Video; ಕಲ್ಯಾಣ ಮಂಟಪದಲ್ಲಿ ವರನ ಸ್ವಾಗತ ಬೀಗರು, ಬಿಜ್ಜರು ಮಾಡದೇ ಸ್ವತಃ ವಧುವೇ ಯಾವ ರೀತಿ ಮಾಡಿದ್ದಾಳೆ? ನೋಡಿ.
ಮೇ/ ಜೂನ್ ತಿಂಗಳುಗಳಿಗೆ ಮದುವೆ ತಿಂಗಳು ಎಂದರೆ ಬಹುಶಃ ತಪ್ಪಾಗಲಾರದು. ಅಷ್ಟೊಂದು ಮದುವೆಗಳು ಈ ತಿಂಗಳಲ್ಲಿ ಜರಗುತ್ತವೆ. ಹೀಗಾಗಿ ಸೋಶಿಯಲ್ ಮಿಡಿಯಾದಲ್ಲಂತೂ ಮದುವೆಯ ಸಂದರ್ಭದಲ್ಲಿ ಘಟಿಸಿದ ವಿಶೇಷ ದೃಶ್ಯಗಳು ವೈರಲ್ ಆಗೇ ಆಗುತ್ತಿವೆ. ಈಗ ಸ್ವತಃ ವಧುವೆ ವರನ ಸ್ವಾಗತವನ್ನು ಮಾಡಿದ ವಿಡಿಯೋ ಒಂದು ಚೆನ್ನಾಗಿಯೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ವರ ಕಲ್ಯಾಣ ಮಂಟಪಕ್ಕೆ ಬಲು ಜೋರಾಗಿ ಆಗಮಿಸುತ್ತಿದ್ದಾನೆ. ಅಲ್ಲಿ ಆತನ ಸ್ವಾಗತ ಬೀಗರು ಬಿಜ್ಜರು ಮಾಡದೇ ಸ್ವತಃ ಮದುಮಗಳೆ ಮಾಡಿದ್ದಾಳೆ. ಅದು ಸೂಪರ್ ಆಗಿ ಡಾನ್ಸ್ ಮಾಡುತ್ತ ಇದು ವಿಶೇಷ.
ಮದುಮಗ ಅದ್ದೂರಿಯಾಗಿ ತಯಾರಾಗಿ ಮದುವೆ ಮಂಟಪಕ್ಕೆ ಆಗಮಿಸಲು ಅಲ್ಲಿಯೇ ಎದುರಿಗೆ ವಧು ನೃತ್ಯ ಮಾಡುತ್ತ ತನ್ನ ಭಾವಿ ಪತಿಯ ಸ್ವಾಗತ ತುಂಬಾ ಯೂನೀಕ್ ಸ್ಟೈಲ್ ನಲ್ಲಿ ಮಾಡಿದ್ದಾಳೆ. ವಧು ಡಾನ್ಸ್ ಮಾಡುವಾಗ ಬ್ಯಾಕ್ ಗ್ರೌಂಡ್ ನಲ್ಲಿ ‘ಮೇರೆ ಸೈಯ್ಯಾ ಸೂಪರ್ ಸ್ಟಾರ್’ ಎಂಬ ಹಿಂದಿ ಹಾಡು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ತನ್ನ ಗಂಡನೇ ಎಲ್ಲರಿಗಿಂತ ಮೇರು ಹಾಗೂ ಆತನೇ ನನ್ನ ಜೀವನದ ಸೂಪರ್ ಸ್ಟಾರ್ ಎನ್ನುವ ಹಾಗಿದೆ ವಧುವಿನ ಗತ್ತು.
ವಧು ಈ ನೃತ್ಯ ಮಾಡುವಾಗ ಬಿಟ್ಟುಬಿಡದೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾಳೆ. ಮದುವೆಗೆ ಬಂದ ಸಂಬಂಧಿಕರು ಮೂಕವಿಸ್ಮಿತವಾಗಿ ನೋಡಿಯೇ ನೋಡುತ್ತಿದ್ದಾರೆ. ಅವರಿವರ ಗೋಜಿಗೆ ಹೋಗದೆ ತನ್ನ ಭಾವಿ ಪತಿಯನ್ನು ತಾನೇ ತುಂಬಾ ಯೂನೀಕ್ ಆಗಿ ಬರಮಾಡಿಕೊಂಡಿದ್ದಾಳೆ ಇದು ವಿಶೇಷ.
ವಿಡಿಯೋ ನೋಡಿ
ಪ್ರಸ್ತುತ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ‘ಸರ್ಪ್ರೈಸ್ ವೆಡ್ಡಿಂಗ್ ಡಾನ್ಸ್’ ಹೆಸರಿನ ಚಾನೆಲ್ ನಿಂದ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ 1.1 ಮಿಲಿಯನ್ ಜನರು ವೀಕ್ಷಿಸಿದ್ದಾರೆ.