ಗಂಡನ ಮನೆಯಲ್ಲಿ ನೀಡುವ ಕಿರುಕುಳಕ್ಕೆ ಬೇಸತ್ತು ಬಂದಳು ತವರಿಗೆ; UPSC ಪಾಸಾಗಿ ಹೊಡೆದಳು 177 ನೇ ರ್ಯಾಂಕ್ !
ಪರಿಸ್ಥಿತಿ ಹೇಗೆ ಇರಲಿ ಮನಸ್ಸಿನಲ್ಲಿ ಒಮ್ಮೆ ಇಚ್ಛಾಶಕ್ತಿ ನಿರ್ಮಾಣವಾದರೆ, ಮನುಷ್ಯನು ಇದ್ದ ಪ್ರತಿಕೂಲ ಪರಿಸ್ಥಿತಿಯಿಂದ ಹೇಗೋ ಒಂದು ಮಾರ್ಗ ತೆಗೆದೇ ತೆಗೆಯುತ್ತಾನೆ. ಅವರಲ್ಲಿ ಒಬ್ಬಳು ಶಿವಾಂಗಿ ಗೋಯಲ್. ಇವರು ಈಗಷ್ಟೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸಾದವರು. ಅಷ್ಟೇ ಅಲ್ಲ ದೇಶದಲ್ಲಿಯೇ ಅವರು 177 ನಂಬರ್ ಹೊಡೆದವರು.
ಇವರು ಉತ್ತರ ಪ್ರದೇಶದ ಪಿಲಖುವಾ, ಹಾಪೂರ್ ನ ನಿವಾಸಿಯಾಗಿದ್ದು ಯುಪಿಎಸ್ ಸಿ ಯಲ್ಲಿ ಪಾಸಾಗಿ ಬರೀ ತಮ್ಮ ಕುಟುಂಬವಷ್ಟೆ ಅಲ್ಲ ತಮ್ಮ ಜಿಲ್ಲೆಯ ಹೆಸರನ್ನೇ ದೇಶದಲ್ಲಿ ಬೆಳಗಿಸಿದ್ದಾರೆ. ಆದರೆ ಇಲ್ಲಿಯವರೆಗೆ ಬಂದು ಮುಟ್ಟಲು ಅವರು ತೆಗೆದುಕೊಂಡ ಪರಿಶ್ರಮ ಅಷ್ಟಿಷ್ಟಲ್ಲ. ಅವರು ಹೇಳುವ ಪ್ರಕಾರ ವಿವಾಹಿತರಿದ್ದು ಅವರಿಗೆ ಒಂದು ಹುಡುಗಿಯ ಸಹ ಇದೆಯಂತೆ.
ಗಂಡನ ಮನೆಯಲ್ಲಿ ನೀಡುವ ಕಿರುಕುಳಕ್ಕೆ ಬೇಸತ್ತು ಶಿವಾಂಗಿ ಮರಳಿ ತನ್ನ ತವರಿಗೆ ಬಂದವರು. ಸದ್ಯ ಪತಿಯ ಜೊತೆಗೆ ವಿಚ್ಛೇದನೆಯ ಕೇಸು ಸಹ ನಡೆಯುತ್ತಿದೆ. ಅವರಿಗೆ ಮದುವೆಯಾಗುವ ಮೊದಲೆ ಐಎಎಸ್ ಆಗಬೇಕಾಗಿತ್ತು ಎಂದು ತಮ್ಮ ಆಸೆಯನ್ನು ಹೇಳುತ್ತಾರೆ. ಇದಕ್ಕೂ ಮೊದಲು ಅವರು ಎರಡು ಬಾರಿ ಈ ಪರೀಕ್ಷೆಯನ್ನು ನೀಡಿದ್ದರು, ಆದರೆ ಯಶಸ್ಸು ಸಿಕ್ಕಿರಲಿಲ್ಲ.
ತದನಂತರ ಅವರ ಮದುವೆಯಾಯಿತು. ಗಂಡನ ಮನೆಯಲ್ಲಿ ಅವರಿಗೆ ಕಿರುಕುಳ ನೀಡಲು ಶುರುವಾಯಿತು. ಆಗ ಬೇಸತ್ತು ತಮ್ಮ ಏಳು ವರ್ಷದ ಹುಡುಗಿಯನ್ನು ತೆಗೆದುಕೊಂಡು ಮರಳಿ ತವರಿಗೆ ಬಂದರು. ಶಿವಾಂಗಿಯ ತಂದೆ ತಾಯಿಯರು ಶಿವಾಂಗಿಗೆ ತಮ್ಮಿಂದಾದಷ್ಟು ಫುಲ್ ಸಪೋರ್ಟ್ ಮಾಡಿದರು. ಈಗ ಮಾತ್ರ ಶಿವಾಂಗಿ ಯಾವುದು ಚಾನ್ಸ್ ತೆಗೆದುಕೊಳ್ಳುವ ಹಾಗಿರಲಿಲ್ಲ. ಮತ್ತೆ ಏನಾದರೂ ಮಾಡಿ ಈ ಬಾರಿ ಯುಪಿಎಸ್ ಸಿ ಪಾಸಾಗಲೇಬೇಕೆಂದು ಭರ್ಜರಿಯಾಗಿ ತಯಾರಿ ಮಾಡಿದರು. ಮತ್ತು ಅಭ್ಯಾಸ ಜೋರಾಗಿ ಪ್ರಾರಂಭಿಸಿದರು.
ಇದು ಶಿವಾಂಗಿಯವರ ಮೂರನೇ ಪ್ರಯತ್ನವಾಗಿತ್ತು. ಇವರಿಗೆ ಚಿಕ್ಕಂದಿನಿಂದಲೂ ಯುಪಿಎಸ್ಸಿ ಪಾಸಾಗಿ ಅಧಿಕಾರಿಯಾಗಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಕಠೋರ ಪರಿಶ್ರಮ ಮತ್ತು ಜಿದ್ದಿನಿಂದ ಕೊನೆಗೂ ಒಂದು ದಿನ ಅವರು ಈ ಪರೀಕ್ಷೆಯನ್ನು ಪಾಸ್ ಆದರು. ತಮ್ಮ ಯಶಸ್ಸಿನ ಶ್ರೇಯವನ್ನು ತಾಯಿ-ತಂದೆಗೆ ಹಾಗೂ ಮಗಳಿಗೆ ನೀಡಲು ಶಿವಾಂಗಿ ಮರೆತಿಲ್ಲ.
ಇವರ ತಂದೆ ರಾಜೇಶ್ ಗೋಯಲ್ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಇವರು ಶಾಲೆಯಲ್ಲಿ ಕಲಿಯುತ್ತಿದ್ದಾಗ ಅಲ್ಲಿಯ ಮುಖ್ಯಗುರುಗಳು ಶುಭಾಂಗಿಗೆ ಯುಪಿಎಸ್ಸಿ ತಯಾರಿ ಮಾಡು ಎಂದು ಸೂಚಿಸಿದ್ದರಂತೆ. ಆಗಿನಿಂದಲೂ ಐಎಎಸ್ ಮಾಡಲೇಬೇಕೆಂದು ಮನಸ್ಸಿನಲ್ಲಿ ಇವರಿಗೆ ಆಸೆ ಇತ್ತು.
ಸಮಾಜದಲ್ಲಿಯ ವಿವಾಹಿತ ಮಹಿಳೆಯರಿಗೆ ಒಂದು ಸಂದೇಶ ನೀಡುವುದಿದೆ ಎಂದು ಹೇಳುತ್ತಾರೆ ಶಿವಾಂಗಿ. ಅವರ ಗಂಡನ ಮನೆಯಲ್ಲಿ ಏನಾದರೂ ತಪ್ಪಾಗಿ ನಡೆಸಿಕೊಳ್ಳುತ್ತಿದ್ದರೆ ಅಥವಾ ಕಿರುಕುಳ ನೀಡುತ್ತಿದ್ದರೆ ಹೆದರಬೇಡಿ. ನಿಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲುವ ಪ್ರಯತ್ನ ಮಾಡಿ ಹಾಗೂ ನಿಂತು ತೋರಿಸಿ. ಮಹಿಳೆ ಒಮ್ಮೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು ಎನ್ನುತ್ತಾಳೆ ಶಿವಾಂಗಿ.