಸಮಯದಲ್ಲಿ ಸುಶ್ಮಾ ಅವರ ಮಗಳು ಲಲಿತ್ ಮೋದಿಯವರ ಸಹಾಯ ಮಾಡುತ್ತಿದ್ದಾರೆಂಬ ಚರ್ಚೆ ಹರಡಿತ್ತು. 27 ಆಗಸ್ಟ್ 2014 ರಲ್ಲಿ ಹೈಕೋರ್ಟ್ ಲಲಿತ್ ಮೋದಿಯವರ ಪಾಸ್ಪೋರ್ಟ್ ವಾಪಸ್ ಕೊಟ್ಟಿತ್ತು. ಆಗ ಬಾಸುರಿ ಕೋರ್ಟ್ ನಲ್ಲಿ ಹಾಜರಿದ್ದಳು. ಇದೇ ಸಂದರ್ಭವನ್ನು ಮುಂದಿಟ್ಟುಕೊಂಡು ಲಲಿತ್ ಮೋದಿ ತಮ್ಮ ಲೀಗಲ್ ಟೀಮಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು. ಆಗ BJP ಯು ಆಕೆಯ ಬಚಾವ್ ಮಾಡುತ್ತ, ಬಾಸುರಿ ತನ್ನ ವ್ಯವಸಾಯದಲ್ಲಿ ಸ್ವತಂತ್ರಳಾಗಿದ್ದಾಳೆ. ಅವಳು ತನ್ನ ಕೆಲಸ ಮಾಡುತ್ತಿದ್ದಾಳೆ ಎಂದು ಹೇಳಿತ್ತು.

ಸುಷ್ಮಾ ಅವರ ಪತಿ ಮತ್ತು ಬಾಸುರಿಯ ತಂದೆಯೂ ಆದ ಕೌಶಲ್ ಅವರು ಸದ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿವಕ್ತಾರರಾಗಿದ್ದಾರೆ. ಇವರು 1998 ರಿಂದ 2004 ರ ವರೆಗೆ ಸಂಸದ ಸದಸ್ಯರು ಆಗಿದ್ದರು.

ಸುಶ್ಮಾ ಅವರ ಕುಟುಂಬದಲ್ಲಿ ಒಬ್ಬ ಅಣ್ಣ ಒಬ್ಬಳು ತಂಗಿಯೂ ಇದ್ದಾರೆ. ಸುಶ್ಮಾ ಅವರ ತಂದೆಯ ಹೆಸರು ಹರದೇವ್ ಶರ್ಮಾ ತಾಯಿಯ ಹೆಸರು ಲಕ್ಷ್ಮಿ ದೇವಿ ಇದೆ. ಅಣ್ಣ ಗುಲಶನ್ ಶರ್ಮಾ ಮತ್ತು ತಂಗಿಯ ಹೆಸರು ವಂದನಾ ಶರ್ಮಾ ಇದೆ.

ಅಣ್ಣ ಗುಲಶನ್ ಶರ್ಮಾ ಆಯುರ್ವೇದ್ ಡಾಕ್ಟರ್ ಹಾಗೂ ತಂಗಿ ಹರಿಯಾಣಾದ ಕಾಲೇಜ್ ಒಂದರಲ್ಲಿ ಪ್ರೊಫೆಸರ್ ಇದ್ದಾರೆ.