ಪುಟ್ಟ ಚೆಂದುಳ್ಳಿ ನೀರಾಟವಾಡಲು ಓಡಿದಳು ಬೀಚ್ ನಲ್ಲಿ; ಸೂಪರ್ ದೃಶ್ಯ ಸೆರೆಯಾಯಿತು ಕ್ಯಾಮೆರಾದಲ್ಲಿ!

ಪುಟ್ಟ ಮಕ್ಕಳ ವಿಡಿಯೋಗಳು ತುಂಬಾನೇ ಮಜವಾಗಿರುತ್ತವೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇವು ಚೆನ್ನಾಗಿ ವೈರಲ್ ಆಗುತ್ತವೆ. ಇಂಥದೇ ಒಂದು ಪುಟ್ಟ ಹುಡುಗಿಯ ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ನಂತರ ನಿಜಕ್ಕೂ ಒಮ್ಮೆಲೆ ಫ್ರೆಶ್ ಆಗುವಿರಿ.

ವಿಡಿಯೋ ಸಮುದ್ರದ ದಂಡೆಯೊಂದರಲ್ಲಿ ಶೂಟ್ ಮಾಡಲಾಗಿದೆ. ಪುಟ್ಟ ಹುಡುಗಿಯು ಹಳದಿ ಬಣ್ಣದ ಕುಪ್ಪಸ ಮತ್ತು ಲಂಗವನ್ನು ತೊಟ್ಟು ತುಂಬಾ ಸುಂದರವಾದ ಡ್ರೆಸ್ ನಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತ ಸಮುದ್ರದ ದಂಡೆಯಲ್ಲಿ ಪ್ರವೇಶ ಮಾಡುತ್ತಾಳೆ. ಸಮುದ್ರದಲ್ಲಿ ಓಡಿ ಬರುವಾಗ ತನ್ನ ಎರಡು ಕೈಗಳಿಂದ ಲಂಗವನ್ನು ಎತ್ತಿಹಿಡಿದು ಮುದ್ದು ಮುದ್ದಾಗಿ ಕಾಣುತ್ತಿದ್ದಾಳೆ. ಆಗ ಅದೇ ಸಮಯಕ್ಕೆ ಸಮುದ್ರದ ಅಲೆಯೊಂದು ಆಕೆಯ ಕಾಲಕೆಳಗೆ ಹರಿದು ಬರುತ್ತದೆ. ಮೊದಲು ಅಲೆ ಆಕೆಗೆ ತುಂಬಾ ಹಿತವನ್ನು ನೀಡುತ್ತದೆ ಹಾಗೂ ಖುಷಿ ಪಡುತ್ತಾಳೆ. ಯಾವಾಗ ಆಕೆಯ ಕಾಲ ಕೆಳಗಿನ ಮರಳು ಸರಿಯಲು ಶುರುವಾಗುತ್ತದೆಯೋ ಆಗ ನೋಡಬೇಕು ಹುಡುಗಿಯ ಮುಖ. ಹುಡುಗಿಯು ಒಮ್ಮೆಲೆ ತಾನು ನೀರಿನ ಜೊತೆಗೆ ಹರಿದು ಹೋಗುತ್ತಿದ್ದೇನೆ ಎನ್ನುವ ಭಯದಿಂದ ಕಿರುಚಲು ಶುರುಮಾಡುತ್ತಾಳೆ. ಆ ಮಗುವಿಗೆ ಅಲ್ಲಿ ಏನಾಗುತ್ತಿದೆ ಎಂಬ ಅನುಭವ ಸಮುದ್ರದ ಬೀಚ್ ಗಳಲ್ಲಿ ತಿರುಗಾಡಿದವರೆಗೆ ಗೊತ್ತಾಗುತ್ತದೆ. ನೀರಿನ ರಭಸಕ್ಕೆ ಕಾಲ್ಕೆಳಗಿನ ಮರಳು ಸರಿಯುವಾಗ ನೀರಿನಲ್ಲಿ ಹರಿದುಹೋಗುವಂತೆ ಭಾಸವಾಗುತ್ತದೆ. ಇದೇ ರೀತಿ ಅನುಭವಕ್ಕೆ ಹುಡುಗಿಯು ಹೆದರಿ ಕಿರುಚಿದ್ದಾಳೆ. ಈ ಒಂದು ದೃಶ್ಯ ನೋಡಲು ನಿಜಕ್ಕೂ ತುಂಬಾ ತಮಾಷೆ ಎನಿಸುತ್ತದೆ. ಮುಗ್ಧ ಮಕ್ಕಳ ಆಟಗಳು ನೋಡಲು ತುಂಬಾ ಚೆನ್ನಾಗಿರುತ್ತವೆ ಅಲ್ವಾ?

ವಿಡಿಯೋ ನೋಡಿ

 

View this post on Instagram

 

A post shared by mumma’s angel (@hitanshi_bhoir)

ಪ್ರಸ್ತುತ ಈ ವಿಡಿಯೋವನ್ನು hitanshi_bhoir ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋವನ್ನು ಇಲ್ಲಿಯವರೆಗೆ 20 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದು 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.