Video; ಕಾರು ನೋಡದೆ ಹಠಾತ್ ರಸ್ತೆಗಿಳಿದ ಪುಟ್ಟಿಗೆ ಉಳಿಸಲು ಮಿಂಚಿನ ವೇಗದಲ್ಲಿ ಸಂಚಲನ ಮಾಡಿದ ಯುವಕ..!
ಅಹಿತಕರ ಘಟನೆಗಳು ಯಾವತ್ತು, ಯಾವಾಗ ಹಠಾತ್ತನೆ ಘಟಿಸಿಬಿಡುತ್ತದೆ ಎಂಬುದರ ಅಂದಾಜು ಯಾರಿಗೂ ಇರುವದಿಲ್ಲ. ಆದರೆ ಕೆಲವೊಮ್ಮೆ ಅಂಥ ಸಂದರ್ಭದಲ್ಲಿ ಕೆಲವರು ಆಪತ್ಬಾಂಧವರಂತೆ ಬಂದು ವ್ಯಕ್ತಿಯ ಹೋಗುವ ಜೀವವನ್ನು ಕ್ಷಣದಲ್ಲಿ ಉಳಿಸಿ ಬಿಟ್ಟಿರುತ್ತಾರೆ. ಇದೇ ರೀತಿಯ ಒಂದು ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ವಿಡಿಯೋ ನೋಡಿದ ಮೇಲೆ ನೀವೂ ಸಹ ವಾವ್, ಸೂಪರ್ ಎನ್ನುವಿರಿ.
ವಿಡಿಯೋದಲ್ಲಿ ಕಂಡುಬರುವ ಹಾಗೆ ರಸ್ತೆಯನ್ನು ದಾಟುವ ಸಲುವಾಗಿ ಒಬ್ಬಳು ಯುವತಿ ಹಾಗೂ ಒಬ್ಬ ಯುವಕ ರಸ್ತೆಯ ಬದಿಗೆ ನಿಂತಿದ್ದಾರೆ. ರಸ್ತೆಯ ಮೇಲೆ ಒಂದೇ ಸವನೆ ಒಂದರ ನಂತರ ಒಂದು ವಾಹನಗಳು ಓಡಾಡುತ್ತಿವೆ. ಅದೇ ಸಂದರ್ಭದಲ್ಲಿ ಎದುರಿನಿಂದ ಪುಟ್ಟ ಹುಡುಗಿಯೊಂದು ಹಠಾತ್ತನೆ ಅತ್ತಿತ್ತ ನೋಡದೆ ಒಮ್ಮೆಲೆ ರಸ್ತೆ ದಾಟಲು ಮುಂದಾಗುತ್ತಾಳೆ. ಸರಿಯಾಗಿ ಅದೇ ಸಮಯಕ್ಕೆ ಹುಡುಗಿಯ ಬಲಭಾಗದಿಂದ ಒಂದು ಕಾರು ಬರುವದನ್ನು ಹುಡುಗಿಯು ಗಮನಿಸಿಯೇ ಇಲ್ಲ, ಆದರೆ ಇತ್ತ ಕಡೆ ರಸ್ತೆ ದಾಟಲು ನಿಂತ ಯುವತಿ ಮತ್ತು ಯುವಕ ಇಬ್ಬರೂ ಆ ಹುಡುಗಿಗೆ ಹಾಗೂ ಕಾರು ಬರುವದನ್ನು ಎರಡೂ ನೋಡಿದ್ದಾರೆ. ಯುವಕ ಹುಡುಗಿಯನ್ನು ನೋಡಿದ್ದೆ ತಡ ಕ್ಷಣದಲ್ಲಿ ಒಮ್ಮೆಲೆ ಆಕ್ಷನ್ ಮೊಡ್ ನಲ್ಲಿ ಬಂದು ಮಿಂಚಿನ ವೇಗದಲ್ಲಿ ಹುಡುಗಿಯ ಎದುರು ಹೋಗಿ ಆಕೆಯನ್ನು ಎತ್ತಿಕೊಂಡು ಹಾಗೆಯೇ ರಸ್ತೆಯ ಆಚೆ ಹೋಗಿದ್ದಾನೆ, ಅಷ್ಟರಲ್ಲಿ ಕಾರು ಹಿಂದೆ ಹಾಗೆಯೇ ನುಗ್ಗಿ ಬಂದೆ ಬಿಟ್ಟಿದೆ. ಹುಡುಗಿಯ ಮತ್ತು ಯುವಕನ ಅದೃಷ್ಟ ತುಂಬಾ ಚೆನ್ನಾಗಿತ್ತು. ಇಬ್ಬರಿಗೂ ಯಾವುದೇ ರೀತಿಯ ಚಿಕ್ಕ ಗಾಯವೂ ಆಗಿಲ್ಲ. ಈ ಪುಟ್ಟ ಹುಡುಗಿ ಮಾತ್ರ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ತಪ್ಪಿಸಿಕೊಂಡಿದ್ದಳು. ಯುವಕ ಹುಡುಗಿಗೆ ದೇವರಂತೆ ಬಂದು ಕ್ಷಣದಲ್ಲಿ ಉಳಿಸಿದ್ದಾನೆ.
ನೋಡಿ ಈ ವಿಡಿಯೋ…
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ discovery.engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 1.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು ಸುಮಾರು 99 ಸಾವಿರ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.